ಪ್ರಕೃತಿ ತನ್ನೊಳಗೆ ಔಷಧೀಯ ಅಂಶಗಳನ್ನು ಒಳಗೊಂಡಿದೆ : ದೇವಿಪ್ರಸಾದ್

Upayuktha
0

 ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿಬಿಎಸ್‍ಇ ಸಂಸ್ಥೆಯಲ್ಲಿ ಆಟಿದ ಕೂಟ ಆಚರಣೆ

ಪುತ್ತೂರು: ಪ್ರಕೃತಿಯಲ್ಲಿರುವ ಪ್ರತಿಯೊಂದು ಗಿಡಗಳೂ ಔಷಧೀಯ ಸಸ್ಯಗಳೇ ಆಗಿವೆ. ಹಾಗಾಗಿ ಪ್ರತಿಯೊಂದು ಗಿಡದಲ್ಲೂ ಸಕಾರಾತ್ಮಕ ಶಕ್ತಿ ಅಡಗಿದೆ. ಗಿಡಮರಗಳಷ್ಟೇ ಅಲ್ಲದೆ ಇಡಿಯ ಪ್ರಕೃತಿಯೇ ತನ್ನೊಳಗೆ ಔಷಧೀಯ ಅಂಶಗಳನ್ನು ಒಳಗೊಂಡಿದೆ. ಕೂಡುಕುಟುಂಬಗಳಿದ್ದಾಗ ಈ ಪ್ರಕೃತಿ ಆಧಾರಿತ ನಾಟಿ ವೈದ್ಯ ಹೆಚ್ಚು ಪ್ರಚಲಿತದಲ್ಲಿತ್ತು. ಆದರೆ ವಿಭಕ್ತ ಕುಟುಂಬಗಳು ಹೆಚ್ಚಾದಂತೆ ನಾಟಿ ಪರಂಪರೆಯೂ ನಶಿಸಿ ಹೋಗಿದೆ ಎಂದು ನಾಟಿ ವೈದ್ಯ ದೇವಿಪ್ರಸಾದ್ ಹೇಳಿದರು.

ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ವಿದ್ಯಾಲಯ ಸಿಬಿಎಸ್‍ಇ ಸಂಸ್ಥೆಯಲ್ಲಿ ಶನಿವಾರ ಆಯೋಜಿಸಲಾದ ‘ಆಟಿದ ಕೂಟ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. 


ವಿದ್ಯಾಲಯದ ಪ್ರಾಚಾರ್ಯೆ ಮಾಲತಿ ಡಿ ಭಟ್  ಮಾತನಾಡಿ ಮೊದಲು ಆಟಿ ಆಚರಣೆ ಒಂದು ತಿಂಗಳುಗಳ ಕಾಲ ನಡೆಯುತ್ತಿತ್ತು. ಆದರೆ ಈಗ ಅದು ಒಂದೇ ದಿನಕ್ಕೆ ಸೀಮಿತವಾಗಿದೆ. ಅಲ್ಲದೆ ಇಂದು ಈ ಆಚರಣೆಯು ವಿವಿಧ ಖಾದ್ಯಗಳನ್ನು ಸವಿಯುವುದಕ್ಕೆ ಮಾತ್ರ ಆಚರಿಸುವುದು ಎಂಬಂತಾಗಿದೆ. ಆದರೆ ನಮ್ಮ ಪೂರ್ವಜರು ಆಟಿ ಆಚರಣೆಯಲ್ಲಿ ಔಷಧೀಯ ಅಂಶಗಳನ್ನು ಕಂಡುಕೊಂಡಿದ್ದಾರೆ  ಎಂದು ತಿಳಿಸಿದರು.

 ಶಾಲಾ  ಉಪಪ್ರಾಂಶುಪಾಲೆ ಸುಜನಿ ಬೋರ್ಕರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಆದ್ಯ ಎಸ್ ರೈ ಸ್ವಾಗತಿಸಿ, ಮನ್‍ಪ್ರೀತ್ ವಂದಿಸಿದರು.  ವಿದ್ಯಾರ್ಥಿನಿ ಹಿತಾಲಿ ಪಿ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top