ಕೆಎಸ್‌ಸಿಎಎ ಅಧ್ಯಕ್ಷರಾಗಿ ಸಿಎ ಸುಜಾತಾ ಜಿ, ಕಾರ್ಯದರ್ಶಿಯಾಗಿ ಸಿಎ ಸುನಿಲ್ ಭಂಡಾರಿ ಆಯ್ಕೆ

Upayuktha
0

ಬೆಂಗಳೂರು: ಕರ್ನಾಟಕ ರಾಜ್ಯ ಚಾರ್ಟರ್ಡ್ ಅಕೌಂಟೆಂಟ್ಸ್ ಅಸೋಸಿಯೇಶನ್ (KSCAA)ನ 50 ನೇ ವಾರ್ಷಿಕ ಸಾಮಾನ್ಯ ಸಭೆ ಶುಕ್ರವಾರ (ಆ.18ರಂದು) ನಡೆದಿದ್ದು, 2023-24 ನೇ ಸಾಲಿನ ಕಾರ್ಯಕಾರಿ ಸಮಿತಿಯ ಹುದ್ದೆಗೆ ಹದಿಮೂರು (13) ಸದಸ್ಯರನ್ನು ಆಯ್ಕೆ ಮಾಡಲಾಯಿತು. ಸಿಎ ಸುಜಾತಾ ಜಿ ಅವರು 51 ನೇ ಅಧ್ಯಕ್ಷರಾಗಿ ಆಯ್ಕೆಯಾದರು. ಅವರು ಸಂಸ್ಥೆಯ ಪ್ರಥಮ ಮಹಿಳೆ ಅಧ್ಯಕ್ಷರೆಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಕೆಎಸ್‌ಸಿಎಎ ಕಾರ್ಯದರ್ಶಿಯಾಗಿ ಸುನಿಲ್ ಭಂಡಾರಿ ಆಯ್ಕೆಯಾದರು.


ಸಿಎ ವಿಜಯಕುಮಾರ್ ಎಂ ಪಟೇಲ್ ಉಪಾಧ್ಯಕ್ಷರಾಗಿ, ಸಿಎ ಪ್ರವೀಣ್ ಶೆಟ್ಟರ್ ಜಂಟಿ ಕಾರ್ಯದರ್ಶಿಯಾಗಿ ಮತ್ತು ಸಿಎ ಮಹಮ್ಮದ್ ಯೂಸುಫ್ ಕೋಶಾಧಿಕಾರಿಯಾಗಿ ಆಯ್ಕೆಯಾದರು.


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top