ನಿಟ್ಟೆ: ನಾವಿಂದು ತ್ವರಿತಗತಿಯ ಜಗತ್ತಿನಲ್ಲಿ ಕಾರ್ಯನಿರ್ವಹಿಸುತ್ತಿದ್ದೇವೆ. ಅನಿಶ್ಚಿತತೆಗಳು ಈ ಜಗತ್ತಿನ ಕಾರ್ಯಶೈಲಿಯಾಗಿದ್ದು, ಎಂಬಿಎ ಭಾವೀ ಮೇನೇಜರ್ ಗಳು ಈ ಅನಿಶ್ಚಿತತೆಯನ್ನು ಸೂಕ್ತವಾಗಿ ಎದುರಿಸಲು ಪ್ರತಿ ಹಂತದಲ್ಲೂ ಸನ್ನದ್ಧರಾಗಬೇಕು. ಕಲಿಕಾ ಮನೋಭಾವ, ಹೊಸ ಚಿಂತನಾ ಕ್ರಮ, ನಿರಂತರ ಅಧ್ಯಯನ ಮತ್ತು ಶಿಸ್ತಿನಿಂದ ಕಾರ್ಪರೇಟು ಜಗತ್ತಿನಲ್ಲಿ ಯಶಸ್ಸುಗಳಿಸಲು ಸಾಧ್ಯ ಎಂದು ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯ ತಾಂತ್ರಿಕ ಶಿಕ್ಷಣ ವಿಭಾಗದ ಉಪಾಧ್ಯಕ್ಷ ಡಾ. ಗೋಪಾಲ ಮುಗೇರಾಯ ಅಭಿಪ್ರಾಯಪಟ್ಟರು.
ಅವರು ಸಂಸ್ಥೆಯ 26ನೇ ಎಂಬಿಎ ಬ್ಯಾಚ್ ಉದ್ಘಾಟನೆಗೊಳಿಸಿ ಮುಖ್ಯ ಅತಿಥಿ ಸ್ಥಾನದಿಂದ ಮಾತನಾಡುತ್ತಿದ್ದರು. ಇನ್ನೋರ್ವ ಅತಿಥಿ ಸಂಸ್ಥೆಯ (1999 -2001)ನೇ ಬ್ಯಾಚ್ ನ ಎಂಬಿಎ ವಿದ್ಯಾರ್ಥಿ ಪ್ರಸ್ತುತಃ ಟರ್ಟಲ್ ವ್ಯಾಕ್ಸ್ ಇಂಡಿಯಾ ಲಿಮಿಟೆಡ್ ನ ಸಿಇಒ ಸಾಜನ್ ಮುರಳಿ ಮಾತನಾಡುತ್ತಾ, ಕಾರ್ಪರೇಟು ಜಗತ್ತು ಸವಾಲುಗಳನ್ನು ತರುತ್ತದೆ. ಅದನ್ನು ಸೂಕ್ತವಾಗಿ ನಿಭಾಯಿಸಿದಾಗ ಯಶಸ್ಸು ಸಾದ್ಯ ಎಂದರು.
ಸಂಸ್ಥೆಯ ನಿರ್ದೇಶಕರಾದ ಡಾ. ಗುರುರಾಜ್ ಹೆಚ್ ಕಿದಿಯೂರ್ ಸಂಧರ್ಬೋಚಿತವಾಗಿ ಮಾತನಾಡಿದರು. ಪ್ರೊ. ಸರವಣನ್ ಸ್ವಾಗತಿಸಿದರು. ಡಾ. ಸಂಧ್ಯಾ ರಾವ್ ವಂದನಾರ್ಪಣೆಗೈದರು, ಕು. ಶ್ರಾವ್ಯ ಕಾರ್ಯಕ್ರಮ ನಿರ್ವಹಿಸಿದರು, ಕು. ನಿಧಿ ಪ್ರಾರ್ಥಿಸಿದರು, ಡಾ. ಸುಧೀರ್ ರಾಜ್. ಕೆ ಮತ್ತು ಡಾ. ಸುಧೀರ್ ಎಂ ಸಮನ್ವಯಗೊಳಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ