ಮುಲ್ಕಿ: ಮುಲ್ಕಿಯ ಕರ್ನಿರೆ ಗ್ರಾಮದ ಕಾರ್ಣಿಕದ ದೈವ ಕ್ಷೇತ್ರವಾಗಿರುವ ಶ್ರೀ ಜಾರಂದಾಯ ದೈವಕ್ಕೆ ಕರ್ನಿರೆ ಅಗರ ಗುತ್ತು ಜಯಂತಿ ಸಾಲ್ಯಾನ್ ಮತ್ತು ಮಕ್ಕಳಿಂದ ಸೇವಾ ರೂಪದ ಬೆಳ್ಳಿಯ ದಂಡಿಗೆ ಸಮರ್ಪಿಸಲಾಯಿತು.
ಕರ್ನಿರೆ ಗ್ರಾಮದ ಸಮಸ್ತ ಭಕ್ತರಿಂದ ಧರ್ಮ ದೈವ ಜಾರಂದಾಯ ದೈವಕ್ಕೆ ಇದೇ ಸಂದರ್ಭದಲ್ಲಿ ಬಂಗಾರದ ಮುಗವನ್ನು ಸಮರ್ಪಿಸಲಾಯಿತು. ಈ ಸಂದರ್ಭದಲ್ಲಿ ದೈವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಹರೀಶ್ಚಂದ್ರ ಶೆಟ್ಟಿ ಕರ್ನಿರೆ, ಗಂಗಾಧರ ಎನ್ ಅಮೀನ್ ಕರ್ನಿರೆ, ವಾಸುದೇವ ಶೆಟ್ಟಿ ಕರ್ನಿರೆ, ರವೀಂದ್ರ ಶೆಟ್ಟಿ, ಸಂತೋಷ್ ಶೆಟ್ಟಿ, ಗಣೇಶ ಸಾಲಿಯನ್ ಅಗರ ಗುತ್ತು, ಹರೀಶ್ ಸಾಲಿಯನ್ ಅಗರ ಗುತ್ತು, ದಿನೇಶ್ ದೇವಾಡಿಗ, ರಮೇಶ್ ಸಫಲಿಗ, ಮೋಹನ್ ಶೆಟ್ಟಿ, ಮುಕೇಶ್ ಅಮೀನ್, ಪ್ರಭಾಕರ್ ಶೆಟ್ಟಿ, ಗಿರೀಶ್ ಕೊಪ್ಪಳ, ಅಮರ್ ಅಗರಗುತ್ತು, ಪ್ರಭಾಕರ್ ಶೆಟ್ಟಿ, ಅನ್ನು ಪೂಜಾರಿ ಚೇತನ್ ಪೂಜಾರಿ ಮತ್ತು ಸಮಸ್ತ ಗ್ರಾಮಸ್ಥರು ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ದೈವದ ಮೊಗವನ್ನು ಬಂಗಾರದ ಮುಗವನ್ನಾಗಿ ಪರಿವರ್ತಿಸಲು ತನು ಮನ ಧನಗಳಿಂದ ಸಹಕರಿಸಿದ ಸಮಸ್ತ ದೈವಭಕ್ತರಿಗೆ ಶ್ರೀ ಜಾರಂದಾಯ ದೈವಸ್ಥಾನದ ಆಡಳಿತ ಮಂಡಳಿ ಕೃತಜ್ಞತೆ ಸಲ್ಲಿಸಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ