ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಸನಾತನ ಧರ್ಮದ ಅರಿವು ಮುಖ್ಯ: ರಾಘವೇಂದ್ರ ಹೊಳ್ಳ

Upayuktha
0


ಮಂಗಳೂರು: ಭಾರತೀಯ ಸನಾತನ ಸಂಸ್ಕೃತಿಯು ತನ್ನದೇ ಆದ ಮೂಲ ಆದರ್ಶಗಳನ್ನು ಮತ್ತು ತತ್ವಗಳನ್ನು ಯಶಸ್ವಿಯಾಗಿ ರಕ್ಷಿಸುವ ಏಕೈಕ ಸಂಸ್ಕೃತಿಯಾಗಿದೆ ಮಕ್ಕಳ ಸಮಗ್ರ ಅಭಿವೃದ್ಧಿಗೆ ಸನಾತನ ಧರ್ಮದ ಅರಿವು ಮುಖ್ಯ ಎಂದು ಸ್ವಸ್ತಿಕ್ ನ್ಯಾಷನಲ್ ಶಾಲೆ ಉರ್ವ ಸ್ಟೋರ್ ಇದರ ಅಧ್ಯಕ್ಷ ರಾಘವೇಂದ್ರ ಹೊಳ್ಳ ನುಡಿದರು.


ಅವರು ಕೊಟ್ಟಾರದ ಭರತಾಂಜಲಿ ನೃತ್ಯ ಸಂಸ್ಥೆಯು ಕರ್ನಾಟಕ ಗಮಕ ಕಲಾ ಪರಿಷತ್ತು ಬೆಂಗಳೂರು, ಪ್ರಮುಖ ಕಲಾ ಪರಿಷತ್ ಮಂಗಳೂರು ಘಟಕ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ಭರತಾಂಜಲಿ ಸಭಾಭವನದಲ್ಲಿ ಹಮ್ಮಿಕೊಂಡಿರುವ ಗಮಕವಾಚನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.


ನಮ್ಮ ಮಹಾ ಕಾವ್ಯಗಳನ್ನು ಜನರಿಗೆ ಮುಟ್ಟಿಸುವಲ್ಲಿ ಈ ಗಮಕಕಲೆ ವಹಿಸುತ್ತಿರುವ ಪಾತ್ರ ಬಹು ಮಹತ್ವದ್ದಾಗಿದೆ ಎಂದರು.


ಭರತಾಂಜಲಿಯ ನಿರ್ದೇಶಕ ಶ್ರೀಧರ ಹೊಳ್ಳ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ನಿರ್ದೇಶಕಿ ಪ್ರತಿಮಾ ಶ್ರೀಧರ್ ವಂದಿಸಿದರು ಕೊನೆಯಲ್ಲಿ ನಡೆದ ಗಮಕವಾಚನ, ಕವಿ ಅಸೂರಿ ರಾಮಸ್ವಾಮಿ ಅಯ್ಯಂಗಾರ್ ವಿರಚಿತ ಭರತಭಕ್ತಿ ಕಾವ್ಯದ ಪಾದುಕ ಪ್ರಧಾನ ಭಾಗದ ವಾಚನವನ್ನು ಸುರೇಶ್ ರಾವ್ ಅತ್ತೂರು  ಪ್ರವಚನವನ್ನು ವಿದ್ವಾನ್ ಭಾಸ್ಕರ್ ರೈ ಕುಕ್ಕುವಳ್ಳಿ ಯವರು ಅತ್ಯಂತ ಮನೋಜ್ಞವಾಗಿ ನಡೆಸಿಕೊಟ್ಟರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter   

Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top