ಅವಮಾನ ತುಳಿತವಲ್ಲ ಜಯಭೇರಿಯ ಹಾದಿ

Upayuktha
0


ಪ್ರ
ಸ್ತುತ ಜಗದಲ್ಲಿ ಒಬ್ಬರನ್ನೊಬ್ಬರು ಪರಸ್ಪರ ದ್ವೇಷಿಸುವ ಹೀಯಾಳಿಸುವ ಕಡೆಗಣಿಸುವ ಜನರನ್ನೇ ಕಾಣಬಹುದು. ತಮ್ಮ ಸ್ವಾರ್ಥಕ್ಕಾಗಿ ಇತರರನ್ನು ತುಳಿಯುವ ಜನರೇ ಹೆಚ್ಚು. ಆದರೆ ಇಂತಹ ಜನರ ಮಾತಿಗೆ ತಲೆದೂಗದೆ ಸಾಧನೆಯ ಪಥದತ್ತ ಚಲಿಸುವುದೇ ನಮ್ಮ ಸ್ವತ್ತಾಗಬೇಕು.


ನೀವು ಚಿಂತಿಸಬಹುದು, ಯಾಕೆ ನನ್ನನ್ನೇ ಟೀಕಿಸುವರು? ನನ್ನನ್ನೇ ಕೆಡುಗಲು ನೋಡುವರು? ಎಂದು. ಆದರೆ ಉತ್ತರವಿಷ್ಟೇ, ನಿಮಗೆ ಅವಮಾನಗಳ ಸರಮಾಲೆಯನ್ನು ಮೆಟ್ಟಿ ನಿಲ್ಲುವ ಛಲವಿದೆ ಎಂದು. ಇಂದಿನ ತುಳಿತವೇ ನಾಳೆಯ ಹೊಗಳಿಕೆಯಾಗಿ ಮಾರ್ಪಾಡಬೇಕು.ಇಂದು ನಿಮ್ಮನ್ನು ಅವಮಾನಿಸುತ್ತಿರುವರು ಅವರಿಗೆ ಅರಿಯದೆ ತಾನೇ ಸ್ವತಃ ನಿಮಗೆ ಸಾಧನೆಯ ಮೆಟ್ಟಿಲೆಂಬಂತೆ ವೇದಿಕೆಯನ್ನು ಕಲ್ಪಿಸುತ್ತಿದ್ದಾರೆ.


ಜೀವನದಲ್ಲಿ ಒಮ್ಮೆಯಾದರೂ ಅವಮಾನ ಆಗಲೇಬೇಕು. ಅವಮಾನವನ್ನು ಸವಾಲಾಗಿ ಅರಿತು, ಬಿದ್ದ ಜಾಗದಲ್ಲಿ ಎದ್ದು ನಿಂತು,ಗೆದ್ದು ತೋರಿಸಬೇಕು. ಅವಮಾನವಾದಗ ಹುಚ್ಚರಂತೆ ವರ್ತಿಸದೆ ಸಾಧಿಸುವ ಕಿಚ್ಚು ನಮ್ಮಲ್ಲಿ ಮೂಡಬೇಕು. ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅವಮಾನವನ್ನ ಎದುರಿಸಿರುತ್ತಾರೆ. ಅವಮಾನವಾದಾಗ ಕುಗ್ಗದೆ ಧೈರ್ಯದಿ  ಎದುರಿಸಬೇಕು.


ಅವಮಾನವನ್ನು ಮೆಟ್ಟಿ ನಿಂತ ಧೀರನೊಬ್ಬನ ವ್ಯಕ್ತಿತ್ವವನ್ನು ಹೇಳುವೆ. ನಿಕ್ ವುಜಿಸಿಸ್ ಎಂಬ ಆಸ್ಟ್ರೇಲಿಯಾದ ವ್ಯಕ್ತಿಯೊಬ್ಬರು 1992ರಲ್ಲಿ ಜನಿಸಿದರು. ಇವರು ಜನಿಸಿದಾಗಲೇ ತಮ್ಮ ಎರಡು ಕೈ ಹಾಗೂ ಎರಡು ಕಾಲುಗಳನ್ನು ಕಳೆದುಕೊಂಡಿರುತ್ತಾರೆ. ಇವರು ಶಾಲೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಇವರೊಂದಿಗೆ ಕಲಿಯುತ್ತಿದ್ದ ಮಕ್ಕಳು ಗೇಲಿ ಮಾಡುತ್ತಾರೆ ಹಾಗೂ ಇವರನ್ನು ನೋಡಿ ನಗುತ್ತಾರೆ. ಇದರಿಂದ ನೊಂದು ಕುಗ್ಗಿದ ಇವರು, ತನ್ನ ಹತ್ತನೆಯ ವಯಸ್ಸಿನಲ್ಲಿ ಆತ್ಮಹತ್ಯೆಗೆ ಯತ್ನಿಸುತ್ತಾರೆ. ಆದರೆ ಪೋಷಕರು ಸರಿಯಾದ ಸಮಯ ಪ್ರಜ್ಞೆಯಿಂದ ಬದುಕಿಸಿಕೊಳ್ಳುತ್ತಾರೆ. ನಿಕ್ ವುಜಿಸಿಸ್ ಕಣ್ತೆರೆದಾಗ ತನ್ನ ತಾಯಿಯ ಕಣ್ಣೀರು ಇವರಿಗೆ ಪಾಪ ಪ್ರಜ್ಞೆ ಮೂಡಿಸುತ್ತದೆ. ಇತರರ ಮಾತಿಗೆ ತಲೆವೊಡ್ಡಿ ತನ್ನ ಅಮೂಲ್ಯವಾದ ಜೀವನವನ್ನು ಕಳೆದುಕೊಳ್ಳುತ್ತಿದ್ದೆ ಎಂದು ಬೇಸರಗೊಳ್ಳುತ್ತಾರೆ. ಅಂದೇ ನಿರ್ಧರಿಸುತ್ತಾರೆ, ಬೇರೆಯವರಿಗೆ ತಲೆದೂಗದೆ ನನ್ನ ಸಾಧನೆಯತ್ತ ಮುಖಮಾಡಬೇಕು ಎಂದು. ನಂತರ ಇವರು ಉತ್ಸಾಹದಿಂದ ವಿದ್ಯಾಭ್ಯಾಸದಲ್ಲಿ ಮುಂದುವರೆದು,ಪದವಿಯನ್ನು ಪೂರ್ಣಗೊಳಿಸುತ್ತಾರೆ.ನಂತರ ಇವರು ಹಿಂಜರಿಯದೆ, ಪ್ರಯತ್ನಿಸಿದರೆ ಸಾಧ್ಯವಿಲ್ಲ ಎಂಬ ಮಾತು ಈ ಪ್ರಪಂಚದಲ್ಲಿ ಇಲ್ಲವೆಂಬಂತೆ,ತನ್ನ ಎರಡು ಕೈ ಹಾಗೂ ಕಾಲು ಇಲ್ಲದೆಯೇ ಈಜಲು ಕಲಿಯುತ್ತಾರೆ, ಫುಟ್ಬಾಲ್ ಆಡಲು ಕಲಿಯುತ್ತಾರೆ,ಅಷ್ಟಲ್ಲದೆ ತನ್ನ ಕಾಲಿನ ಸಣ್ಣ ಎರಡು ಭಾಗಗಳಿಂದ ಕಂಪ್ಯೂಟರ್ ನಲ್ಲಿ ವೇಗವಾಗಿ ಟೈಪ್ ಮಾಡಲು ಕಲಿಯುತ್ತಾರೆ. ಹಾಗೆಯೇ ಮ್ಯೂಸಿಕ್, ಡ್ರೈವಿಂಗ್ ಇತ್ಯಾದಿಗಳಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. ಹೀಗೆ ದಿನ ಕಳೆದಂತೆ, ಇವರು ಪ್ರಬಲಗೊಳ್ಳುತ್ತಾ ಟಿವಿ ಶೋ ಹಾಗೂ ಶಾಲೆಗಳಲ್ಲಿ ಸ್ಪೂರ್ತಿದಾಯಕ ಮಾತುಗಳನ್ನು ಆಡುತ್ತಾರೆ. ಇಂದು ಇಡೀ ಪ್ರಪಂಚವೇ ತಿರುಗಿ ನೋಡುವ ಮೆರಗು ನೀಡಿದ್ದಾರೆ. ಇವರ ಜೀವನವನ್ನು ಉದಾಹರಣೆಯಾಗಿ ತೆಗೆದುಕೊಂಡರೆ ಅಸಾಧ್ಯ ಎಂಬುದು ಯಾವುದೂ ಇಲ್ಲ ಎಂಬ ಅರಿವು ಮೂಡುತ್ತದೆ.


 "ನಾಯಿ ಬೊಗಳಿದರೆ ದೇವಲೋಕ ಹಾಳಾಗುವುದಿಲ್ಲ" ಎಂಬ ಮಾತಿನಂತೆ ಬದುಕಬೇಕು. ಇಂದು ಅವಮಾನಿಸಿದವರೇ, ಮುಂದೆ ಸನ್ಮಾನಗೊಳಿಸುವರು.

 ಒಮ್ಮೆಯಾದರೂ ಆಗಲೇಬೇಕು ಅವಮಾನ,

 ಆಗ ಸಿಡಿದೇಳುವುದು ಸ್ವಾಭಿಮಾನ...

 ಧೈರ್ಯದಿ  ಹೋರಾಡುವುದು ಜೀವಮಾನ,

 ಪರಿಶ್ರಮ ನೀಡುವುದು ಸನ್ಮಾನ...

 ಅದಕ್ಕಿಂತ ಬೇರೆ ಬೇಕೆ ಬಹುಮಾನ...

 ಅವಮಾನ ಆಗಲಿ ನಿನಗೆ ವರಮಾನ,

 ತುಳಿದವರು ಕಾಣಲಿ ನಿನ್ನ ಮೇಲೆ ಅಭಿಮಾನ...

 ಅವಮಾನ ಎಂದೂ ನಿಮಗೆ ತುಳಿತವಾಗಬಾರದು, ಜಯಭೇರಿಯ ಹಾದಿಯಾಗಲಿ.

                                                                                         


-ಕೀರ್ತನ ಒಕ್ಕಲಿಗ ಬೆಂಬಳೂರು

ದ್ವಿತೀಯ ಬಿ ಬಿ ಎ

ವಿವೇಕಾನಂದ ಕಾಲೇಜು ಪುತ್ತೂರು.

 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter   

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top