ನಡ ಪದವಿ ಪೂರ್ವ ಕಾಲೇಜಿನಲ್ಲಿ ಚಂದ್ರಯಾನ-3 ಯಶಸ್ಸಿಗೆ ಸಂಭ್ರಮಾಚರಣೆ

Upayuktha
0


ಬೆಳ್ತಂಗಡಿ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಸಂಸ್ಥೆಯ ನಿರ್ದೇಶನದಂತೆ ಗುರುವಾರ (ಆ.24) ಸರಕಾರೀ ಪದವಿ ಪೂರ್ವ ಕಾಲೇಜು ನಡ ಇಲ್ಲಿ ಚಂದ್ರಯಾನ-3 ಯಶಸ್ವೀ ಅವತರಣದ ಕುರಿತು ಸಂಭ್ರಮಾಚರಣೆ ನಡೆಸಲಾಯಿತು. ಅಲ್ಲದೆ ಯೋಜನೆಯ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಯಿತು.


ಶಾಲೆಯ ಬೆಳಗಿನ ಪ್ರಾರ್ಥನಾ ಸಭೆಯಲ್ಲಿ ಸಂಸ್ಥೆಯ ಪ್ರಾಂಶುಪಾಲರಾದ ಚಂದ್ರಶೇಖರ್ ಇವರು ಮಾತನಾಡುತ್ತಾ, ವಿಕ್ರಮ್ ಲ್ಯಾಂಡರ್ ಇನ್ನು ಮುಂದೆ ಸಾಧಿಸಲಿರುವ ಕಾರ್ಯಗಳ ಬಗ್ಗೆ ವಿವರಿಸಿದರು. ರೇಂಜರ್ ಲೀಡರ್ ಆಗಿರುವ ಶ್ರೀಮತಿ ವಸಂತಿ ಪಿ. ಇವರು ಅದು ಬಹಳ ನಯವಾಗಿ ಚಂದ್ರನನ್ನು ಸ್ಪರ್ಶಿಸಲು ಮಾಡಿದ ಪೂರ್ವ ಸಿದ್ಧತೆಗಳನ್ನು ವಿವರಿಸಿ, ಭಾರತೀಯರಾದ ನಾವು ಹೆಮ್ಮೆ ಪಡಬೇಕೆಂದು ಕರೆನೀಡಿದರು.


ಈ ಸಂದರ್ಭದಲ್ಲಿ ರೇಂಜರ್ಸ್ ವಿದ್ಯಾರ್ಥಿನಿಯರು "ಚಂದ್ರನ ಮೇಲೆ ಸ್ಪರ್ಶ, ದೇಶದೆಲ್ಲೆಡೆ  ಹರ್ಷ" ಎಂಬ ನಾಮಫಲಕಗಳನ್ನು ಪ್ರದರ್ಶಿಸಿದರು.


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top