"ಶ್ರೀ ಪ್ರಸನ್ನ ವೆಂಕಟದಾಸರು" ಐದನೇ ವಾರದೊಂದಿಗೆ ಮುನ್ನುಗ್ಗುತ್ತಿರುವ ಕನ್ನಡ ಧಾರ್ಮಿಕ ಚಲನಚಿತ್ರ

Chandrashekhara Kulamarva
0

ಬೆಂಗಳೂರು: ಶ್ರೀ ಪ್ರಸನ್ನ ವೆಂಕಟದಾಸರ ಚಲನಚಿತ್ರ ಡಾಕ್ಟರ್ ಮಧುಸೂಧನ್ ಹವಾಲ್ದಾರ್ ಅವರ ನಿರ್ದೇಶನದಲ್ಲಿ ಬಹಳ ಅದ್ಧೂರಿಯಾಗಿ ಮೂಡಿ ಬಂದಿರುವ ಈ ಚಿತ್ರದಲ್ಲಿ ನಟಿಸಿರುವ ದೇವರಾತ್ ಜೋಶಿ, ಪ್ರಭಂಜನ್ ದೇಶಪಾಂಡೆ, ವಿಷ್ಣುತೀರ್ಥ ಜೋಶಿ, ಹಾಗೂ ಲಕ್ಷ್ಮೀ ಶ್ರೇಯಾಂಸಿ, ಬಾಬಿಅಣ್ಣ, ವಿಜಯಾನಂದ ನಾಯಕ್, ಹಾಗೂ ಎಸ್ ಸಾವಂತ್. ಕಥೆ- ಚಿತ್ರಕಥೆ ರೇಖಾ ಕಾಖಂಡಕಿ. ಪ್ರೇಕ್ಷಕರ ಮನಮುಟ್ಟುವಂತೆ ಅಭಿನಯಿಸಿದ ಈ ಚಲನಚಿತ್ರ, ಚಿತ್ರವನ್ನು ವೀಕ್ಷಿಸಿ ಚಿತ್ರಮಂದಿರದಿಂದ ಹೊರಗಡೆ  ಬರುವಾಗ ಪ್ರತಿಯೊಬ್ಬರ ಕಣ್ಣಲ್ಲೂ ಆನಂದದ ಭಾಷ್ಪ ಸುರಿಯುತ್ತದೆ. 


ಪ್ರತಿಯೊಬ್ಬ  ಕಲಾವಿದರೂ  ಮನಮುಟ್ಟುವಂತೆ ಅಭಿನಯಿಸಿದ್ದಾರೆ. ಈ ಚಲನಚಿತ್ರಕ್ಕೆ ಸಂಗೀತವನ್ನು ಶ್ರೀ ವಿಜಯ ಕೃಷ್ಣ ಅವರು ನೀಡಿದ್ದಾರೆ. 


ಈ ಚಲನಚಿತ್ರವನ್ನು ವೀಕ್ಷಿಸಿದ ಶ್ರೀಮತಿ ಸುಧಾ ನಾರಾಯಣ ಮೂರ್ತಿಯವರು ಸಂತೋಷವನ್ನು ವ್ಯಕ್ತಪಡಿಸಿದರು. ಈ ಚಲನಚಿತ್ರಕ್ಕೆ ತಾವುಗಳು ಕುಟುಂಬ ಸಮೇತ ಆಗಮಿಸಿ, ನಮ್ಮ ತಂಡವನ್ನು ಪ್ರೋತ್ಸಾಹಿಸಬೇಕು  ಎಂದು ಚಿತ್ರದ ನಿರ್ದೇಶಕರಾದ ಡಾ. ಮಧುಸೂದನ್ ಹವಾಲ್ದಾರ್ ರವರು ಹಾಗೂ ನಟರಾದ ಪ್ರಭಂಜನ್ ದೇಶಪಾಂಡೆ,  ಹಾಗೂ ಯುವ ನಟ ದೇವರಾತ್ ಜೋಶಿ ಅವರು ವಿನಂತಿಸಿದ್ದಾರೆ.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

Post a Comment

0 Comments
Post a Comment (0)
To Top