ಸೆ. 2 ರಂದು ಮೈಸೂರಿನಲ್ಲಿ ಬ್ರಹ್ಮೀಭೂತ ಶ್ರೀ ವಾಸುದೇವ ಮಹಾರಾಜ್ ಸದ್ಭಾವನಾ ಪ್ರಶಸ್ತಿ ಪ್ರದಾನ

Upayuktha
0

ಆಯೋಜನೆ : ಬ್ರಹ್ಮೀಭೂತ ಶ್ರೀ ವಾಸುದೇವ ಮಹಾರಾಜ್ ಫೌಂಡೇಷನ್ 



ಬೆಂಗಳೂರು: ಬ್ರಹ್ಮೀಭೂತ ಶ್ರೀ ವಾಸುದೇವ ಮಹಾರಾಜ್ ರವರ 16ನೇ ಆರಾಧನೆ  ಅಂಗವಾಗಿ ಮೈಸೂರಿನ ಕೃಷ್ಣಮೂರ್ತಿಪುರಂನ ನಮನ ಕಲಾಮಂಟಪದಲ್ಲಿ ಸಂಜೆ 4.30 ಗಂಟೆಗೆ  ವಿವಿಧ ಕ್ಷೇತ್ರಗಳ ಸಾಧಕರಿಗೆ “ಶ್ರೀ ವಾಸುದೇವ ಮಹಾರಾಜ್ ಸದ್ಭಾವನಾ” ಪ್ರಶಸ್ತಿ ಪ್ರದಾನ ಸಮಾರಂಭ ಕಾರ್ಯಕ್ರಮವನ್ನು ಆಯೋಜಿಸಿದೆ.


ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ ರವರು ಕಾರ್ಯಕ್ರಮ ಉಧ್ಘಾಟಿಸಲಿದ್ದು,  ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್ ಅಧ್ಯಕ್ಷತೆ ವಹಿಸುವ ಸಮಾರಂಭದಲ್ಲಿ ಹಿರಿಯ ಸಮಾಜ ಸೇವಕ  ಡಾ.ಕೆ ರಘುರಾಮ ವಾಜಪೇಯಿ ಹಾಗು ಬೆಂಗಳೂರಿನ ಸಂಸ್ಕøತಿ ಚಿಂತಕ ಡಾ.ಗುರುರಾಜ ಪೋಶೆಟ್ಟಿಹಳ್ಳಿ ಕಾರ್ಯಕ್ರಮದಲ್ಲಿ ಮುಖ್ಯ ಅಥಿಗಳಾಗಿ ಭಾಗವಹಿಸುವರು.



ವಿವಿಧ ಕ್ಷೇತ್ರದ ಗಣ್ಯ ಸಾಧಕರಾದ; ಸಮಾಜ ಸೇವೆ ಎಂ..ಪಿ.ಪ್ರಭುಸ್ವಾಮಿ ; ಪತ್ರಿಕಾರಂಗ – ಅಂಶಿ ಪ್ರಸನ್ನ ಕುಮಾರ್ ; ದತ್ತ ಕ್ರಿಯಾಯೋಗ- ಎಂ.ಮೋಹನ್  , ಸಾಹಿತ್ಯ – ಮಂಜುಳಾ ಉಮೇಶ್ ; ಗಾಯನ- ಸಾಂಬಮೂರ್ತಿ; ಮಣ್ಣಿನ ಸೇವೆ - ಭೂಮಿಪುತ್ರ ಚಂದನ್ ಗೌಡ  ; ಉತ್ತಮ ಸಂಸ್ಥೆ ಜೀವಧಾರ ರಕ್ತನಿಧಿ ಕೇಂದ್ರ ಹಾಗೂ ಸಿನಿಮಾ ಕ್ಷೇತ್ರ - ಸುಪ್ರೀತ್ ರವರಿಗೆ “ಶ್ರೀ ವಾಸುದೇವ ಮಹಾರಾಜ್ ಸದ್ಭಾವನಾ” ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುವುದು ಎಂದು ಆಯೋಜಕರಾದ ವಾಸುದೇವ ಮಹಾರಾಜ್ ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ಎಂ.ವಿ.ನಾಗೇಂದ್ರ ಬಾಬು -ಸಂಚಾಲಕರಾದ ಎನ್.ಅನಂತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ . ವಿವರಗಳಿಗೆ : 9845141050



|| ಪೂಜ್ಯ ವಾಸುದೇವ ಅವಧೂತ ಮಹಾರಾಜರು||

ಕಲಿಯುಗದಿ ಕಣ್ಣಿಗೆ ಕಾಣುವ ಗುರುವರ್ಯರು, ಅವಧೂತರು ಭಕ್ತ ಜನರ ಸಾಮಾಜಿಕ, ಧಾರ್ಮಿಕ ಬದುಕಿನ ಮಾರ್ಗದರ್ಶಕರಾಗುತ್ತಾರೆ. ಉತ್ತಮ ಜೀವನಕ್ಕೆ ಕೆಲವೊಮ್ಮೆ ಇಂತಹವರ ಮಾತು, ನೆರಳು ಅರಿವಿಗೆ ಬಾರದೇ ಕಾರಣವಾಗುತ್ತದೆ.


ಇಂತಹ ಅವಧೂತರ ಸಾಲಿನಲ್ಲಿ ಮಹಾರಾಜ ವಾಸುದೇವರಾವ್ ರವರು ಪ್ರಮುಖರು. ಇವರು ಪೂರ್ವಾಶ್ರಮದಲ್ಲಿ ಎಸ್.ಎನ್. ವಾಸುದೇವರಾವ್‍ರಾಗಿ ನಾಗಪ್ಪ ಹಾಗೂ ಪುಟ್ಟಕ್ಕ ನವರ 3ನೇ ಮಗನಾಗಿ ಮೈಸೂರಿನಲ್ಲಿ 1938 ಮಾರ್ಚ್ 9ರಂದು ಜನಿಸಿದರು. ಇವರ ತಂದೆ ನಾಗಪ್ಪನವರು 1924ರಲ್ಲಿ ಬಿ.ಎ.ಪದವೀದರರಾಗಿ ಮೈಸೂರು ಅರಮನೆಯಲ್ಲಿ ಮುಖ್ತೇಸರ್ (ಫೈನಾನ್ಷಿಯಲ್ ಹೆಡ್) ಆಗಿ ಕಾರ್ಯ ನಿರ್ವಹಿಸಿದ್ದರು ಇವರ ಕುಟುಂಬವು ಈಗಿನ ತ್ಯಾಗರಾಜ ರಸ್ತೆಯಲ್ಲಿರುವ ಸಾಯಿಬಾಬಾ ದೇವಸ್ಥಾನದ ಹಿಂಬದಿಯ ವಠಾರದಲ್ಲಿ ವಾಸವಾಗಿದ್ದಿತು. ಇವರ ತಂದೆ ನಾಗಪ್ಪನವರು ಮಹಾರಾಜರು ಕಲ್ಪಿಸಿಕೊಟ್ಟ ಹಲವಾರು ಸೌಲಭ್ಯಗಳನ್ನು ತ್ಯಜಿಸಿ ಬಾಡಿಗೆ ಮನೆಯಲ್ಲೇ ಅಂತಿಮ ಕಾಲದವರೆಗೂ ಸರಳ ಜೀವನ ನಡೆಸಿದ ದಕ್ಷ ಅಧಿಕಾರಿಯಾಗಿದ್ದರು.


ವಾಸುದೇವರಾವ್‍ರವರು ಡಿ. ಬನುಮಯ್ಯ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ. ತೇರ್ಗಡೆಯಾದರು. ನಂತರ ಶಾರದವಿಲಾಸ ಕಾಲೇಜಿನಲ್ಲಿ ಇಂಟರ್‍ಮೀಡಿಯಟ್ ಹಾಗೂ ಸಂತ ಫಿಲೋಮಿನಾಸ್‍ನಲ್ಲಿ ಬಿ.ಎಸ್ಸಿ., ಮುಗಿಸುವಷ್ಟರಲ್ಲಿ ಬ್ಯಾಂಕಿಂಗ್ ಪರೀಕ್ಷೆಯಲ್ಲಿ ತೇರ್ಗಡೆಗೊಂಡರು. 1961ರಲ್ಲಿ ಅಂದಿನ ಪ್ರತಿಷ್ಠಿತ ಸ್ಟೇಟ್ ಬ್ಯಾಂಕ್ ಆಫ್ ಮೈಸೂರುನಲ್ಲಿ ಸೇವೆಗೆ ಸೇರಿದರು. ನಂತರ ಮುಂದುವರೆದು 1964ರಲ್ಲಿ ಕ್ಯಾತನಹಳ್ಳಿಯಲ್ಲಿ ಮ್ಯಾನೇಜರ್ ಹುದ್ದೆಗೆ ಬಡ್ತಿ ಪಡೆದರು. 1967ರಲ್ಲಿ ಮೈಸೂರಿನ ಮಾರ್ಕೆಟ್ ಬ್ರಾಂಚ್‍ನಲ್ಲಿ ಸೇವೆಯಲ್ಲಿದ್ದಾಗ ಅವರ ಕಾರ್ಯ ವೈಖರಿಯನ್ನು ಮೆಚ್ಚಿ ವಿಶೇಷ ಬಡ್ತಿ ನೀಡಲಾಯಿತು. 1971ರಲ್ಲಿ ಶಿವಮೊಗ್ಗದಲ್ಲಿ, 1974-77ರಲ್ಲಿ ಅರಸೀಕೆರೆ (ಮ್ಯಾನೇಜರ್)ಮತ್ತು  1977-82ರಲ್ಲಿ ಹೆಚ್.ಡಿ. ಕೋಟೆಯಲ್ಲಿ, 1982-88ರಲ್ಲಿ ಹುಬ್ಬಳ್ಳಿಯಲ್ಲಿ ಮ್ಯಾನೇಜರ್ ಆಗಿ ತಮ್ಮ ಸೇವೆ ನಿರ್ವಹಿಸಿದ್ದರು.  1990-98ರವರೆಗೆ ಮೈಸೂರಿನ ಹಲವು ಸ್ಥಳಗಳಲ್ಲಿ (ಎನ್.ಆರ್. ಬ್ರಾಂಚ್, ಕಾರ್ಪೊರೇಷನ್ ಬ್ರಾಂಚ್-2ಬಾರಿ, ಜಯನಗರ ಬ್ರಾಂಚ್-2ಬಾರಿ) ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ, ಕೊನೆಗೆ eóÉೂೀನಲ್ ಆಫೀಸ್‍ನಲ್ಲಿ ಎಂ.ಎಂ.2 ಹುದ್ದೆಯಲ್ಲಿದ್ದಾಗ ನಿವೃತ್ತರಾದರು.  


ವಿವಾಹ: 1970 ರಲ್ಲಿ ಅಂದಿನ ರೈಲ್ವೇ ಸ್ಟೇಷನ್ ಮಾಸ್ಟರ್ ಆಗಿದ್ದ ಎಂ.ಎನ್. ನರಸಿಂಹಮೂರ್ತಿ ಹಾಗೂ ನಾಗರತ್ನಮ್ಮ ಅವರ ಸುಪುತ್ರಿಯಾದ ವಿಜಯಕುಮಾರಿ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇವರು 2 ಪುತ್ರರು ಹಾಗೂ ಒಬ್ಬಳು ಪುತ್ರಿಯನ್ನು ಹೊಂದಿದರು. 


ಆಧ್ಯಾತ್ಮಿಕ ಜೀವನ: ಚಿಕ್ಕವಯಸ್ಸಿನಿಂದಲೇ ಆಧ್ಯಾತ್ಮಿಕ ಒಲವು ಇವರಲ್ಲಿ ಮನೆ ಮಾಡಿತ್ತು. ಅಪಾರವಾದ ಧಾರ್ಮಿಕ ನಂಬಿಕೆ, ದೇವರು, ಭಕ್ತಿ ಇತ್ಯಾದಿ ವಿಚಾರಗಳಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದರು. ತಮ್ಮ ಮನೆಯ ರಸ್ತೆಯಲ್ಲಿದ್ದ ಸಾಯಿ ಮಂದಿರ ಅವರ ಮೆಚ್ಚಿನ ತಾಣವಾಗಿತ್ತು. ಹಾಗಾಗಿ ಸಾಯಿ ಬಾಬಾರವರ ಅನುಗ್ರಹಕ್ಕೆ ಭಾಜನರಾಗಿದ್ದರು.  ಪ್ರತಿದಿನ ಶಾಲೆಗೆ ಹೊರಡುವ ಮುನ್ನ ಸಾಯಿಬಾಬ ದೇವಸ್ಥಾನಕ್ಕೆ ಹೋಗುವುದನ್ನು ತಪ್ಪಿಸುತ್ತಿರಲಿಲ್ಲ. ಪ್ರತಿ ಗುರುವಾರದಂದು ಉಪವಾಸ ಕೈಗೊಂಡು ದೇವಸ್ಥಾನದ ಪ್ರಸಾದವನ್ನು ಸ್ವೀಕರಿಸುತ್ತಿದ್ದರು. “ಬೆಳೆಯುವ ಪೈರು ಮೊಳಕೆಯಲ್ಲೇ” ಎಂಬಂತೆ ಅಂದಿನ ಅರ್ಚಕರ ಮಾರ್ಗದರ್ಶನದಂತೆ ಸಾಯಿ ಚರಿತ್ರೆ ಹಾಗೂ ವಿಷ್ಣು ಸಹಸ್ರನಾಮ ಪ್ರತಿದಿನ ಪಾರಾಯಣ ಮಾಡಲು ಪ್ರಾರಂಭಿಸಿದರು. ಶಾಲೆಯಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ಶಿರಡಿ ಹಾಗೂ ಮಂತ್ರಾಲಯಕ್ಕೆ ಯಾತ್ರೆ ಕೈಗೊಂಡ ನಿದರ್ಶನಗಳಿವೆ.   ಹಿಡಿದ ಕೆಲಸದಲ್ಲಿ ಶ್ರದ್ಧೆ ಭಕ್ತಿ ಹೊಂದಿದ್ದ ಇವರು ಅಂದು ಮನೆಗೆ ಬೇಕಾದ ನೀರನ್ನು ಬಾವಿಯಿಂದ 30-40 ಕೊಡಗಳಷ್ಟು ಸೇದುತ್ತಿದ್ದನ್ನು, ಆ ಕೆಲಸದೊಂದಿಗೆ ವಿಷ್ಣುಸಹಸ್ರ ನಾಮವನ್ನು ಹೇಳುತ್ತಿದ್ದನ್ನು ಕಂಡ ಅಕ್ಕಪಕ್ಕದ ಜನ ಬೆರಗಾಗುತ್ತಿದ್ದರು.   ತಮ್ಮನ್ನು ಸತ್ಸಂಗದಲ್ಲಿ ತೊಡಗಿಸಿಕೊಂಡ ಅವರು ರಾಘವೇಂದ್ರ ಸ್ವಾಮಿಯ ಆರಾಧಕರಾಗಿ ಗುರುಕರುಣೆಗೆ ಪಾತ್ರರಾದರು. 1972ರಲ್ಲಿ ವಿವಾಹವಾದ 3 ವರ್ಷದ ಬಳಿಕ ಚಿತ್ರದುರ್ಗದ ಒಬ್ಬ ಅವಧೂತರ ಪ್ರಭಾವಕ್ಕೆ ಒಳಗಾಗಿ ಅವರಿಂದ ದೀಕ್ಷೆಯನ್ನು ಪಡೆಯುತ್ತಾರೆ.  ಆದರೆ ಸಂಸಾರಿಯಾದ ಅವರು ಸಂಸಾರದಲ್ಲೇ ಇದ್ದರೂ  ಆಧ್ಯಾತ್ಮಿಕ ಜೀವನವನ್ನು ಕಡೆಯತನಕ ನಡೆಸಿಕೊಂಡು ಬರುತ್ತಾರೆ.  ಅಂದಿನಿಂದ ಇವರ ಧಾರ್ಮಿಕ ಸೇವಾ ಯಾತ್ರೆ ಪ್ರಾರಂಭಗೊಂಡು ತಮ್ಮ ಬಿಡುವಿನ ಸಮಯದಲ್ಲೆಲ್ಲಾ ಶಿರಡಿ, ಗಾಣಗಾಪುರ ದತ್ತಾತ್ರೇಯ, ಮಂತ್ರಾಲಯ, ಅರುಣಾಚಲದ ರಮಣ ಆಶ್ರಮ, ಉಡುಪಿ ಅಷ್ಟಮಠ ಇತ್ಯಾದಿ ಯಾತ್ರಾ ಸ್ಥಳಗಳಿಗೆ ಹಲವಾರು ಬಾರಿ ಭೇಟಿ ನೀಡಿರುತ್ತಾರೆ. ಸತತ 6ವರ್ಷಗಳ ಕಾಲ ಕ್ಯಾತನಹಳ್ಳಿ, ಮೈಸೂರಿನಲ್ಲಿ ದತ್ತಾತ್ರೇಯ ಪಾರಾಯಣವನ್ನು ನೆರವೇರಿಸಿ, ಗುರು ದತ್ತರ ಚರಿತ್ರೆ ಹಾಗು ಅವರ ಮಹಿಮೆಯನ್ನು ಭಕ್ತ ಜನರ ಧಾರ್ಮಿಕ ಜ್ಞಾನಕ್ಕೆÉೂದಗಿಸಿದ್ದಾರೆ. ಇವರು ತಮಗೆ ನೀಡಿದ ಅವಧೂತರ ಆಜ್ಞೆಯ ಮೇರೆಗೆ ಶ್ರೀಧರಾಶ್ರಮಕ್ಕೆ ಭೇಟಿ ನೀಡಿ ಅಲ್ಲಿನ ಶ್ರೀಗಳ ದಿವ್ಯ ಸಾನಿಧ್ಯದಿಂದ ಪ್ರಭಾವಿತರಾಗುತ್ತಾರೆ. ತನ್ನ ಕನಸಿನಲ್ಲಿ ಕಾಣಿಸಿಕೊಂಡ ಶ್ರೀಧರಸ್ವಾಮೀಜಿಯವರ, ಗುರುರಾಘವೇಂದ್ರರ ಆಶೀರ್ವಾದ ಪಡೆದೆನೆಂದು ಸಂತೃಪ್ತರಾಗಿದ್ದರು. 

ತಮ್ಮ ನೇರ ನುಡಿಗಳಿಂದ ತಮ್ಮ ವಿಚಾರಗಳನ್ನು ಕಛೇರಿಯಲ್ಲಾಗಲಿ ಮನೆಯಲ್ಲಾಗಲೀ ಸ್ಪಷ್ಟವಾಗಿ ಹೇಳಿಬಿಡುತ್ತಿದ್ದರು.  ಖ್ಯಾತ ಜ್ಯೋತಿಷ್ಯ ತಜ್ಞರಾದ ಶ್ರಿ ಬಿ.ವಿ. ರಾಮನ್ ಅವರಿಂದ ಕಲಿತು ಜ್ಯೋತಿಷ್ಯಶಾಸ್ತ್ರದಲ್ಲಿ ನಿಪುಣತೆಹೊಂದಿದ್ದರು. ಸಾರ್ವಜನಿಕರಿಗೆ ಉಚಿತವಾಗಿ ಜ್ಯೋತಿಷ್ಯ ಶಾಸ್ತ್ರವನ್ನು ಹೇಳುತ್ತಿದ್ದರು. 2000ನೇ ಇಸವಿಯವರೆಗೆ ಭಾರತದ ಹಲವು ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿ ಧಾರ್ಮಿಕ ಸೇವೆಯನ್ನು ಕೈಗೊಂಡಿದ್ದರು. ಜೀವನವಿಡೀ ಆಧ್ಯಾತ್ಮಿಕ ಹಾಗೂ ಸಮಾಜಸೇವೆಯಲ್ಲಿ ತೊಡಗಿ ಧನಾತ್ಮಕ ಚಿಂತನೆ, ಧಾರ್ಮಿಕ ಕಾರ್ಯಗಳಲ್ಲಿ ತೊಡಗಿ ಅಪಾರ ಭಕ್ತರನ್ನು ಹೊಂದಿದ್ದರು. ಅನೇಕರು ಇವರ ಅನುಯಾಯಿಗಳಾಗಿದ್ದರು.


ಜೀವನದ ಕೆಲವು ವಿಶೇಷ ಘಟನೆಗಳು ನಂಬಿಕೆಗೆ ಸಾಕ್ಷಿಗಳಾಗುತ್ತವೆ, ಶ್ರೀಗುರು ದತ್ತತ್ರೇಯ ಸ್ವಾಮಿ ಹಾಗು  ಶ್ರೀ ಗುರುರಾಘವೇಂದ್ರ ಆರಾಧಕರಾಗಿ ಅವಧೂತರೆನಿಸಿದ  ಶ್ರೀವಾಸುದೇವರಾವ್ ಅವರು  2007 ಆಗಸ್ಟ್ 27ರಂದು ಗುರುರಾಘವೇಂದ್ರ ಸ್ವಾಮಿಯವರ 336ನೇ ಆರಾಧನೆ ದಿನದಂದು ಮಧ್ಯಾಹ್ನ 2:20 ಘಂಟೆಗೆ ಇಹಲೋಕ ತ್ಯಜಿಸಿದರು. ಇವರ ತ್ಯಾಗ, ವೈರಾಗ್ಯ, ಪ್ರಾಮಾಣಿಕತೆಗಾಗಿ ಜನರು ಅಂದಿನಿಂದ ಇವರನ್ನು ವಾಸುದೇವ ಮಹಾರಾಜರೆಂದು ಕರೆಯುತ್ತಿದ್ದರು.  


2008ರ ಆಗಸ್ಟ್ 28ರಲ್ಲಿ ಅವರ ಹಲವಾರು ಅನುಯಾಯಿಗಳ ಭಕ್ತರ ಕೋರಿಕೆ ಮೇರೆಗೆ ಮೈಸೂರಿನ ರಾಮಾನುಜ ರಸ್ತೆಯಲ್ಲಿರುವ ಶಿಲ್ಪಕಲಾ ಕೇಂದ್ರದ ಕಲಾವಿದರಿಂದ ಅವರ ಮೂರ್ತಿಯನ್ನು ನಿರ್ಮಿಸಿ ಪ್ರತಿಷ್ಠಾಪಿಸಲಾಯಿತು. ಇವರ ದಿವ್ಯ ಸಾನಿಧ್ಯವಿರುವ ದೇವಸ್ಥಾನವನ್ನು ಕಟ್ಟಲು ಸೂಕ್ತ ಸ್ಥಳವನ್ನು  ಗುರುತಿಸುವ ಪ್ರಯತ್ನ ನಡೆಯುತ್ತಿದೆ ಭಗವಂತನ ಅನುಗ್ರಹ ದೊರೆತು ಈ ಕಾರ್ಯ ಯಶಸ್ವಿಯಾಗಲೆಂಬುದು ಭಕ್ತ ಜನರ ಆಶಯ.


ಇವರ ಅನುಗ್ರಹ ಸಕಲರಿಗೂ ದೊರೆಯಲೆಂಬ ಆಶಯದೊಂದಿಗೆ ಮೈಸೂರಿನ ವಿದ್ಯಾರಣ್ಯ ಪುರದಲ್ಲಿ ಶ್ರೀ ವಾಸುದೇವ ಮಹಾರಾಜ್ ಫೌಂಡೇಷನ್ ಸ್ಥಾಪಿತವಾಗಿದ್ದು, ಪ್ರತೀ ವರ್ಷವು ಇವರ ಆರಾಧನಾ ಮಹೋತ್ಸವ ಕಾರ್ಯಕ್ರಮವನ್ನು ವಿವಿಧ ರೀತಿಯಲ್ಲಿ ವಿಶೇಷವಾಗಿ ಯಶಸ್ವಿಯಾಗಿ ನಡೆಸಲಾಗುತ್ತಿದೆ.   


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top