ಅಮೆಜಾನ್: 13 ಲಕ್ಷ ಉದ್ಯೋಗ ಸೃಷ್ಟಿ

Upayuktha
0

ಮಂಗಳೂರು: ಮಾರಾಟಗಾರರು, ಕುಶಲಕರ್ಮಿಗಳು, ನೇಕಾರರು, ವಿತರಣೆ ಮತ್ತು ಸರಕು ಸಾಗಣೆ ಸೇವಾ ಪಾಲುದಾರರು ಮತ್ತಿತರರನ್ನು ಒಳಗೊಂಡಂತೆ 62 ಲಕ್ಷ 'ಎಂಎಸ್‍ಎಂಇ'ಗಳನ್ನು ಅಮೆಜಾನ್ ಡಿಜಿಟಲೀಕರಿಸಿದೆ. ಸುಮಾರು 8 ಶತಕೋಟಿ ಡಾಲರ್ ಮೊತ್ತದ ಒಟ್ಟಾರೆ ಇ-ಕಾಮರ್ಸ್ ರಫ್ತುಗಳನ್ನು ಕಾರ್ಯಗತಗೊಳಿಸಿದೆ ಮತ್ತು ಭಾರತದಲ್ಲಿ ಇದುವರೆಗೆ 13 ಲಕ್ಷ ನೇರ ಮತ್ತು ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸಿದ್ದಾಗಿ ಅಮೆಜಾನ್ ಪ್ರಕಟಿಸಿದೆ.


ಒಟ್ಟು 1 ಕೋಟಿ (10 ದಶಲಕ್ಷ) 'ಎಂಎಸ್‍ಎಂಇ'ಗಳನ್ನು ಡಿಜಿಟಲೀಕರಣಗೊಳಿಸುವುದಾಗಿ ಅಮೆಜಾನ್ ವಾಗ್ದಾನ ಮಾಡಿದೆ. ಇ-ಕಾಮರ್ಸ್‍ನಲ್ಲಿ 20 ಶತಕೋಟಿ ಡಾಲರ್‍ಗಳಷ್ಟು ಮೊತ್ತದ ಒಟ್ಟಾರೆ ರಫ್ತು ವಹಿವಾಟುಗಳನ್ನು ಕಾರ್ಯಗತಗೊಳಿಸಲು ಮತ್ತು 2025ರ ವೇಳೆಗೆ ಭಾರತದಲ್ಲಿ 20 ಲಕ್ಷ  ಉದ್ಯೋಗಗಳನ್ನು ಸೃಷ್ಟಿಸುವುದಾಗಿ ಅಮೆಜಾನ್ ವಾಗ್ದಾನ ಮಾಡಿತ್ತು. ಈ ಎಲ್ಲ ಭರವಸೆಗಳನ್ನು ಈಡೇರಿಸುವ ಹಾದಿಯಲ್ಲಿ ಅಮೆಜಾನ್ ಸಾಗುತ್ತಿದೆ ಎಂದು ಅಮೆಜಾನ್ ಇಂಡಿಯಾ ಕನ್‍ಸ್ಯೂಮರ್ ಬಿಸಿನೆಸ್‍ನ ಕಂಟ್ರಿ ಮ್ಯಾನೇಜರ್ ಮನೀಶ್ ತಿವಾರಿ ಪ್ರಕಟಣೆಯಲ್ಲಿ ಹೇಳಿದ್ದಾರೆ.


ಡಿಜಿಟಲ್ ಇಂಡಿಯಾ ಅನಾವರಣ ಸಾಧ್ಯತೆಗಳ ಬಗ್ಗೆ ಆಸಕ್ತಿ ಹೊಂದಿರುವ ತಂತ್ರಜ್ಞಾನ ಚಾಲಿತ ನವೋದ್ಯಮಗಳಲ್ಲಿ ಹೂಡಿಕೆ ಮಾಡಲು ಅಮೆಜಾನ್, ಎರಡು ವರ್ಷಗಳ ಹಿಂದೆ 250 ದಶಲಕ್ಷ ಡಾಲರ್ ಮೊತ್ತದ 'ಅಮೆಜಾನ್ ಸಂಭವ್ ವೆಂಚರ್ ಫಂಡ್ ಸ್ಥಾಪಿಸುವುದಾಗಿ ಘೋಷಿಸಿತ್ತು. ಭಾರತದಲ್ಲಿ ಉದ್ಯಮಿಗಳು  ಸಂಶೋಧನೆ ಹಮ್ಮಿಕೊಳ್ಳಲು ಮತ್ತು ಭಾರತದಲ್ಲಿಯೇ ಸರಕುಗಳನ್ನು ತಯಾರಿಸಲು, ನಿರ್ಮಿಸಲು  ಈ ವೆಂಚರ್ ಫಂಡ್ ಅನುವು ಮಾಡಿಕೊಡಲಿದೆ. ಕಳೆದ 24 ತಿಂಗಳುಗಳಲ್ಲಿ ಈ ವೆಂಚರ್ ಫಂಡ್, ಫ್ರೆಷ್‍ಟುಹೋಂ, ಎಕ್ಸ್‍ವೈಎಕ್ಸ್‍ಎಕ್ಸ್, ಹಾಪ್‍ಸ್ಕಾಚ್, ಫಿಟರ್‍ಫ್ಲೈ, ಕ್ಯಾಷಿಫಿ, ಮೈಗ್ಲಾಮ್, ಎಂ1ಎಕ್ಸ್‍ಚೇಂಜ್ ಮತ್ತು ಸ್ಮಾಲ್‍ಕೇಸ್ ಸೇರಿದಂತೆ ಹಲವಾರು ನವೋದ್ಯಮಗಳಲ್ಲಿ ಹೂಡಿಕೆಗಳನ್ನು ಮಾಡಿದೆ ಎಂದು ವಿವರಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter   

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top