ಜವಬ್ದಾರಿಯುತ ನಾಗರಿಕರಿಗೆ ಕಾನೂನಿನ ಅರಿವು ಅತ್ಯಾವಶ್ಯಕ : ಶಶಿರಾಜ್ ಕಾವೂರು

Chandrashekhara Kulamarva
0

         ಆಳ್ವಾಸ್ ಪದವಿಪೂರ್ವ ಕಾಲೇಜಿನಲ್ಲಿ "ಪೋಕ್ಸೋ ಕಾಯ್ದೆ" ಕುರಿತು ಜಾಗೃತಿ ಕಾರ್ಯಕ್ರಮ

ಮೂಡುಬಿದಿರೆ: ಆಳ್ವಾಸ್ ಪದವಿಪೂರ್ವ ಕಾಲೇಜಿನ ಮಕ್ಕಳ ಸುರಕ್ಷಾ ಸಮಿತಿ ವತಿಯಿಂದ ವಿದ್ಯಾರ್ಥಿಗಳಿಗೆ "ಪೋಕ್ಸೋ ಕಾಯ್ದೆ" ಕುರಿತು ಜಾಗೃತಿ ಕಾರ್ಯಕ್ರಮ ವಿದ್ಯಾಗಿರಿಯ ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ  ಬುಧವಾರ ನಡೆಯಿತು.


ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಮಂಗಳೂರಿನ ವಕೀಲ ಶಶಿರಾಜ್ ಕಾವೂರು, ನಾಗರಿಕ ಸಮಾಜದಲ್ಲಿ ಯಾವುದೇ ನಿಯಮವನ್ನು ಉಲ್ಲಂಘಿಸಿದರೆ ಸಮಾಜದಲ್ಲಿ ಅರಾಜಕತೆ ಉಂಟಾಗುತ್ತದೆ. ಜವಬ್ದಾರಿಯುತ ನಾಗರಿಕರಿಗೆ ಕಾನೂನಿನ ಅರಿವು ಅತ್ಯಾವಶ್ಯಕ. ಮಕ್ಕಳು ತಮಗಾದ ದೌರ್ಜನ್ಯವನ್ನು ಬೆಳಕಿಗೆ ತರದೇ ಹೋದಲ್ಲಿ ಅಪರಾಧಿಗಳ ಸಂಖ್ಯೆ ಹೆಚ್ಚಾಗುತ್ತದೆ. ಆದ್ದರಿಂದ ಮಕ್ಕಳ ರಕ್ಷಣೆಯಲ್ಲಿ ಪೋಕ್ಸೊ ಕಾಯ್ದೆ ಪ್ರಮುಖವಾಗಿದೆ ಎಂದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಮೊಹಮ್ಮದ್ ಸದಾಕತ್ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಉತ್ತಮ ಕನಸುಗಳನ್ನು ಕಾಣಬೇಕು. ಆದರೆ ಕನಸುಗಳು ವಿಕೃತ ಮನಸ್ಥಿತಿ ಬೆಳೆಸಬಾರದು. ಶಿಕ್ಷೆಯ ಭಯ ಶಿಕ್ಷೆ ನೀಡುವುದಕ್ಕಿಂತ ಹೆಚ್ಚು ಪರಿಣಾಮಕಾರಿ. ಪೋಕ್ಸೊ ಕಾಯಿದೆ ಅಪರಾಧಿಗಳ ಮನೋಭಾವವನ್ನು ಸರಿಪಡಿಸುವಲ್ಲಿ ಹೆಚ್ಚಿನ ಪಾತ್ರ ವಹಿಸುತ್ತದೆ. ವಿದ್ಯಾರ್ಥಿಗಳು ಶ್ರಮವಹಿಸಿ ಮುನ್ನಡೆದಾಗ ಯಶಸ್ಸು ಪಡೆಯಬಹುದು ಎಂದರು. 

 

ಕಾರ್ಯಕ್ರಮದಲ್ಲಿ ಕಾಲೇಜಿನ ಉಪಪ್ರಾಂಶುಪಾಲೆ ಝಾನ್ಸಿ ಪಿ.ಎನ್, ಮಕ್ಕಳ ಸುರಕ್ಷಾ ಸಮಿತಿಯ ರಕ್ಷಣಾಧಿಕಾರಿ ಮಲ್ಲಿಕಾ ಎಂ. ಆರ್ ಸ್ವಾಗತಿಸಿದರು. ಕನ್ನಡ ವಿಭಾಗದ ಉಪನ್ಯಾಸಕಿ ಡಾ. ದಿವ್ಯಶ್ರೀ ಡಿ ನಿರೂಪಿಸಿದರು, ಶ್ವೇತಾಶ್ರೀ ವಂದಿಸಿದರು.

 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter  

إرسال تعليق

0 تعليقات
إرسال تعليق (0)
To Top