ಅಕ್ಷರ ಆರಾಧನೆ- 19: ಶ್ರೀಕೃಷ್ಣ ಎಲ್ಲರ ಅಂತರ್ಯಾಮಿ

Upayuktha
0

 || ಅಹಿರ್ಬುಧ್ನ್ಯಾಂತರ್ಗತ ಶ್ರೀ ಅನಿರುದ್ಧಾಯ ನಮಃ ||


ಶ್ರೀಕೃಷ್ಣನು ಎಲ್ಲರ ಅಂತರ್ಯಾಮಿಯಾಗಿದ್ದಾನೆ. ಪ್ರಪಂಚಕ್ಕೆಲ್ಲ ಅವನೇ ಒಡೆಯನಾಗಿದ್ದಾನೆ. ಇದನ್ನು ಕೃಷ್ಣನ ಎಲ್ಲ ಭಕ್ತರೂ ಒಪ್ಪಿಕೊಳ್ಳುತ್ತಾರೆ. ಹೀಗೆ ಒಪ್ಪಿಕೊಂಡು ಅವನಲ್ಲಿ ಭಕ್ತಿಯನ್ನು ಮಾಡುವವರೆಲ್ಲರೂ ಉನ್ನತವಾದ ಮುಕ್ತಿಯನ್ನು ಪಡೆಯುತ್ತಾರೆ. ಕೃಷ್ಣನು ಭಗವಂತನೂ ಆಗಿದ್ದಾನೆ. ಸರ್ವಜ್ಞನಾದುದರಿಂದ ಅವನು ಲೋಕದ ಎಲ್ಲ ವ್ಯಾಪಾರವನ್ನು ಮಾಡುತ್ತಾನೆ. 

ದೇವರು ಎಲ್ಲ ಕಡೆಗೂ ಇದ್ದಾನೆಂದರೆ, ಎಲ್ಲ ವಸ್ತುಗಳಲ್ಲೂ ಅಂತರ್ಯಾಮಿಯಾಗಿದ್ದಾನೆ. ಆದ್ದರಿಂದ ಅವನನ್ನು ನಾವು ಹುಡುಕಿಕೊಂಡು ಎಲ್ಲಿಗೂ ಹೋಗಬೇಕಾದ್ದಿಲ್ಲ. ನಮ್ಮ ಹೃದಯದಲ್ಲೇ ಇರುವ ಅವನಿಗೆ ತಿಳಿಯದಂತೆ, ನಾವು ಹುಡುಕಿಕೊಂಡು ಎಲ್ಲಿಗೂ ಹೋಗಬೇಕಾದ್ದಿಲ್ಲ. ನಮ್ಮ ಹೃದಯದಲ್ಲೇ ಇರುವ ಅವನಿಗೆ ತಿಳಿಯದಂತೆ, ನಾವು ಯಾವ ಕೆಲಸವನ್ನೂ ಮಾಡಲು ಸಾಧ್ಯವಿಲ್ಲ. 

ಶ್ರೀಕೃಷ್ಣನಲ್ಲಿ ಅಲ್ಪ ಪ್ರೀತಿಯನ್ನಿಟ್ಟು ಭಜಿಸಲಾರಂಭಿಸಿದರೂ ಅವನು ಪ್ರಸನ್ನನಾಗುತ್ತಾನೆ. ನಮ್ಮ ಇಂದ್ರಿಯಗಳನ್ನೂ, ಮನಸ್ಸನ್ನೂ ಸರಿಯಾದ ದಾರಿಯಲ್ಲಿ ನಡೆಸಿ ನಮಗೆ ಶ್ರೇಯಸ್ಸನ್ನುಂಟು ಮಾಡುತ್ತಾನೆ. ಮನಸ್ಸನ್ನು ಮತ್ತು ಜೀವಾತ್ಮನನ್ನು ಅವನೇ ನಡೆಸುತ್ತಾನೆ. ಅದೇ ರೀತಿ ಚೇತನ ಮತ್ತು ಅಚೇತನ ವಸ್ತುಗಳಲ್ಲೂ ಇದ್ದುಕೊಂಡು ಅವನ್ನೆಲ್ಲ ನಡೆಸುತ್ತಾನೆ. 

ಶ್ರೀಕೃಷ್ಣನು, ಪಂಚಭೂತಗಳು, ಕರ್ಮೇಂದ್ರಿಯಗಳು, ಜ್ಞಾನೇಂದ್ರಿಯಗಳು, ಸೂರ್ಯ, ಚಂದ್ರ, ನಕ್ಷತ್ರಗಳು, ಎಲ್ಲ ಪ್ರಾಣಿಗಳು, ಜೀವಾತ್ಮರು ಮುಂತಾದ ಸಮಸ್ತರಲ್ಲೂ ಇದ್ದುಕೊಂಡು ನಿಯಾಮಕನೆನಿಸಿದ್ದಾನೆ. ಸರ್ವ ಭೂತಾಂತರಾತ್ಮನಾದ ಭಗವಂತನು ಪೃಥ್ವಿ ಜಲ, ಮುಂತಾದವುಗಳನ್ನು ಶರೀರವನ್ನಾಗಿ ಹೊಂದಿದ್ದಾನೆ. ಅವುಗಳ ಒಳಹೊಕ್ಕು ನಿಯಮಿಸುತ್ತಾನೆ. 

ಭಗವಂತನು ತನ್ನ ಅಂತರ್ಯಾಮಿತ್ವವನ್ನು ಭಕ್ತರಿಗೆ ತೋರಿಸಿ, ಅನುಗ್ರಹಿಸಲೆಂದೇ ಅನೇಕ ಅವತಾರಗಳನ್ನು ಎತ್ತಿದ್ದಾನೆ. ಒಂದೊಂದು ಅವತಾರವೂ ಅವನ ಸಾರ್ವಭೌಮತ್ವದ ಹಾಗೂ ವಿಲಕ್ಷಣವಾದ ಗುಣಗಳನ್ನು ತೋರಿಸುತ್ತದೆ. ಅದು ಮತ್ಸ್ಯಾವತಾರ ಆಗಿರಬಹುದು, ಕೂರ್ಮಾವತಾರವಾಗಿರಬಹುದು, ನರಸಿಂಹಾವತಾರವೇ ಆಗಿರಬಹುದು. 

ಇಂಥ ಭಗವಂತನಾದ ಶ್ರೀಕೃಷ್ಣನ ಅಖಂಡ ಸಾರ್ವಭೌಮತ್ವವನ್ನು ಎದುರಿಸಿ ಜಯಿಸಿದವರು ಯಾರೂ ಇಲ್ಲ. ಇಂಥ ಕೃಷ್ಣ ಎಲ್ಲರ ಅಂತರ್ಯಾಮಿಯಾಗಿದ್ದಾನೆ. ನಮ್ಮೆಲ್ಲರಲ್ಲೂ ಅವನಿದ್ದು ಎಲ್ಲರಿಗೂ ಅನುಗ್ರಹಿಸುವನೆಂಬುದರಲ್ಲಿ ಯಾವುದೇ ಸಂಶಯವಿಲ್ಲ. ಸಂಶಯವೂ ಕೂಡದು ! 

ಭಗವದ್ಗೀತೆಯಲ್ಲಿ `ಸಂಭವಾಮಿ ಯುಗೇ ಯುಗೇ ಎಂದರೂ ವರ್ತಮಾನದಲ್ಲಿ ಮತ್ತೊಮ್ಮೆ ಮಾಧವ ಈಗ ತಟ್ಟನೆ ಹುಟ್ಟಿ ಬರಲಾರ. ಕಾರಣ ಕಲಿಯುಗ ಆರಂಭವಾಗಿ 5000 ವರ್ಷಗಳಾಗಿವೆಯಷ್ಟೆ. ಇನ್ನೂ 4,26,994 ವರ್ಷಗಳು ಈ ಯುಗಾಂತ್ಯಕ್ಕೆ ಬಾಕಿ ಇವೆ. ಈ ಹಿನ್ನೆಲೆಯಲ್ಲಿ ಈ ಯುಗದ ಶ್ರೇಷ್ಠ ಜನ್ಮ ನಮ್ಮದು. ಅಂದರೆ ಮಾನವನಷ್ಟು ಶ್ರೇಷ್ಠ ಜೀವಾತ್ಮ ಬೇರ‍್ಯಾವುದು ಇದೆ? ಹಾಗಾಗಿ ಮಾನವನಿಗೆ ಜನ್ಮ ಸಾಫಲ್ಯಗೊಳಿಸಲು ಅದಕ್ಕಿರುವ ಸ್ಫೂರ್ತಿಯೇ ಶ್ರೀಕೃಷ್ಣನ ಬದುಕು.. ಜನ್ಮಾಷ್ಟಮಿಯ ಸಂಭ್ರಮಾಚರಣೆ. ಒಟ್ಟಿನಲ್ಲಿ ಬದುಕನ್ನು ಸದಾ ಜೀವಂತಿಕೆಯಿಂದ, ಲವಲವಿಕೆಯಿಂದ, ಕ್ರಿಯಾಶೀಲಗೊಳಿಸಿ ಜೀವನ್ಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ಮಾತ್ರ ನಿತ್ಯಾನಂದ, ಸಮೃದ್ಧಿ, ಶಾಂತಿ... ಇದಲ್ಲದೆ ಕೃಷ್ಣನ ಸಂದೇಶ? 

ಕತ್ತಲೆಯ ಕೋಣೆಯಲ್ಲಿ ಕುಳಿತ ವ್ಯಕ್ತಿಗೆ ಎಂದಿಗೂ ಜ್ಞಾನರೂಪಿ ಸೂರ್ಯನ ಕಿರಣಗಳು ಸೋಂಕಲಾರದು. ಜ್ಞಾನವನ್ನು ಬಯಸಿ ನಾವು ಗುರುವಿನ ಬಳಿ ಸಾಗಿದಾಗ ಮಾತ್ರ ನಮಗೆ ಶ್ರೇಯಸ್ಸು. ಈ ತತ್ತ್ವವು ನಮಗೆ ಅರಿವಾದಾಗ ಎಲ್ಲೆಲ್ಲೂ ನಮಗೆ ಚೈತನ್ಯವೇ ಕಾಣುತ್ತದೆ.ಯಾವುದಕ್ಕೆ ಆರಂಭವಿದೆಯೋ ಅದಕ್ಕೆ ಅಂತ್ಯ ಇರಲೇಬೇಕು. ಇದೇ ಪರಮ ಸತ್ಯ. ಈ ಜ್ಞಾನವನ್ನು ನಮಗೆ ನೀಡಿದ ಜಗದ್ಗುರುವಾದ ಶ್ರೀ ಕೃಷ್ಣನಿಗೆ ವಂದನೆಗಳು. 

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter   


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top