ಕೊಡವೂರಿನಲ್ಲಿ ಸಾಪ್ತಾಹಿಕ ನೃತ್ಯಸರಣಿ "ನೃತ್ಯಶಂಕರ" ಜು. 10ರಿಂದ

Upayuktha
0

ಉಡುಪಿ: ನೃತ್ಯನಿಕೇತನ ಕೊಡವೂರು ಸಂಸ್ಥೆಯು ಕಳೆದ ಮೂರು ದಶಕಗಳಿಂದ ನೃತ್ಯಕ್ಷೇತ್ರದಲ್ಲಿ ಕಾರ್ಯವೆಸಗುತ್ತಿದ್ದು ಈಗಾಗಲೇ ನೃತ್ಯಸೌರಭ, ನೃತ್ಯಕೌಸ್ತುಭ, ನೃತ್ಯಕುಸುಮ, ನೃತ್ಯವಾತ್ಸಲ್ಯ, ನೃತ್ಯಚಾವಡಿ ಮುಂತಾದ ಅನೇಕ ಸಾಪ್ತಾಹಿಕ ನೃತ್ಯಸರಣಿ ಕಾರ್ಯಕ್ರಮಗಳನ್ನು ನಡೆಸಿದ್ದು ಇದೀಗ ಏಕವ್ಯಕ್ತಿ ನೃತ್ಯಪ್ರದರ್ಶನಕ್ಕಾಗಿ "ನೃತ್ಯಶಂಕರ' ಎನ್ನುವ ಸರಣಿಯನ್ನು ಒಂದುವರುಷದ ಕಾಲ ಕೊಡವೂರಿನ ಮಹತೋಭಾರ ಶ್ರೀ ಶಂಕರನಾರಾಯಣ ದೇವಸ್ಥಾನದ ಜಂಟಿಆಶ್ರಯದಲ್ಲಿ ಪ್ರತೀ ಸೋಮವಾರ ನಡೆಸಲಿದೆ. ಅದರ ಉದ್ಘಾಟನಾ ಕಾರ್ಯಕ್ರಮವು ಜುಲೈ 10ರಂದು ಸಂಜೆ 6 ಕ್ಕೆ ನಡೆಯಲಿದೆ.


ಉದ್ಘಾಟನೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಇದರ ಸಹಾಯಕ ನಿರ್ದೇಶಕರಾಗಿರುವ ಶ್ರೀಮತಿ ಪೂರ್ಣಿಮಾ ಮತ್ತು ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿರುವ ಸಾಧು ಸಾಲ್ಯಾನ್ ರವರು ನಡೆಸಲಿದ್ದಾರೆ.ಮತ್ತು ಉದ್ಘಾಟನಾ ನೃತ್ಯಕಾರ್ಯಕ್ರಮವಾಗಿ ಕು. ಸುರಭಿ ಸುಧೀರ್ ನೃತ್ಯಪ್ರದರ್ಶನ ನೀಡಲಿದ್ದಾಳೆ. ಒಂದು ವರುಷ ಪರ್ಯಂತ ನಡೆಯುವ ಈ ಸಾಪ್ತಾಹಿಕ ಸರಣಿಯಲ್ಲಿ ಜಿಲ್ಲೆ ಹಾಗೂ ರಾಜ್ಯದಾದ್ಯಂತದ ಯುವ ಕಲಾವಿದರು ಭಾಗವಹಿಸಲಿದ್ದಾರೆ.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter    

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top