ತೆಂಕನಿಡಿಯೂರು: ದಿನಾಂಕ 01/07/2023 ರಂದು ಸರಕಾರಿ ಪ್ರಥಮ ದರ್ಜೆ ಕಾಲೇಜು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಇಲ್ಲಿನ ಉದ್ಯೋಗ ಮಾಹಿತಿ ಘಟಕ ಮತ್ತು ಚಾಣಾಕ್ಯ ವಿಶ್ವವಿದ್ಯಾನಿಲಯ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಅಂತಿಮ ಪದವಿ ವಿದ್ಯಾರ್ಥಿಗಳಿಗೆ ಎನ್.ಇ.ಪಿ ಮತ್ತು ಉದ್ಯೋಗ ಮಾಹಿತಿ ಕಾರ್ಯಾಗಾರವನ್ನು ನಡೆಸಲಾಯಿತು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಶ್ರೀ ಸಚಿನ್ ಶೆಟ್ಟಿ ಅವರು ಗ್ರಾಮೀಣ ಪ್ರದೇಶದಿಂದ ಬಂದಿರುವ ಪದವಿ ವಿದ್ಯಾರ್ಥಿಗಳಲ್ಲಿ ಸಾಕಷ್ಟು ಬುದ್ಧಿವಂತಿಕೆ, ದಕ್ಷತೆ ಮತ್ತು ವೃತ್ತಿಪರತೆಯಿದ್ದರೂ ಸಂವಹನ/ಕಮ್ಯುನಿಕೇಶನ್ ಮತ್ತು ವ್ಯಕ್ತಿಗತವಾಗಿ ಕೀಳರಿಮೆ, ಹಿಂಜರಿಕೆ ಇತ್ಯಾದಿ ನ್ಯೂನತೆಗಳಿದ್ದು, ಇವುಗಳು ಅವರು ಉನ್ನತ ಸ್ಥಾನಕ್ಕೆ ತಲುಪುವಲ್ಲಿ ದೊಡ್ಡ ಸವಾಲಾಗಿ ಪರಿಣಮಿಸಿವೆ, ಆದ್ದರಿಂದ ಇಂದಿನ ಕಾರ್ಪೋರೇಟ್ ಕ್ಷೇತ್ರದಲ್ಲಿ ತಮ್ಮ ಸಾಮಥ್ರ್ಯಕ್ಕೆ ಸೂಕ್ತವಾದ ಸ್ಥಾನವನ್ನು/ಹುದ್ದೆಯನ್ನು ಪಡೆಯುವಲ್ಲಿ ವ್ಯಕ್ತಿತ್ವ ನಿರ್ಮಾಣಕ್ಕೆ ಪೂರಕವಾದ ಕೌಶಲಗಳನ್ನು ಬೆಳೆಸಿಕೊಳ್ಳುವ ಅಗತ್ಯತೆಯನ್ನು ವಿದ್ಯಾರ್ಥಿಗಳಿಗೆ ತಿಳಿಸುತ್ತಾ ಗುಂಪು ಚರ್ಚೆ, ಬಯೋಡಾಟಾ ಬರವಣಿಗೆ, ಉದ್ಯೋಗ ಕೌಶಲಗಳು ಇತ್ಯಾದಿಗಳ ಕುರಿತಾಗಿ ಮಾರ್ಗದರ್ಶನ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಸುರೇಶ್‍ರೈ ಕೆ. ಅವರು ಹೊಸಕಾಲಕ್ಕೆ ತಕ್ಕಂತೆ ವಿದ್ಯಾರ್ಥಿಗಳು ನವೀನ ಕೌಶಲ್ಯಗಳನ್ನು ವೃದ್ಧಿಸಿಕೊಳ್ಳುವ ಮೂಲಕ ಆಧುನಿಕ ಜಗತ್ತಿಗೆ ಬೇಕಾದ ಉದ್ಯೋಗವನ್ನು ಪಡೆದುಕೊಳ್ಳಬಹುದೆಂದು ತಿಳಿಹೇಳಿದರು.
ಐಕ್ಯೂಎಸಿ ಸಂಚಾಲಕರಾದ ಡಾ. ಮೇವಿ ಮಿರಾಂದ, ಉದ್ಯೋಗ ಮಾಹಿತಿ ಘಟಕದ ಸಂಚಾಲಕರುಗಳಾದ ಶ್ರೀ ಉಮೇಶ್ ಪೈ ಹಾಗೂ ಡಾ. ಹೆಚ್.ಕೆ. ವೆಂಕಟೇಶ, ವಾಣಿಜ್ಯಶಾಸ್ತ್ರ ವಿಭಾಗದ ಶ್ರೀಮತಿ ಬಿಂದು, ಡಾ. ರಘುನಾಯ್ಕ್, ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥರಾದ ಶ್ರೀ ಪ್ರಶಾಂತ್, ಗ್ರಂಥಪಾಲಕರಾದ ಶ್ರೀ ಕೃಷ್ಣ ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ