TATA AIA ಸ್ಮಾಲ್ ಕ್ಯಾಪ್ ಡಿಸ್ಕವರಿ ಫಂಡ್ ಆರಂಭ

Upayuktha
0

ಮಂಗಳೂರು: ಭಾರತದ ಪ್ರಮುಖ ಜೀವ ವಿಮಾ ಸಂಸ್ಥೆಗಳಲ್ಲಿ ಒಂದಾದ ಟಾಟಾ ಎಐಎ ಲೈಫ್ ಇನ್ಶುರೆನ್ಸ್ (ಟಾಟಾ ಎಐಎ) ತನ್ನ ಮೊದಲ ವಿಶೇಷ ಸ್ಮಾಲ್ ಕ್ಯಾಪ್ ಫಂಡ್ ಟಾಟಾ ಎಐಎ ಸ್ಮಾಲ್ ಕ್ಯಾಪ್ ಡಿಸ್ಕವರಿ ಫಂಡ್ ಅನ್ನು ಪ್ರಾರಂಭಿಸಿದೆ.


ಹೊಸ ಫಂಡ್ ಪಾಲಿಸಿದಾರರಿಗೆ ಸ್ಮಾಲ್- ಕ್ಯಾಪ್ ಮಾರುಕಟ್ಟೆ ಬಂಡವಾಳೀಕರಣದ ಷೇರುಗಳಲ್ಲಿ ಹೂಡಿಕೆ ಮಾಡುವ ಮೂಲಕ ದೀರ್ಘಾವಧಿಯಲ್ಲಿ ಬಂಡವಾಳ ಹೆಚ್ಚುವ ಅವಕಾಶವನ್ನು ನೀಡುತ್ತದೆ. ಹೊಸ ಫಂಡ್ ಆಫರಿಂಗ್ (ಎನ್‍ಎಫ್‍ಓ) ಗವಾಕ್ಷಿ 2023ರ ಜುಲೈ 10 ರಿಂದ ಜುಲೈ 24 ರವರೆಗೆ ತೆರೆದಿರುತ್ತದೆ. ಪ್ರತಿ ಯೂನಿಟ್‍ಗೆ ರೂ. 10 ಬೆಲೆ ನಿಗದಿಪಡಿಸಲಾಗಿದ್ದು, ಎನ್‍ಎಫ್‍ಓ ಅವಧಿಯಲ್ಲಿ ಮಾತ್ರ ಇದು ಅನ್ವಯಿಸುತ್ತದೆ ಎಂದು ಕಾರ್ಯನಿರ್ವಾಹಕ ಉಪಾಧ್ಯಕ್ಷ ಮತ್ತು ಮುಖ್ಯ ಹೂಡಿಕೆ ಅಧಿಕಾರಿ ಹರ್ಷದ್ ಪಾಟೀಲ್ ಪ್ರಕಟಣೆಯಲ್ಲಿ ಹೇಳಿದ್ದಾರೆ.


ಟಾಟಾ ಎಐಎ ಸ್ಮಾಲ್ ಕ್ಯಾಪ್ ಡಿಸ್ಕವರಿ ಫಂಡ್ ಪ್ರಾಥಮಿಕವಾಗಿ (65% ವರೆಗೆ) ದೀರ್ಘಾವಧಿಯ ಸಂಪತ್ತು ಸೃಷ್ಟಿಗೆ ಅವಕಾಶಗಳನ್ನು ನೀಡುವ ಸಣ್ಣ- ಕ್ಯಾಪ್ ಕಂಪನಿಗಳಲ್ಲಿ ಹೂಡಿಕೆ ಮಾಡುತ್ತದೆ. ಸಣ್ಣ ಕಂಪನಿಗಳಾದರೂ ಮುಂದೆ ಮಧ್ಯಮ ಮತ್ತು ದೊಡ್ಡ ಕ್ಯಾಪ್ ಕಂಪನಿಗಳಾಗಿ ಬೆಳೆಯುವ ಸಾಮಥ್ರ್ಯವನ್ನು ಹೊಂದಿರುವ ಗುಣಮಟ್ಟದ ವ್ಯವಹಾರಗಳಲ್ಲಿ ಹೂಡಿಕೆ ಮಾಡಲು ಹೂಡಿಕೆದಾರರಿಗೆ ನಿಧಿಯು ಅವಕಾಶವನ್ನು ಒದಗಿಸುತ್ತದೆ ಎಂದು ವಿವರಿಸಿದ್ದಾರೆ.


ಟಾಟಾ ಎಐಎ ಪಾಲಿಸಿದಾರರು ಕಂಪನಿಯ ಯುಲಿಪ್ ಕೊಡುಗೆಗಳು, ಫಾರ್ಚೂನ್ ಪ್ರೊ, ವೆಲ್ತ್ ಪ್ರೊ, ಫಾರ್ಚೂನ್ ಮ್ಯಾಕ್ಸಿಮಾ, ವೆಲ್ತ್ ಮ್ಯಾಕ್ಸಿಮಾ, ಐ ಸಿಸ್ಟಮ್ಯಾಟಿಕ್ ಇನ್ಶುರೆನ್ಸ್ ಪ್ಲಾನ್ ಮತ್ತು ಸ್ಮಾರ್ಟ್ ಸಂಪೂರ್ಣ ರಕ್ಷಾ ಪ್ಲಸ್ ಮೂಲಕ ಈ ನಿಧಿಯಲ್ಲಿ ಹೂಡಿಕೆ ಮಾಡಬಹುದು ಎಂದು ಪ್ರಕಟಣೆ ತಿಳಿಸಿದೆ.

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top