ಉತ್ತಮ ವ್ಯಕಿತ್ವ ಸ್ಕೌಟ್ ಪಯಣದಿಂದ ನಿರ್ಮಾಣ - ರೆ.ಫಾ.ಅಶೋಕ್‍ ರಾಯನ್‍ಕ್ರಾಸ್ತಾ

Upayuktha
0

    ಫಿಲೋಮಿನಾ ಪಿ.ಯು ಕಾಲೇಜಿನ ರೋವರ್ಸ್‍ರೇಂಜರ್ಸ್‍ ಘಟಕ : ಓರಿಯೆಂಟೇಷನ್‍ ಕಾರ್ಯಕ್ರಮ

       ಸ್ಕೌಟ್ ನಿಂದ ಸುಂದರ  ಬದುಕು ಸಾಧ್ಯ - ಹರ್ಷದ್‍ಇಸ್ಮಾಯಿಲ್  

ಪುತ್ತೂರು: ಸುಂದರ ಬದುಕು ಹಾಗೂ ಆರೋಗ್ಯಕರ ಸಮಾಜಕಟ್ಟುವಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್‍ನ ಶಿಸ್ತು ಮತ್ತು ಕೌಶಲ್ಯದ ಪಾತ್ರ ಮಹತ್ವದ್ದಾಗಿದೆ ಎಂದು ರೋವರ್ ಸ್ಕೌಟ್ ನಾಯಕ  ಹರ್ಷದ್‍ ಇಸ್ಮಾಯಿಲ್ ನುಡಿದರು.


ಅವರು ಸಂತ ಫಿಲೋಮಿನಾ ಪದವಿಪೂರ್ವ ಕಾಲೇಜಿನಲ್ಲಿ ಜುಲೈ 22ರಂದು ನಡೆದ ರೋವರ್ಸ್‍ ರೇಂಜರ್ಸ್‍ ಘಟಕದ ಓರಿಯೆಂಟೇಷನ್‍ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಮಕ್ಕಳು ನಾಲ್ಕು ಗೋಡೆಗಳ ನಡುವೆ ಓದು-ಬರಹ ಕಲಿಯುವುದರ ಜತೆಗೆ ನಿಸರ್ಗದ ಮಡಿಲಲ್ಲಿ ಒಂದಾಗಿ ಬೆರೆತು, ಸಮನ್ವಯದಿಂದ ಬಾಳಲು ಕಲಿಯುವಂತೆ ಪ್ರೇರಿಸುವ ಕಾರ್ಯಕ್ರಮ ಹೆಚ್ಚಾಗಿ ನಡೆಯಬೇಕಿದೆ. ಸ್ಕೌಟ್ಸ್ ಮತ್ತು ಗೈಡ್ಸ್‍ನಿಂದ ಮಕ್ಕಳಲ್ಲಿ ಪರಿಸರ ಪ್ರಜ್ಞೆ, ಸಂಸ್ಕೃತಿಯ ಅರಿವನ್ನು ಮೂಡಿಸುವ ಕೆಲಸ ಹೆಚ್ಚಾಗಬೇಕು. ಪರಿಸರ ಜಾಗೃತಿ, ಸ್ವಚ್ಛತೆ ಅತ್ಯಂತ ಮಹತ್ವದ್ದು, ಪರಿಸರ ಉಳಿಸಿ-ಬೆಳೆಸುವ ಕಾರ್ಯವನ್ನು ಮಕ್ಕಳಲ್ಲಿ ತುಂಬಬೇಕು. ಆರೋಗ್ಯಕ್ಕೆ ಯೋಗ ಅತ್ಯವಶ್ಯಕವಾಗಿದ್ದು, ಯೋಗದ ಪರಿಕಲ್ಪನೆಯನ್ನೂ ಮಕ್ಕಳಲ್ಲಿ ಮೂಡಿಸಬೇಕು ಎಂದು ಹೇಳಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ  ಪ್ರಾಚಾರ್ಯರಾದ ರೆ. ಫಾ.ಅಶೋಕ್‍ ರಾಯನ್‍ಕ್ರಾಸ್ತಾ ಮಾತನಾಡಿ  ಮುಂದಿನ ಪೀಳಿಗೆಗೆ ಉತ್ತಮ ನಾಗರಿಕರನ್ನು ನಿರ್ಮಾಣ ಮಾಡುವ ಕೆಲಸ ಸ್ಕೌಟ್ಸ್ ಮತ್ತು ಗೈಡ್ಸ್‍ನಿಂದಾಗಬೇಕು. ಮನುಷ್ಯನಿಗೆ ಸಂತೋಷ ಮತ್ತು ಆನಂದ ಸ್ಕೌಟ್ಸ್ ಮತ್ತು ಗೈಡ್ಸ್‍ನಿಂದ ಸಿಗಲು ಸಾಧ್ಯವಿದೆ. ಯುವಕರು, ಪೂರ್ಣ, ದೈಹಿಕ, ಬೌದ್ಧಿಕ, ಸಾಮಾಜಿಕ, ದೈವಿಕವಾಗಿ ಪೂರ್ಣ ಪ್ರಮಾಣದ ಉನ್ನತಿಯನ್ನು ಸಾಧಿಸುವುದು, ಅಲ್ಲದೆ ಪ್ರಾದೇಶಿಕ, ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದ ಹೊಣೆಗಾರಿಕೆಯುಳ್ಳ ವ್ಯಕ್ತಿಗಳಾಗಿ ರೂಪುಗೊಳ್ಳುವಂತೆ ಸ್ಕೌಟ್ ಮತ್ತು ಗೈಡ್‍ ಘಟಕವು ಮಾಡುತ್ತದೆ ಎಂದರು. ಉಪನ್ಯಾಸಕ ಮತ್ತು ರೋವರ್ ಸ್ಕೌಟ್ ನಾಯಕ ಚಂದ್ರಾಕ್ಷ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಉಪನ್ಯಾಸಕ ಮತ್ತುರೋವರ್ ಸ್ಕೌಟ್ ನಾಯಕ  ಶರತ್ ಆಳ್ವ ಚನಿಲ, ದೈಹಿಕ ಶಿಕ್ಷಣ ನಿರ್ದೇಶಕ ರಾಜೇಶ್ ಮೂಲ್ಯ, ಉಪನ್ಯಾಸಕಿ ಮತ್ತು ರೇಂಜರ್ ನಾಯಕಿ ಪೂರ್ಣಿಮಾ ಡಿ. ಎಸ್ ಉಪಸ್ಥಿತರಿದ್ದರು.


ರೇಂಜರ್‍ ದೇವಿಕಾ ಪೈ ಕಾರ್ಯಕ್ರಮ ನಿರೂಪಿಸಿದರು  ರೋವರ್‍‌ಗಳಾದ  ವಿಯೋನ್‍ ಕ್ಯಾರೊಲ್ ಮೊರಸ್ ಸ್ವಾಗತಿಸಿ, ನೂತನ್ ವಂದಿಸಿದರು. ಎಲ್ಲಾ ರೋವರ್ಸ್ ಮತ್ತು ರೇಂಜರ್ಸ್‌ಗಳು ಸ್ಕೌಟ್ ಪ್ರಾರ್ಥನಾ ಗೀತೆಯನ್ನು ಹಾಡಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top