ಬೆಂಗಳೂರು: ಶ್ರೀ ಸಾಯಿ ಕಲ್ಯಾಣ ಮಂಟಪ ಬಾಗಲಗುಂಟೆ ಬೆಂಗಳೂರು, ಕರ್ನಾಟಕ ಜನಸ್ಪಂದನ ಟ್ರಸ್ಟ್ (ರಿ) ಕರ್ನಾಟಕ ರಾಜ್ಯ ಸಂಸ್ಥೆ ಟಿ.ದಾಸರಹಳ್ಳಿ ಬೆಂಗಳೂರು, ಹನುಮಂತಪ್ಪ ಎಸ್ ಮೇಡೆಗಾರ ರಾಜ್ಯಾಧ್ಯಕ್ಷರು ಇವರು ಹಮ್ಮಿಕೊಂಡ ಟ್ರಸ್ಟಿನ 6ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ನೂತನ ಶಾಸಕರಿಗೆ ಅಭಿನಂದನಾ ಸಮಾರಂಭ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಿಜಯಪುರ ಜಿಲ್ಲೆಯ ಶ್ರೀ ಶ್ರೀ ಶ್ರೀ ಪರಮಪೂಜ್ಯ ಪ್ರಭುಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಗಣ್ಯ ವ್ಯಕ್ತಿಗಳಾದ ಶಾಸಕರಾದ ಎಸ್ ಮುನಿರಾಜು, ಶಿಕಾರಿಪುರ ಕ್ಷೇತ್ರದ ಶಾಸಕ ಬಿ.ವೈ.ವಿಜಯೇಂದ್ರ, ದಾಸರಹಳ್ಳಿ ಕ್ಷೇತ್ರದ ಕನ್ನಡ ಜನಪದ ಪರಿಷತ್ತಿನ ಅಧ್ಯಕ್ಷರಾದ ವೈ.ಬಿ.ಎಚ್ ಜಯದೇವ್, ಇವರ ಎಲ್ಲರ ಸಮ್ಮುಖದಲ್ಲಿ "ಪೂಜಾ ಲಕ್ಷ್ಮಣ್ ಗೌಡ" ಇವರಿಗೆ ಜನಸ್ಪಂದನ ಕಲಾಸಿರಿ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಇವರು ಮಾಜಿ ಸೈನಿಕರಾದ ಲಕ್ಷ್ಮಣ ಗೌಡ ಬೇರ್ಯ ಮತ್ತು ರಾಜಶ್ರೀ ದಂಪತಿಗಳ ಮೂರನೇ ಮಗಳಾಗಿ ತುಳುನಾಡಿನಲ್ಲಿ ಜನಿಸಿದ ಇವರು ಸುಳ್ಯ ತಾಲೂಕಿನ ಪಂಜ ಗ್ರಾಮದ ಬೇರ್ಯದಲ್ಲಿ ಹುಟ್ಟೂರಿನಲ್ಲಿಯೇ ಪ್ರಾಥಮಿಕ ಶಿಕ್ಷಣ ಮುಗಿಸಿದ ಇವರು ಪ್ರೌಢ ಶಿಕ್ಷಣವನ್ನು ವಿದ್ಯಾಬೋದಿನಿ ಶಾಲೆ ಬಾಳಿಲದಲ್ಲಿ ಕಲಿತರು.
ಪಿಯುಸಿ ವಿದ್ಯಾಭ್ಯಾಸವನ್ನು ಶಾರದಾ ಮಹಿಳಾ ಕಾಲೇಜ್ ಸುಳ್ಯ, ಪದವಿ ಶಿಕ್ಷಣವನ್ನು ಪ್ರಥಮ ದರ್ಜೆ ಕಾಲೇಜ್ ಕೋಡಿಯಾಲ್‌ಬೈಲ್ ಸುಳ್ಯದಲ್ಲಿ ಕಲಿತು ಪಿಜಿಡಿಸಿಸಿ ಕೋರ್ಸ್ ಅನ್ನು ಪೂರ್ಣಗೊಳಿಸಿರುತ್ತಾರೆ. ಅಭಿನಯವಲ್ಲದೇ ಇವರು ರೂಪದರ್ಶಿ ಯಾಗಿಯೂ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ಜೆಸಿಐ ಸಪ್ತಾಹ ಬೆಳ್ತಂಗಡಿ ಆಯೋಜಿಸಿದ ಸ್ಪರ್ಧೆಯಲ್ಲಿ ಮಿಸ್ ತುಳುನಾಡ್ ರನ್ನರ್ ಆಪ್ ಪ್ರಶಸ್ತಿ, MRS ಇಂಡಿಯಾ ಕರ್ನಾಟಕ ಟ್ರೈನರ್ ಮಂಗಳೂರು 2022-23 ಆಗಿ ಸೆಲೆಕ್ಟ್ ಆಗಿರುತ್ತಾರೆ.
ರೂಪದರ್ಶಿಯಾದ ಇವರು ಕೆಲವೊಂದು ಸಂಸ್ಥೆಯ ಜಾಹಿರಾತುಗಳಲ್ಲಿ ನಟನೆ ಮತ್ತು ಛಾಯಾಗ್ರಹಣಕ್ಕೆ ಮೆರುಗು ನೀಡಿದ್ದಾರೆ. ಇವರು ಪಿಲಿ ಎಂಬ ತುಳು ಮೂವಿ ಪರದೆಯಲ್ಲಿ ನಟನೆ ಮಾಡಿ ಸೈ ಎನಿಸಿಕೊಂಡಿದ್ದಾರೆ. ಇವರು ಉತ್ತಮ ನಿರೂಪಕಿಯೂ ಹೌದು. ಮಾತೇ ಮುತ್ತು ಮಾತೇ ಮಾಣಿಕ್ಯ ಎಂಬ ತತ್ವದಡಿಯಲ್ಲಿ ತನ್ನ ಮಾತಿನ ಸೊಬಗನ್ನು ಹತ್ತೂರ ಪಸರಿಸುತ್ತಾ ಬರುತ್ತಿದ್ದು ಪ್ರಸ್ತುತ ಕೆಲವು ಚಾನೆಲ್‌ಗಳಲ್ಲಿ ನಿರೂಪಕಿಯಾಗಿದ್ದಾರೆ.
ಸಾಧನೆಯಿಂದ ಇವರು ತನ್ನ ಮನೆಯವರಿಗೆ ಮತ್ತು ಊರಿಗೆ ಹೆಸರು ಮತ್ತು ಕೀರ್ತಿಯನ್ನು ತರುತ್ತಿದ್ದಾರೆ. ಇವರ ಸಾಧನೆಯನ್ನು ಮನಗಂಡು ಊರ ಪರವೂರ ಸಂಘ ಸಂಸ್ಥೆಗಳು ಇವರನ್ನು ಗೌರವಿಸಿದ್ದು, ಪ್ರಮುಖವಾಗಿ 2022ರಲ್ಲಿ ಕರ್ನಾಟಕ ಸಾಂಸ್ಕೃತಿಕ ಪರಿಷತ್ತು ಹಾಗೂ ಶಕ್ತಿ ಸಂಸ್ಥೆ (ರಿ) ಬೆಂಗಳೂರು ಇವರು ಆಯೋಜಿಸಿದ ಕರ್ನಾಟಕ ವೈಭವ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದರು.
ಪೂಜಾ ಅವರಿಗೆ ಸಿನಿಮಾ ಕ್ಷೇತ್ರದ ಬಹುದೊಡ್ಡ ನಟಿಯಾಗಬೇಕೆಂಬ ಹಂಬಲವಿದೆ. ಇವರ ಎಲ್ಲ ಕನಸುಗಳು ಇವರ ಪ್ರಯತ್ನಕ್ಕೆ ಪ್ರತಿಫಲ ಸಿಗಲಿ ಅನ್ನುವ ಆಶಯ ನಮ್ಮೆಲ್ಲರದು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ