ಮಂಗಳೂರು: ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಟಾನ (ರಿ) ಹಾಗೂ ಸಿರಿ ತೋಟಗಾರಿಕೆ ಸಂಘ (ರಿ.)ಬೆಂದೂರ್ ವೆಲ್ ಇವರ ಜಂಟಿ ಸಹಯೋಗದಲ್ಲಿ ವಿಜಯ ಟವರ್ರ್ಸ್ ,ಬ್ಯಾಂಕ್ ಆಫ್ ಬರೋಡಾದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ "ತಾರಸಿ ತೋಟ,ಕೈತೋಟ ಮತ್ತು ಗ್ರಾಫ್ಟಿಂಗ್" ಕುರಿತು ಉಚಿತವಾಗಿ ತರಬೇತಿ ಕಾರ್ಯಕ್ರಮವನ್ನು ಬ್ಯಾಂಕ್ ಆಫ್ ಬರೋಡಾದ ಪ್ರಧಾನ ವ್ಯವಸ್ಥಾಪಕಿ ಹಾಗೂ ಮಂಗಳೂರು ವಲಯದ ಮುಖ್ಯಸ್ಥರಾದ ಗಾಯತ್ರಿ ಆರ್ ಶನಿವಾರ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು,ಮಾರುಕಟ್ಟೆಯಲ್ಲಿ ದೊರೆಯುವ ತರಕಾರಿ ಗಳಿಂದ ಮನೆಯ ಕೈ ತೋಟ,ತಾರಸಿ ತೋಟದಲ್ಲಿ ಸಾವಯವ ತರಕಾರಿಗಳನ್ನು ಬೆಳೆದು ಕೀಟನಾಶಕ ಗಳಿಂದ ಮುಕ್ತವಾದ ತಾಜ ತರಕಾರಿಯ ಜೊತೆಗೆ ನಮ್ಮ ಆರೋಗ್ಯ ವನ್ನು ರಕ್ಷಿಸಿಕೊಳ್ಳಬಹುದು.ಹಿಂದೆ ನಮ್ಮ ಆಹಾರದಲ್ಲಿ ಔಷಧಿಯ ಪದಾರ್ಥ ಗಳಿತ್ತು. ಇಂದು ಔಷಧವನ್ನೇ ತಿಂದು ಬದುಕು ವ ಸ್ಥಿತಿ ನಿರ್ಮಾಣವಾಗಿದೆ ಈ ಪರಿಸ್ಥಿತಿ ಬದಲಾಯಿಸಲು ತಾರಸಿ ತೋಟ,ಕೈ ತೋಟ ಕೃಷಿ ಸಹಕಾರಿ ಎಂದು ಗಾಯತ್ರಿ ತಿಳಿಸಿದ್ದಾರೆ.ಬ್ಯಾಂಕ್ ಕೇವಲ ಸಾಲ,ಠೇವಣಿ ವ್ಯವಹಾರಗಳಿಗೆ ಸೀಮಿತವಾಗದೆ ಹಲವಾರು ಸರಕಾರಿ ,ವಿಮಾ ಸೌಲಭ್ಯಗಳನ್ನು ಒಂದೇ ಕಡೆ ನೀಡುವ ಸಂಸ್ಥೆಯಾಗಿದೆ.ಇದರ ಪ್ರಯೋಜನ ಗ್ರಾಹಕರು ಪಡೆದುಕೊಳ್ಳಬೇಕು ಎಂದರು.
ಸಮಾರಂಭದಲ್ಲಿ ಹಿರಿಯ ತೋಟಗಾರಿಕಾ ಉಪ ನಿರ್ದೇಶಕಿ ಜಾನಕಿ, ಬ್ಯಾಂಕ್ ಆಫ್ ಬರೋಡಾದ ಪ್ರಾದೇಶಿಕ ಮುಖ್ಯ ಸ್ಥ ಎಂ.ವಿ.ಶಿವಪ್ರಸಾದ್ ವೆಂಕಟ,ವಿಜಯ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಉಪಾಧ್ಯಕ್ಷ ಪ್ರೇಮನಾಥ ಆಳ್ವ,ಸಹಾಯಕ ತೋಟಗಾರಿಕಾ ಅಧಿಕಾರಿ ಯುಗೇಂದ್ರ,ಸಿರಿ ತೋಟಗಾರಿಕಾ ಸಂಘದ ಖಜಾಂಚಿ ಸುರೇಶ್ ಶೆಣೈ,ನಿರ್ದೇಶಕ ಹರಿಶ್ಚಂದ್ರ ಅಡ್ಕಮೊದಲಾದವರು ಉಪಸ್ಥಿತರಿದ್ದರು.ವಿಜಯ ಗ್ರಾಮೀಣಾ ಭಿವೃದ್ಧಿ ಪ್ರತಿಷ್ಠಾನದ ಗೌರವ ಕಾರ್ಯದರ್ಶಿ ರಾಜೇಂದ್ರ ರೈ ವಂದಿಸಿದರು. ಕಾರ್ಯ ನಿರ್ವಹಣಾಧಿಕಾರಿ ಸಚಿನ್ ಕಾರ್ಯಕ್ರಮ ನಿರೂಪಿಸಿದರು.
ಸಹಾಯಕ ತೋಟಗಾರಿಕಾ ಅಧಿಕಾರಿ ಯುಗೇಂದ್ರ ಹಾಗೂ ಅನುಭವಿ ಕೃಷಿಕರು ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿ ಗಳಾಗಿ ಭಾಗವಹಿಸಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ