ಮುಂಬಯಿ: ಶ್ರೀ ಶನೀಶ್ವರ ಮಹಾತ್ಮೆ ಪೂಜಾ ಸಹಿತ ಯಕ್ಷಗಾನ ತಾಳಮದ್ದಳೆಯ ಪ್ರಸಿದ್ಧ ಅರ್ಥಧಾರಿ ವಿಜಯ ಕುಮಾರ್ ಶೆಟ್ಟಿ ಮೊಯ್ಲೊಟ್ಟು ಅವರಿಗೆ ಮುಂಬೈ ಕಲ್ಯಾಣದ ಹೋಟೆಲ್ ಗುರುದೇವ್ ಗ್ರ್ಯಾಂಡ್‌ನಲ್ಲಿ "ಗುರುದೇವ ಕಲಾ ಪ್ರಶಸ್ತಿ" ನೀಡಿ ಸನ್ಮಾನಿಸಲಾಯಿತು.
ಎಕ್ಕಾರು ನಡ್ಯೋಡಿ ಗುತ್ತು ಭಾಸ್ಕರ ಶೆಟ್ಟಿ, ಶ್ರೀಕಾಂತ್ ಶೆಟ್ಟಿ ಅವರು ಶಾರದಾ ಭಾಸ್ಕರ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಮೂಲಕ ನಂದಯ್ಯ, ಗಾಣದ ರಾಮಣ್ಣ ಪಾತ್ರ ನಿರ್ವಹಣೆ ಯಲ್ಲಿ ಸಿದ್ದಿ ಪ್ರಸಿದ್ದಿ ಪಡೆದ ಮೊಯ್ಲೊಟ್ಟು ಅವರ ಸಾಧನೆಯನ್ನು ಅಭಿನಂದಿಸಿ ಗೌರವಿಸಿದರು.
ಶ್ರೀ ಶನೀಶ್ವರ ಭಕ್ತ ವೃಂದ ಪಕ್ಷಿಕೆರೆ ತಂಡದ ಮುಂಬೈ ಯಕ್ಷ ಯಾನದಲ್ಲಿ ಕಲ್ಯಾಣ ದಲ್ಲಿ ನಡೆದ "ಶ್ರೀ ಸತ್ಯನಾರಾಯಣ ಮಹಾತ್ಮೆ" ಪೂಜಾ ಸಹಿತ ತಾಳಮದ್ದಳೆಯ ಕಾರ್ಯಕ್ರಮದಲ್ಲಿ ಕಲ್ಯಾಣದ ಪ್ರತಿಷ್ಟಿತ ಉದ್ಯಮಿಗಳ ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮವನ್ನು ಕದ್ರಿ ನವನೀತ ಶೆಟ್ಟಿ ನಿರ್ವಹಿಸಿದರು.
ಕಲಾ ಸಾರಥಿ ಕಾಪು ಕಲ್ಯಾ ದಿನೇಶ್ ಶೆಟ್ಟಿ, ಪ್ರಸನ್ನ ಶೆಟ್ಟಿ ಅತ್ತೂರು ಗುತ್ತು, ಹೇಮಂತ್ ಶೆಟ್ಟಿ ಕಾವೂರು ಗುತ್ತು,ನಾಗೇಶ್ ಶೆಟ್ಟಿ, ಪ್ರೇಮಾನಂದ ಶೆಟ್ಟಿ ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ