ಮೂಡುಬಿದಿರೆ: ನಿರ್ವಹಣೆಯು ಸರಿಯಾದ ಯೋಜನೆಯಿಂದ ಪ್ರಾರಂಭವಾಗಿ ನಿಯಂತ್ರಣದಿಂದ ಕೊನೆಗೂಳ್ಳುವಂತಹದ್ದು. ಅದೇ ರೀತಿ ವಿದ್ಯಾರ್ಥಿಗಳಿಗೆ ಭವಿಷ್ಯದ ಕುರಿತು ಸರಿಯಾದ ಯೋಜನೆ ಹಾಗು ದೂರದೃಷ್ಟಿ ಇದ್ದರೆ ಬದುಕಿನಲ್ಲಿ ಸಫಲತೆ ಸಿಗುತ್ತದೆ ಎಂದು ಮುಂಬೈನ ಅಲೆಂಬಿಕ್ ಫಾರ್ಮಸ್ವಿಟಿಕಲ್ಸ್ ಲಿಮಿಟೆಡ್‍ನ ಮಾನವ ಸಂಪನ್ಮೂಲ ಮತ್ತು ಬಿಸಿನೆಸ್ ಸಪೋರ್ಟ್ ಅಧ್ಯಕ್ಷ ಚಂದ್ರಹಾಸ್ ಶೆಟ್ಟಿ ಹೇಳಿದರು.
ಆಳ್ವಾಸ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಹಾಗೂ ತಂತ್ರಜ್ಞಾನ ಕಾಲೇಜಿನ ಸ್ನಾತಕೋತ್ತರ ಎಂ.ಬಿ.ಎ ವಿಭಾಗದ ವತಿಯಿಂದ ಎರಡು ದಿನದ ‘ಆ್ಯಗಾನ್ -2023’ ಎರಡು ದಿನಗಳ ರಾಜ್ಯ ಮಟ್ಟದ ಮ್ಯಾನೇಜ್ಮೆಂಟ್ ಫೆಸ್ಟ್‍ನಲ್ಲಿ ಭಾಗವಹಿಸಿ ಮಾತನಾಡಿದರು. ಮ್ಯಾನೇಜ್ಮೆಂಟ್ ಎಂಬುವುದು ಕಲೆ ಮತ್ತು ವಿಜ್ಞಾನದ ಸಮ್ಮಿಲನ. ನಮ್ಮಿಂದ ಮಾತ್ರ ನಮ್ಮನ್ನು ಬದಲಾಯಿಸಿಕೊಳ್ಳಲು ಸಾಧ್ಯ. ಹಾಗಾಗಿ ಪ್ರತಿದಿನ ನಾವು ಹೊಸತನ್ನು ಕಲಿತುಕೊಳ್ಳಬೇಕು. ಕೃತಕ ಬುದ್ದಿ ಮತ್ತೆಗೆ ವಿದ್ಯಾರ್ಥಿಗಳು ಭಯ ಪಡಬೇಕಾಗಿಲ್ಲ. ಯಾರಿಗೆ ಸಂಘಟನೆಯ ಕೌಶಲ್ಯ ಗೊತ್ತಿದೆಯೋ ಅವರು ಯಶಸ್ವಿಯಾಗುತ್ತಾರೆ ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ ತಂತ್ರಜ್ಞಾನ ಮೀರಿ ವಿದ್ಯಾರ್ಥಿಗಳು ಬೆಳೆಯಬಹುದು. ಬಿಕ್ಕಟ್ಟು ನಿರ್ವಹಣೆ ಕೌಶಲ್ಯ ಗೊತ್ತಿರುವುದು ಮಾನವರಿಗೆ ಮಾತ್ರ ಬದಲಾಗಿ ತಂತ್ರಜ್ಞಾನಕ್ಕಲ್ಲ. ಹಾಗಾಗಿ ಕೃತಕ ಬುದ್ದಿಮತ್ತೆಯು ವಿದ್ಯಾರ್ಥಿಗಳ ಕೌಶಲ್ಯವನ್ನು ವಶಪಡಿಸಿಕೊಳ್ಳುವುದಿಲ್ಲ ಎಂದರು. ಒಬ್ಬರಿಂದ ಒಬ್ಬರು ಕಲಿಯುವುದು ತುಂಬಾ ಇರುತ್ತದೆ. ಸ್ಪರ್ಧೆಗಳಿಂದ ತಂಡದ ಒಗ್ಗಟ್ಟು ಅಭಿವೃದ್ಧಿಯಾಗುತ್ತದೆ. ಭಾಗವಹಿಸುವಿಕೆ, ಆಸಕ್ತಿ, ಮತ್ತು ನಿರಂತರತೆಯು ಗುರಿಯನ್ನು ಸಾಧಿಸಲು ಸಹಾಯ ಮಾಡುತ್ತದೆ ಎಂದರು. ಉನ್ನತ ವ್ಯಾಸಂಗಕ್ಕೆ ಮೌಲ್ಯ ವಿದ್ಯಾರ್ಥಿಗಳ ಭಾಗವಹಿಸುವಿಕೆಯಿಂದ ಬರುತ್ತದೆ, ಭಾಗವಹಿಸುವಿಕೆ ಸಮೃದ್ಧಿಗೆ ರಹದಾರಿ ಎಂದರು.
ಮ್ಯಾನೇಜ್ಮೆಂಟ್‍ಗೆ ಸಂಬಂಧ ಪಟ್ಟ 6 ಸ್ಪರ್ಧೆಗಳಿದ್ದು, ಕರ್ನಾಟಕ ಹಾಗೂ ಕೇರಳದ ವಿವಿಧ ಕಾಲೇಜುಗಳಿಂದ ವಿದ್ಯಾರ್ಥಿಗಳು ಆಗಮಿಸಿದ್ದರು.
ವೇದಿಕೆಯಲ್ಲಿ ಎಂ.ಬಿ.ಎ ವಿಭಾಗದ ಮುಖ್ಯಸ್ಥೆ ಪ್ರಿಯಾ ಸೀಕ್ವೇರಾ, ಎ.ಇ.ಐ.ಟಿ ಅಕಾಡೆಮಿಕ್ಸ್ ಡೀನ್ ಡಾ. ದಿವಾಕರ್ ಶೆಟ್ಟಿ, ಎ.ಐ.ಇ.ಟಿ ಪ್ಲಾನಿಂಗ್ ಡೀನ್ ಡಾ. ದತ್ತಾತ್ರೇಯ, ಉಪನ್ಯಾಸಕಿ ಹಾಗೂ ಕಾರ್ಯಕ್ರಮ ಸಂಯೋಜಕಿ ಮೈತ್ರಿ, ವಿದ್ಯಾರ್ಥಿ ಸಂಯೋಜಕರಾದ ಗುರುಚರಣ್ ಎಲ್ ಶೆಟ್ಟಿ, ಹಾಗೂ ಪ್ರೀತಿ ಶೆಟ್ಟಿ ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ