ಸಾವನ್ನೇ ಗೆದ್ದು ನಿಂತ ಶೂರ

Upayuktha
0


ಜೀವನವೆನ್ನುವುದು ಗೋಲಾಕಾರದಂತೆ ಪ್ರಕೃತಿಗೆ ಹೇಗೆ ವಿಕೋಪಗಳು ಬರುತ್ತವೋ ಅದೇ ತರಹ ಮನುಷ್ಯನಿಗೂ ಸಂಕಷ್ಟಗಳು ಬರುತ್ತಾ ಇರುತ್ತದೆ. ಹಾಗಂತ ಆ ಕಷ್ಟಗಳಿಗೆ ಎಲ್ಲ ನೊಂದು ಸಾವೇ ಪರಿಹಾರವೆಂದು ಹೋದರೆ ಸಾರ್ಥಕವಾಗುತ್ತದಯೇ ? ಇರುವಷ್ಟು ಸಮಯ ನಗುನಗುತ್ತ ಸಾಗಬೇಕು. ಕಳೆದ ಸಮಯ ಹೇಗೆ ಮತ್ತೆ ಬರುವುದಿಲ್ಲವೋ ಅದೇ ರೀತಿ ಹೋದ ಜೀವ ಮತ್ತೆ ಬರುವುದಿಲ್ಲ.


ಕೆಟ್ಟ ಸಮಯವೂ ಬರುವುದು ಬೇಡವೆಂದು ಹೇಳಲು ಸಾಧ್ಯವಾಗುವುದಿಲ್ಲ ಬಂದಾಗ ಮೆಟ್ಟಿನಿಂತು ಸಾಗಬೇಕು ಎಂದು ಅಂದುಕೊಂಡು ನಡೆಯುತ್ತಾ ಇದ್ದಾಗ ಇದ್ದಕ್ಕಿದ್ದಂತೆ ಅಚಾನಕವಾದ ಘಟನೆ ನಡೆದು ಹೋಯಿತು. ಎಂದು ಮರೆಯಲು ಸಾಧ್ಯವಾಗದ್ದು. ನನ್ನ ಜೀವಕ್ಕೆ ಜೀವ ಕೊಡುವ ಗೆಳೆಯನಿಗೆ ಭೀಕರವಾದ ವಾಹನ ಅಪಘಾತ ನಡೆದು ಹೋಯಿತು. ಆ ವಿಷಯ ನನ್ನ ಕಿವಿಗೆ ಬಿದ್ದಾಕ್ಷಣ ಮೂರ್ಛೆ ಹೋದೆ. ಆತನು ಬದುಕಿ ಉಳಿಯುವುದೇ ಇಲ್ಲ ಎನ್ನುವಷ್ಟರ ಮಟ್ಟಿಗೆ ನಡೆದು ಹೋಗಿತ್ತು. ವೈದ್ಯರನ್ನು ಭೇಟಿಯಾದಾಗ ಈತನಿಗೆ ಸರ್ಜರಿ ಮಾಡುವ ಅವಶ್ಯಕತೆ ಇದೆ  ಎಂದು ತಮ್ಮನ್ನು ಭಯಗೊಳಿಸುವರು. ಜೀವಕ್ಕಾಗಿ ಏನು ಮಾಡಲು ಸಿದ್ಧ ವೆಂದು ಯೋಚಿಸಿದ ನಾವು ಅವನನ್ನು ವೈದ್ಯರು ಹೇಳಿರುವಂತೆ ಸರ್ಜರಿ ಮಾಡಿಸಲು ಮುಂದಾಗುವೆವು.


ಆ ಸಂದರ್ಭದಲ್ಲಿ ಅವನು ವೈದ್ಯರು ಉಪಚಾರಕ್ಕೆ ಪ್ರತಿಕ್ರಿಯೆ ನೀಡದೇ ಇದ್ದರೆ ಬಹಳ ಕಷ್ಟವಿದೆ ಎಂದು ಮಾತು ಹೇಳುತ್ತಾರೆ ದೇವರ ಮೊರೆ ಹೋದ ಮನೆಯವರು ಸುಮಾರು ಮೂರು ನಾಲ್ಕು ಗಂಟೆಗಳ ಕಾಲ ಅವನ ಚಿಕಿತ್ಸೆಯೂ ಪೂರ್ಣವಾಗಿ ನಡೆದು  ಜೀವಂತವಾಗಿದ್ದಾನೆ ಎಂದು ತಿಳಿಯುವವರೆಗೂ ಒಂದು ಹನಿ ನೀರು ಮುಟ್ಟದೆ ಕುಳಿತಿರುತ್ತಾರೆ.


ಸರ್ಜರಿಯಾ ಮರು ದಿವಸ ಈತನಿಗೆ  ಸ್ವಲ್ಪ ನೆನಪಿನ ಶಕ್ತಿಯು ಕಡಿಮೆಯಾಗುತ್ತಾ ಬಂದಿರುತ್ತದೆ . ಕೆಲವು ವ್ಯಕ್ತಿಗಳ ಪರಿಚಯ ಸುಲಭವಾಗಿ ಅರಿವಾಗುತ್ತಿರಲಿಲ್ಲ.


ಹೀಗೇನೇ ಕೆಲವು ದಿನಗಳ ಕಾಲ ದವಾಖಾನೆಯ ಹಾಸಿಗೆಯಲ್ಲಿ ಮಲಗಿದ್ದವ ನಿಧಾನವಾಗಿ ಚೇತರಿಕೆಗೆ ಬರತೊಡಗುತ್ತಾನೆ. ಮನೆಗೆ ಬಂದಾಗ ಈತನಿಗೆ ವಾಹನ ಚಲಾಯಿಸಲು ಮತ್ತೆ ಮನಸ್ಸಾಗುತ್ತದೆ ಅದರಿಂದ ದೂರ ಇಡಲು ಬಹಳ ಕಷ್ಟ ಪಡುತ್ತಿರುತ್ತಾರೆ ಮನೆಯವರು.

ಆ ಮಾತು ಬರಬಾರದು ಎಂದು ಈತನಿಗೆ  ಹಲವು ರೀತಿಯಲ್ಲಿ ಮಾತನಾಡಲು ಪ್ರಯತ್ನಿಸುತ್ತಾರೆ. ಏನೇ ಇದ್ದರೂ ಮನೆವರೆಗೆ ಒಂದೇ ಖುಷಿ ಸಾವನ್ನು ಗೆದ್ದಿದ್ದಾನೆ ಇನ್ನೇನು ಬೇಡ ಇವನನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂದು ಮಾತ್ರವಿತ್ತು. ಹೀಗೆಂದೂ ಈತನನ್ನು ಎಲ್ಲೂ ಹೊರಗಡೆ ಹೋಗಲು ಬಿಡದೆ ಜೋಪಾನ ಮಾಡುತ್ತಾ ಇರುತ್ತಾರೆ.

-ಅನನ್ಯ ಎಚ್ ಸುಬ್ರಹ್ಮಣ್ಯ 

                                                                            

                                                           

  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top