'ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ'ದಲ್ಲಿ 'ಹಿಂದೂ ರಾಷ್ಟ್ರ: ಆಕ್ಷೇಪ-ಖಂಡನೆ' ಎಂಬ 'ಇ-ಬುಕ್' ಲೋಕಾರ್ಪಣೆ

Upayuktha
0

ಭಾರತದಲ್ಲಿ ಈಗ 'ರೈಲ್ ಜಿಹಾದ್`?: ರಕ್ಷಣಾ ತಜ್ಞ ಆರ್.ಎಸ್.ಎನ್ ಸಿಂಗ್


ಪಣಜಿ: ಕೆಲವು ದಿನಗಳ ಹಿಂದೆ ಬಾಲಾಸೋರ್‌ನಲ್ಲಿ ಭೀಕರ ರೈಲು ಅಪಘಾತ ಸಂಭವಿಸಿ ಸುಮಾರು 300 ಪ್ರಯಾಣಿಕರು ಸಾವನ್ನಪ್ಪಿದ್ದರು. ಬಾಲಸೋರ್‌ಗೂ ಮುನ್ನ ಮಾರ್ಚ್ 31 ರಂದು ದೆಹಲಿಯ ಶಾಹೀನ್ ಬಾಗ್‌ನ ಶಾರುಖ್ ಸೈಫಿ ಈ ಜಿಹಾದಿಯು ಕೇರಳಕ್ಕೆ ಹೋಗಿ 'ಅಲಪ್ಪುಳ-ಕಣ್ಣೂರು ಎಕ್ಸ್‌ಪ್ರೆಸ್'ಗೆ ಪೆಟ್ರೋಲ್‌ನಂತಹ ಅಪಾಯಕಾರಿ ಜ್ವಲನಶೀಲ ವಸ್ತುವನ್ನು ಎಸೆದು 3 ಪ್ರಯಾಣಿಕರಿಗೆ ಬೆಂಕಿ ಹಚ್ಚಿ ಕೊಂದನು ಹಾಗೂ 9 ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ಶಾರುಖ್ ಸೈಫಿ ಈತ ಭಾರತದಲ್ಲಿ ನಿಷೇಧಿತ ಝಾಕಿರ್ ನಾಯಕ್ ಇವನ ಅನುಯಾಯಿಯಾಗಿದ್ದಾನೆ. ನಂತರ ಜೂನ್ 1ರಂದು ಅದೇ ರೈಲಿನಲ್ಲಿ ಮತ್ತೆ ಅದೇ ಘಟನೆ ಪುನರಾವರ್ತನೆಯಾಯಿತು. ಕೇರಳದ ಕಣ್ಣೂರು ನಿಲ್ದಾಣದಲ್ಲಿ ಬೋಗಿಗೆ ಬೆಂಕಿ ಹಚ್ಚಲಾಗಿದೆ. ಆ ಬೋಗಿ 'ಭಾರತ ಪೆಟ್ರೋಲಿಯಂ'ನ ಇಂಧನ ಟ್ಯಾಂಕ್‌ಗಳ ಬಳಿ ಇತ್ತು. ಇದನ್ನು 'ಗಜವಾ-ಎ-ಹಿಂದ್' ಎಂದು ಕರೆಯಲಾಗುತ್ತದೆ, ಇದುವೇ 'ರೈಲ್ ಜಿಹಾದ್' ಆಗಿದೆ ಎಂದು ದೆಹಲಿಯ ರಕ್ಷಣಾ ತಜ್ಞ ಕರ್ನಲ್ ಆರ್.ಎಸ್.ಎನ್. ಸಿಂಗ್ ಹೇಳಿದರು.

ಅವರು 'ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ'ದಲ್ಲಿ 'ರೈಲ್ ಜಿಹಾದ್' ವಿಷಯದಲ್ಲಿ ಮಾತನಾಡುತ್ತಿದ್ದರು. ಭಾರತದಲ್ಲಿ 'ವಂದೇ ಭಾರತ್ ಎಕ್ಸ್‌ಪ್ರೆಸ್' ಪ್ರಾರಂಭವಾದಾಗಿನಿಂದ, ದೇಶದಾದ್ಯಂತ ಅಲ್ಲಲ್ಲಿ ಕಲ್ಲುತೂರಾಟದ ಘಟನೆಗಳು ನಡೆಯುತ್ತಿದೆ. ದಾಳಿಯ ವಿಧಾನವೂ ಒಂದೇ ರೀತಿಯಾಗಿದೆ. 'ವಂದೇ ಭಾರತ'ದ ಬಗ್ಗೆ ಯಾಕಿಷ್ಟು ತಿರಸ್ಕಾರ? 'ವಂದೇ ಮಾತರಮ್' ದ್ವೇಷಿಗಳೇ 'ವಂದೇ ಭಾರತ್ ಎಕ್ಸ್‌ಪ್ರೆಸ್' ಮೇಲೆ ದಾಳಿ ನಡೆಸುತ್ತಿದ್ದಾರೆ. ಇದು 'ರೈಲ್ ಜಿಹಾದ್' ಅಲ್ಲವೇ? ಎಂದು ಅವರು ಪ್ರಶ್ನಿಸಿದರು.


ಈ ಸಂದರ್ಭದಲ್ಲಿ ಛತ್ತೀಸಗಢ ಇಲ್ಲಿಯ ಪೂ. ಶ್ರೀ ರಾಮಬಾಲಕದಾಸಜಿ ಮಹಾತ್ಯಾಗಿ ಮಹಾರಾಜರ ಶುಭಹಸ್ತದಿಂದ ಮರಾಠಿ ಮತ್ತು ಹಿಂದಿ ಭಾಷೆಯಲ್ಲಿ 'ಹಿಂದೂ ರಾಷ್ಟ್ರ: ಆಕ್ಷೇಪ-ಖಂಡನೆ' ಎಂಬ 'ಇ-ಬುಕ್'ನ ಪ್ರಕಾಶನ ಮಾಡಲಾಯಿತು.


ತ್ರಿಪುರಾದಲ್ಲಿ ಶಾಲೆಗಳ ಮೂಲಕ ಹಿಂದೂಗಳ ಮತಾಂತರ: ಪೂ. ಚಿತ್ತರಂಜನ್ ಸ್ವಾಮಿ ಮಹಾರಾಜ 

1985-86 ರಿಂದ ತ್ರಿಪುರಾದಲ್ಲಿ ಹಿಂದೂಗಳ ಮತಾಂತರ ಭಾರಿ ಪ್ರಮಾಣದಲ್ಲಿ ನಡೆಯುತ್ತಿದೆ. ಕ್ರೈಸ್ತರು ಮಕ್ಕಳಿಗೆ ಆಂಗ್ಲ ಶಿಕ್ಷಣ ನೀಡಲೆಂದು ಆಂಗ್ಲ ಶಾಲೆಗಳನ್ನು ಸ್ಥಾಪಿಸುತ್ತಿದ್ದಾರೆ. ಈ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಪಾಲಕರಿಗೆ ಉತ್ತಮ ಶಿಕ್ಷಣದ ಆಮಿಷವೊಡ್ಡಿ, ಬ್ರೈನ್ ವಾಷ್ ಮಾಡಿ ವಿದ್ಯಾರ್ಥಿಗಳು ಹಾಗೂ ಪಾಲಕರನ್ನು ಮತಾಂತರಿಸಲಾಗುತ್ತಿದೆ. ತ್ರಿಪುರಾದಲ್ಲಿನ ಮಠ-ಮಂದಿರಗಳಲ್ಲಿ ಅನೇಕ ಸಾಧು-ಸಂತರಿದ್ದಾರೆ; ಆದರೆ ಅಲ್ಲಿಗೆ ಬರುವ ಹಿಂದೂಗಳಿಗೆ ಧರ್ಮಶಿಕ್ಷಣ ನೀಡದ ಕಾರಣ ಮತಾಂತರದ ಸಮಸ್ಯೆ ಕಾಡುತ್ತಿದೆ. ಹಿಂದೂ ಧರ್ಮ ಉಳಿದರೆ ಮಠ-ಮಂದಿರಗಳು ಉಳಿಯುತ್ತವೆ. ದೇಶದ ಮೂಲೆಮೂಲೆಗಳಿಂದ ಬಂದಿರುವ ಹಿಂದುತ್ವನಿಷ್ಠರು, ನಾವು ಮತಾಂತರವನ್ನು ತಡೆಯುವ ಮೂಲಕ ಸನಾತನ ಧರ್ಮದ, ಹಿಂದೂಗಳ ರಕ್ಷಣೆ ಮಾಡುವೆವು ಮತ್ತು ಪ್ರಸಂಗ ಬಂದರೆ ಧರ್ಮಕ್ಕಾಗಿ ನಮ್ಮ ಪ್ರಾಣವನ್ನು ಸಹ ತ್ಯಾಗ ಮಾಡುತ್ತೇವೆ’ ಎಂದು ಪ್ರತಿಜ್ಞೆ ಮಾಡಬೇಕು ಎಂದು ತ್ರಿಪುರಾದ 'ಶಾಂತಿ ಕಾಳಿ ಆಶ್ರಮ'ದ ಪೂ. ಚಿತ್ತರಂಜನ ಸ್ವಾಮಿ ಮಹಾರಾಜರು ಹೇಳಿದರು. ಅವರು 'ತ್ರಿಪುರಾದಲ್ಲಿ ಮತಾಂತರದ ಸಮಸ್ಯೆ, ಪರಿಹಾರ ಮತ್ತು ಯಶಸ್ಸು' ಎಂಬ ವಿಷಯದಲ್ಲಿ ಮಾತನಾಡುತ್ತಿದ್ದರು.


ಈ ಸಂದರ್ಭದಲ್ಲಿ ಛತ್ತೀಸಗಢದ 'ಶ್ರೀ ಜಾಮಡಿ ಪಟೇಶ್ವರಧಾಮ ಸೇವಾ ಸಂಸ್ಥಾನ'ದ ಸಂಚಾಲಕರಾದ ಪೂ. ಶ್ರೀ ರಾಮಬಾಲಕದಾಸಜಿ ಮಹಾತ್ಯಾಗಿ ಮಹಾರಾಜರು ಮಾತನಾಡುತ್ತಾ, 'ಕೇವಲ ವ್ಯಾಸಪೀಠದಿಂದ ಘೋಷಣೆ ಮಾಡುವುದರಿಂದ ಹಿಂದೂ ರಾಷ್ಟ್ರ ಸ್ಥಾಪನೆಯಾಗುವುದಿಲ್ಲ. ಹಿಂದೂ ರಾಷ್ಟ್ರ ಸ್ಥಾಪನೆಗೆ ಪ್ರತ್ಯಕ್ಷ ಕಾರ್ಯ ಮಾಡುವ ಅಗತ್ಯವಿದೆ' ಎಂದು ಹೇಳಿದರು. ನೇಪಾಳದ 'ಓಂ ರಕ್ಷಾ ವಾಹಿನಿ'ಯ ಮುಖ್ಯಸ್ಥ ಚಿರಣ ವೀರ ಪ್ರತಾಪ್ ಖಡ್ಕ ಇವರು ಮಾತನಾಡುತ್ತಾ, 'ಹಿಂದೂ ರಾಷ್ಟ್ರವಾಗಿರುವ ನೇಪಾಳವನ್ನು ಕಳೆದೊಂದು ದಶಕದಿಂದ ಜಾತ್ಯತೀತ ಎಂದು ಘೋಷಿಸಲಾಗಿದೆ ಮತ್ತು ಎಲ್ಲಾ ಹಿಂದೂಗಳ ಶ್ರದ್ಧೆಯ ಮೇಲೆ ದಾಳಿ ಮಾಡಿದೆ. ಆದರೂ ಹಿಂದೂಗಳು ನೇಪಾಳ ಸೇರಿದಂತೆ ಇಡೀ ಜಗತ್ತನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡುವ ಧ್ಯೇಯವನ್ನು ಇಟ್ಟುಕೊಳ್ಳಬೇಕು' ಎಂದು ಹೇಳಿದರು.

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top