ಸೃಜನಶೀಲತೆಯಿಂದ ಅವಕಾಶಗಳು ತೆರೆದುಕೊಳ್ಳುತ್ತವೆ: ಎಸ್.ಜಿ ಭಟ್‍

Upayuktha
0

ಉಜಿರೆ: ಸೃಜನಶೀಲತೆಯಿಂದ ಅಸಾಧ್ಯವೂ ಸಾಧ್ಯವಾಗುತ್ತದೆ, ಸಾಹಿತ್ಯದ ಓದಿನಿಂದ ಇದು ಹೆಚ್ಚಾಗುತ್ತದೆ ಎಂದು ಬೆನಕ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಎಸ್.ಜಿ ಭಟ್‍ ಅಭಿಪ್ರಾಯಪಟ್ಟರು.


ಉಜಿರೆ ಎಸ್.ಡಿ.ಎಂ. ಪದವಿ ಕಾಲೇಜಿನ ಕಲಾ ವಿಭಾಗವು ಆಯೋಜಿಸಿರುವ ಕಲರವ- 2023 ಉದ್ಘಾಟಿಸಿ ಮಾತನಾಡಿದರು.


ವಿಭಿನ್ನವಾಗಿ ಯೋಚಿಸಿರುವುದರಿಂದ ಹೆಚ್ಚಿನ ಕೆಲಸ ಸಾಧ್ಯವಾಗುತ್ತದೆ. ಆತ್ಮವಿಶ್ವಾಸ ಇದರ ಜೊತೆ ಸೇರಿದರೆ ಋಣಾತ್ಮಕ ಚಿಂತನೆಗಳಿಂದ ದೂರವಿರಲು ಸಾಧ್ಯ. ಇದರಿಂದ ದೊರೆಯುವ ಧನಾತ್ಮಕ ಅಂಶವು ಯಶಸ್ಸಿನ ಮೈಲಿಗಲ್ಲಿಗೆ ಸಹಾಯ ಮಾಡುತ್ತದೆಎಂದರು.ಈ ಎರಡು ಅಂಶಗಳ ಜೊತೆಗೆ ಕೆಲಸದಲ್ಲಿ ಬದ್ಧತೆಯಿದ್ದರೆ ಸಾಧನೆಯ ಮೆಟ್ಟಿಲೆಲ್ಲವೂ ಸುಲಭವಾಗುತ್ತವೆ, ಸಂವಹನ ಕೌಶಲ್ಯವು ನಮ್ಮದಾದರೆ ಜೀವನದುದ್ದಕ್ಕೂ ನೆರವಾಗುತ್ತದೆ. ಜೀವನದಲ್ಲಿ ಕಾನ್ಫಿಡೆನ್ಸ್, ಕ್ರಿಯೆಟಿವಿಟಿ, ಕಮಿಟ್‍ಮೆಂಟ್ ಮತ್ತು ಕಮ್ಯುನಿಕೇಶನ್ ಈ ನಾಲ್ಕು ಸಿ ಅಂಶಗಳು ಸಾಧನೆಯ ಕೀಲಿ ಕೈ ಎಂದು ಮಾರ್ಗದರ್ಶಿಸಿದರು.


ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಭೇಟಿ ನೀಡಿದರೆ ವ್ಯಕ್ತಿಯ ವೈಯಕ್ತಿಕ ಬೆಳವಣಿಗೆಗೆ ಸಹಾಯಕಾರಿ ಹಾಗೂ ಇಂತಹ ಸ್ಪರ್ಧೆಗಳಲ್ಲಿ ಭಾಗಿಯಾಗುವುದರಿಂದ ನಮ್ಮ ಸಾಮಥ್ರ್ಯಅರಿವಾಗುತ್ತದೆ.ಇಂತಹ ಅವಕಾಶಗಳ ಆಗರಎಸ್.ಡಿ.ಎಂ ಕಾಲೇಜಿನ ವಿದ್ಯಾರ್ಥಿಗಳು ಅವುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಆಶಯ ವ್ಯಕ್ತಪಡಿಸಿದರು.


ಕಾರ್ಯಕ್ರಮದ ಅಧ್ಯಕ್ಷ, ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಎ. ಕುಮಾರ ಹೆಗ್ಡೆ ಮಾತನಾಡಿದರು. ಪ್ರತಿಯೊಬ್ಬರು ತಮಗೆ ಪ್ರಿಯವಾದ  ಕೆಲಸವನ್ನು ಮಾಡುವಾಗ ಇರುವ ಆಸಕ್ತಿ ಹಾಗೂ ಇಚ್ಛೆಯು ಪ್ರತಿನಿತ್ಯವೂ ನಮ್ಮದಾಗಬೇಕು, ಆಗ ಉನ್ನತ ಮಟ್ಟದ ವ್ಯಕ್ತಿತ್ವ ಹೊಂದಲು ಸಾಧ್ಯ. ಮನಸ್ಸೊಂದಿದ್ದರೆ ಎಷ್ಟೇ ಕಠಿಣ ಪರಿಸ್ಥಿಯಿಂದಲೂ ಹೊರಬರಲು ಸಾಧ್ಯ ಎಂದು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.ಆತ್ಮಾವಲೋಕನಕ್ಕೆಇಂತಹ ಸ್ಪರ್ಧೆಗಳು ಸಹಾಯಕಾರಿ, ಇವು ವಿದ್ಯಾರ್ಥಿ ಜೀವನದ ನೆನಪುಗಳ ಬುತ್ತಿಯಲ್ಲಿ ಸೇರುತ್ತದೆ ಎಂದರು.


ಕಾರ್ಯಕ್ರಮದಲ್ಲಿ ಕಲಾ ವಿಭಾಗದ ಮುಖ್ಯಸ್ಥೆ ಡಾ.ಶಲೀಪ್‍ಕುಮಾರಿ, ವಿದ್ಯಾರ್ಥಿ ಪ್ರತಿನಿಧಿ ಶ್ರವಣ್‍ಕುಮಾರ್ ಉಪಸ್ಥಿತರಿದ್ದರು. ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ.ಶ್ರೀಧರ್ ಭಟ್ ಸ್ವಾಗತಿಸಿ, ವಿದ್ಯಾರ್ಥಿನಿ ಅನ್ನಪೂರ್ಣ ನಿರೂಪಿಸಿ, ಮಾನಸ ವಂದಿಸಿದರು.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top