'ಸಮತೋಲನಯುತ ಆಹಾರ ಸೇವನೆಯಿಂದ ಆರೋಗ್ಯ ವೃದ್ಧಿ' - ಡಾ. ರಜತಾ ಪಿ ಶೆಟ್ಟಿ

Upayuktha
0

ಎಸ್.ಡಿ.ಎಂ ಕಾಲೇಜಿನಲ್ಲಿ 'ಫುಡೀಕಾರ್ನರ್' 

ಉಜಿರೆ: ಬದಲಾದ ಜೀವನಕ್ರಮದ ಸಂದರ್ಭದಲ್ಲಿ ಸಮತೋಲನಯುತ ಆಹಾರ ಸೇವನೆಯಿಂದ ಆರೋಗ್ಯ ಕಾಪಾಡಿ ಕೊಳ್ಳಬಹುದು. ಎಂದು ಎಸ್.ಡಿ.ಎಂ. ಐ.ಟಿ ಕಾಲೇಜಿನ ಮುಖ್ಯಗ್ರಂಥಾಲಯ ಪಾಲಕಿ ಡಾ. ರಜತಾ ಪಿ ಶೆಟ್ಟಿ ನುಡಿದರು.

ಎಸ್.ಡಿ.ಎಂ ಪದವಿ ಕಾಲೇಜಿನಲ್ಲಿ ಗೃಹ ವಿಜ್ಞಾನ ವಿಭಾಗದ ವತಿಯಿಂದ ನಡೆದ 'ಫುಡೀಕಾರ್ನರ್' ಆಹಾರ ಮೇಳವನ್ನು ಉದ್ಘಾಟಿಸಿ ಮಾತನಾಡಿದರು. 

ಆಹಾರ ಪದಾರ್ಥಗಳಿಂದ ಬರುವ ಘಮ ಮಾನಸಿಕ ಆರೋಗ್ಯವನ್ನೂ ವೃದ್ಧಿಸುತ್ತದೆ. ಆಹಾರ ಸೇವನೆಯ ಜೊತೆಗೆ ಜೀರ್ಣ ಕ್ರಿಯೆಯೆಡೆಗೂ ಗಮನ ಹರಿಸಿದರೆ ದೈಹಿಕ ಅರೋಗ್ಯ ಉತ್ತಮವಾಗುತ್ತದೆ. ಸರಿಯಾದ ಆಹಾ ರಕ್ರಮ ರೂಢಿಸಿಕೊಳ್ಳುವುದರಿಂದ ಉತ್ತಮ ಜೀವನ ನಡೆಸಬಹುದು ಎಂದರು.

ಆಹಾರ ಮೇಳದಂತಹ ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ವ್ಯಾವಹಾರಿಕ, ಸಂವಹನ, ಯೋಜನೆ, ನಾಯಕತ್ವ ಸೇರಿದಂತೆ ಹಲವು ಕೌಶಲ್ಯಗಳನ್ನು ಹೆಚ್ಚಿಸುತ್ತವೆ. ಭವಿಷ್ಯದಲ್ಲಿ ಸಮಸ್ಯೆಗಳು ಎದುರಾದಾಗ ಅವುಗಳನ್ನು ನಿಭಾಯಿಸುವ ಸಾಮಥ್ರ್ಯ ನೀಡುತ್ತವೆ ಎಂದುಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲ ಡಾ. ಕುಮಾರ ಹೆಗ್ಡೆ ಬಿ.ಎ ಶುಭಹಾರೈಸಿದರು.

ಕಾರ್ಯಕ್ರಮದಲ್ಲಿ ವಿಭಾಗದ ಮುಖ್ಯಸ್ಥೆ ಶೋಭಾ ಎಸ್, ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥ ಬಿ. ಗಣೇಶ್ ನಾಯಕ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಬಗೆಬಗೆಯ ಆಹಾರಗಳನ್ನು ಸಿದ್ಧಪಡಿಸಿ ಮಾರಾಟ ಮಾಡಿದರು. ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಕ್ಷಿತಿಶ್ರೀ ನಿರೂಪಿಸಿ, ಮನಸ್ವಿನಿ ಕೆ.ಎಸ್ ಸ್ವಾಗತಿಸಿ, ಬಬಿತಾ ಎಂ.ಪಿ ವಂದಿಸಿದರು.    

ವರದಿ: ಅಮಿತ ಎಂ. ವಿ 


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
To Top