ಉಜಿರೆ: ಉಜಿರೆಯ ಎಸ್‌ಡಿಎಂ ಕಾಲೇಜಿನ ರಸಾಯನಶಾಸ್ತ್ರದಲ್ಲಿ ಪಿಜಿ ಅಧ್ಯಯನ ಮತ್ತು ಸಂಶೋಧನಾ ವಿಭಾಗವು SDM ಪಿಜಿ ಸೆಂಟರ್ ಸೆಮಿನಾರ್ ಹಾಲ್ ಆವರಣದಲ್ಲಿ ಇಂಡಿಯನ್ ನ್ಯಾಷನಲ್ ಯಂಗ್ ಅಕಾಡಮಿ ಆಫ್ ಸೈನ್ಸಸ್ (INYAS) ಸಹಯೋಗದೊಂದಿಗೆ ಜೂನ್ 6 ರಂದು ಬೆಳಿಗ್ಗೆ 9.30 ಕ್ಕೆ Molecular Docking and Electroanalytical Techniques (MDET-2023) ರಾಷ್ಟ್ರೀಯ ಕಾರ್ಯಾಗಾರವನ್ನು ಆಯೋಜಿಸಿದೆ.
ಎಸ್‌ಡಿಎಂ ಶಿಕ್ಷಣಸಂಸ್ಥೆಯ ಕಾರ್ಯದರ್ಶಿ ಡಾ. ಸತೀಶ್‌ಚಂದ್ರ ಎಸ್. ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. INYASnನ ಸದಸ್ಯರಾದ ಡಾ.ಹೆಚ್.ಎಸ್.ಎಸ್. ರಾಮಕೃಷ್ಣ ಮಟ್ಟೆ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಎಸ್‌ಡಿಎಂನ ಪ್ರಾಂಶುಪಾಲರಾದ ಡಾ. ಬಿ.ಎ.ಕುಮಾರ ಹೆಗ್ಡೆ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ