ಉಜಿರೆ: ಎಸ್.ಡಿ.ಎಂ ವಿಜ್ಞಾನ ವಿದ್ಯಾರ್ಥಿಗಳು ಐಡಿಇಎ ಪ್ರಯೋಗಾಲಯಕ್ಕೆ ಭೇಟಿ

Upayuktha
0

 


ಉಜಿರೆ: ಶ್ರೀ ಧ.ಮಂ. ಕಾಲೇಜಿನ ವಿಜ್ಞಾನ ವಿಭಾಗದ ಇಪ್ಪತ್ತಾರು ವಿದ್ಯಾರ್ಥಿಗಳು ವಾಮಂಜೂರು ಸೈಂಟ್‍ಜೋಸೆಫ್‍ ತಾಂತ್ರಿಕ ಕಾಲೇಜಿನ ಐಡಿಇಎ ಪ್ರಯೋಗಾಲಯಕ್ಕೆ ಇತ್ತೀಚಿಗೆ ಭೇಟಿ ನೀಡಿದರು.

     

ವಿದ್ಯಾರ್ಥಿಗಳಿಗೆ 3ಡಿ ಪ್ರಿಂಟಿಂಗ್, ಲೇಝರ್‍ಡಿಸೈನ್ ಪ್ರಿಂಟಿಂಗ್, ಪಿಸಿಬಿ ಪ್ರಿಂಟಿಂಗ್, ವುಡ್‍ಡಿಸೈನ್ ಪ್ರಿಂಟಿಂಗ್ ಮುಂತಾದ ವಿಷಯಗಳ ಬಗ್ಗೆ ವಿವರಣೆ ನೀಡಲಾಯಿತು. ಸ್ವತಃ ವಿದ್ಯಾರ್ಥಿಗಳೇ ಪ್ರಯೋಗಗಳನ್ನು ಮಾಡುವ ಮೂಲಕ ವೃತ್ತಿ ಕೌಶಲ್ಯಗಳನ್ನು ಹೆಚ್ಚಿಸಿಕೊಂಡರು. ಇಂತಹ ವಿನೂತನ ಆವಿಷ್ಕಾರಗಳಿಗೆ  ಪೂರಕ ಮಾಹಿತಿಯನ್ನು ನೀಡುವ ಪ್ರಯೋಗಾಲಯಗಳು ಕರ್ನಾಟಕದಲ್ಲಿ ಕೇವಲ ನಾಲ್ಕು ತಾಂತ್ರಿಕ ಕಾಲೇಜುಗಳಲ್ಲಿವೆ.


ಎಸ್.ಡಿ.ಎಂಕಾಲೇಜು (ಸ್ವಾಯತ್ತ) ಉಜಿರೆ ಹಾಗೂ ಸೈಂಟ್‍ಜೋಸೆಫ್‍ತಾಂತ್ರಿಕಕಾಲೇಜು (ಸ್ವಾಯತ್ತ) ವಾಮಂಜೂರು ಸಂಸ್ಥೆಗಳ ನಡುವಿನ ಒಡಂಬಡಿಕೆಯ ಪ್ರಕಾರ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಎಸ್.ಎನ್‍ಕಾಕತ್ಕರ್, ಗಣಿತಶಾಸ್ತ್ರ ವಿಭಾಗದ ಪ್ರೊ. ಗಣೇಶ್ ನಾಯಕ್‍ ಉಪಸ್ಥಿತಿಯಲ್ಲಿ ಜರುಗಿತು.


ಕಾರ್ಯಕ್ರಮದಲ್ಲಿ ಸೈಂಟ್‍ಜೋಸೆಫ್‍ ತಾಂತ್ರಿಕ ಕಾಲೇಜಿನ ಉಪಪ್ರಾಚಾರ್ಯ ಪ್ರೊ. ಚಿಪ್ಪಾರು ಪ್ರಾಸ್ತಾವಿಕವಾಗಿ ಮಾತುಗಳನ್ನಾಡಿದರು. ಎಸ್.ಡಿ.ಎಂಕಾಲೇಜಿನ ಗಣಿತಶಾಸ್ತ್ರ ವಿಭಾಗದ ಪ್ರೊ. ಗಣೇಶ್ ನಾಯಕ್‍ ಧನ್ಯವಾದ ಸಲ್ಲಿಸಿದರು.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top