ಶ್ರದ್ಧೆ, ಛಲದಿಂದ ಯಶಸ್ಸು ಸಾಧ್ಯ; ಶ್ರೀಕೃಷ್ಣ ಕೆ

Upayuktha
0

ಉಜಿರೆ: ಯಾವುದೇ ಕೆಲಸವನ್ನು ಪೂರ್ಣಗೊಳಿಸುವ ಮೊದಲು ಶ್ರದ್ಧೆಯಿರಬೇಕು. ಆ ಕೆಲಸ ಸಾಧ್ಯವಾಗುವುದಿಲ್ಲ ಎಂದು ಹಿಂದೆ ಸರಿಯಬಾರದು ಎಂದು ಶ್ರೀ.ಧ.ಮಂ ಕಾಲೇಜಿನ ಹಳೆಯ ವಿದ್ಯಾರ್ಥಿ, ಉಪ್ಪಿನಂಗಡಿಯ ಚಾರ್ಟೆಡ್ ಅಕೌಂಟೆಂಟ್  ಶ್ರೀಕೃಷ್ಣ ಕೆ ಹೇಳಿದರು. 


 ಶ್ರೀ.ಧ.ಮಂ ಕಾಲೇಜು ಉಜಿರೆಯ ಡಿ.ಎಡ್ ಸಭಾಂಗಣದಲ್ಲಿ ವಾಣಿಜ್ಯ ವಿಭಾಗವು ಆಯೋಜಿಸಿದ 5ನೇ ಎಸ್.ಡಿ.ಎಂ ನೆನಪಿನಂಗಳ ಹಿರಿಯ ವಿದ್ಯಾರ್ಥಿಯೊಂದಿಗಿನ ಸಂವಾದ ಕಾರ‍್ಯಕ್ರಮದ ಸರಣಿಯಲ್ಲಿ ಮಾತನಾಡಿದರು. 


ಓದಿಗೆ ಹೆಚ್ಚಿನ ಗಮನವನ್ನು ಮೀಸಲಿಡಬೇಕು. ಕನ್ನಡ ಓದಿ ಚಾರ್ಟೆಡ್ ಅಕೌಂಟ್ ಮಾಡಿದವರು ಕೂಡಾ ಇದ್ದು, ಸದಾ ಅವರೇ ನಮಗೆ ಪ್ರೇರಣೆಯಾಗಿ ಹೊರ ಹೊಮ್ಮಿದ್ದಾರೆ. ವಿದ್ಯಾರ್ಥಿಗಳಿಗೆ ಬರವಣಿಗೆಯ ಜೊತೆ ಓದು ಅಗತ್ಯ. ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿ ಸಮಯ ಪ್ರಜ್ಞೆ ಬಹಳ ಮುಖ್ಯವಾಗಿರಬೇಕು. ಭವಿಷ್ಯದಲ್ಲಿ ಏನಾಗಬೇಕು ಎಂಬುದರ ಬಗ್ಗೆ ಗುರಿ ಮತ್ತು ಅರಿವಿದ್ದಾಗ ಯಶಸ್ಸು ಸಾಧ್ಯ ಎಂದು ನುಡಿದರು. 


ಉಜಿರೆಯಲ್ಲಿ ವಿದ್ಯಾಭ್ಯಾಸ ಮಾಡಿದ ಹಲವಾರು ವಿದಾರ್ಥಿಗಳು ಇಂದು ವಿದೇಶದಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ಕೂಡಾ ಔದ್ಯೋಗಿಕವಾಗಿ ಹೆಚ್ಚಿನ ಮಟ್ಟದಲ್ಲಿ ಬೆಳೆಯುವಂತಾಗಬೇಕು. ಆದರೆ ಎಷ್ಟೇ ದೊಡ್ಡ ವ್ಯಕ್ತಿಗಳಾದರೂ ಬಂದ ಹಾದಿಯನ್ನು ಮರೆಯಬಾರದು. ಅನುಭವವು ಸವಿಯಲ್ಲ, ಅದರ ನೆನಪುಗಳು ಸವಿ ಎಂದು ಅಧ್ಯಕ್ಷ ಸ್ಥಾನ ವಹಿಸಿದ್ದ ಶ್ರೀ. ಧ.ಮಂ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎ ಕುಮಾರ್ ಹೆಗ್ಡೆ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. 


ಎಸ್.ಡಿ.ಎಂ ನೆನಪಿನಂಗಳ ಕಾರ‍್ಯಕ್ರಮದಲ್ಲಿ ಆರ್ಥಿಕವಾಗಿ ಹಿಂದುಳಿದಿರುವ ಅಂತಿಮ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ನಿಶ್ಚಿತಾ ಎ.ಪಿ ಅವರಿಗೆ ಎಸ್.ಡಿ.ಎಂ ನೆನಪಿನಂಗಳದ ಸಂಪನ್ಮೂಲ ವ್ಯಕ್ತಿ ಶ್ರೀಕೃಷ್ಣ ಕೆ 5000 ರೂಪಾಯಿಗಳ ಸಹಾಯ ಧನ ನೀಡಿದರು. 


ವೇದಿಕೆಯಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಗುರುನಾಥ ಪ್ರಭು, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಶ್ರೀನಾಥ್ ಎಂ.ಪಿ. ಪಾಲ್ಗೊಂಡಿದ್ದರು. 


ಕಾರ‍್ಯಕ್ರಮದಲ್ಲಿ ವಾಣಿಜ್ಯ ವಿಭಾಗದ ಉಪನ್ಯಾಸಕರು ಶ್ರೇಯಸ್ ಜೈನ್, ಸುಮನ್ ಜೈನ್ ಮತ್ತು ಅಂತಿಮ ವಿಭಾಗದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ‍್ಯಕ್ರಮವನ್ನು ಡಾ.ಶ್ರೀನಾಥ್ ಎಂ.ಪಿ. ಸ್ವಾಗತಿಸಿದರು. ಅಂತಿಮ ವಿಭಾಗದ ವಿದ್ಯಾರ್ಥಿನಿ ಶ್ರಾವ್ಯ ನಿರೂಪಿಸಿ, ವಂದಿಸಿದರು. 

 

ವರದಿ: ಹೇಮಾವತಿ, ಚೆಲುವಮ್ಮ 


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

Post a Comment

0 Comments
Post a Comment (0)
Advt Slider:
To Top