ಜೆಇಇ ಎಡ್ವಾನ್ಸ್ಡ್‌: ವಿವೇಕಾನಂದ ಪಿಯು ಕಾಲೇಜಿನ ವಿದ್ಯಾರ್ಥಿಗಳಿಗೆ ರ್‍ಯಾಂಕ್

Upayuktha
0

                ಐ.ಐ.ಟಿ. ಸಂಸ್ಥೆಗಳ ಪ್ರವೇಶಕ್ಕೆ ಅರ್ಹತೆ


ಪುತ್ತೂರು:
ಕೇಂದ್ರ ಸರಕಾರದ ಎನ್.ಟಿ.ಎ. ನಡೆಸುವ ರಾಷ್ಟ್ರೀಯ ಮಟ್ಟದ ಜೆ.ಇ.ಇ. ಎಡ್ವಾನ್ಸ್ಡ್ ಪರೀಕ್ಷೆಯಲ್ಲಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ವರ್ಷಿತ್ ಜೆ ಮತ್ತು ಅಮೋಘ್ ಎ.ಪಿ. ಉತ್ತಮ ರ್‍ಯಾಂಕುಗಳನ್ನು ಗಳಿಸಿ ರಾಷ್ಟ್ರಮಟ್ಟದ ಐ.ಐ.ಟಿ. ಸಂಸ್ಥೆಗಳ ಪ್ರವೇಶಕ್ಕೆ ಅರ್ಹತೆ ಪಡೆದಿದ್ದಾರೆ. 


ವರ್ಷಿತ್ ಜೆ ರವರು 108 ಅಂಕಗಳನ್ನು ಗಳಿಸುವ ಮೂಲಕ ಸಾಮಾನ್ಯ ವರ್ಗದಲ್ಲಿ 15440 ರ್‍ಯಾಂಕ್, ಒ.ಬಿ.ಸಿ. ವಿಭಾಗದಲ್ಲಿ 3806 ರ್‍ಯಾಂಕ್ ಗಳಿಸಿದ್ದಾರೆ. ಇತನು ಬಂಟ್ವಾಳ ತಾಲೂಕಿನ ಮೂಡ ಭಂಡಾರಿ ಬೆಟ್ಟುವಿನ ಜಯಂತ ಆರ್ ಮತ್ತು ಸೌಮ್ಯ ಜೆ ದಂಪತಿಗಳ ಪುತ್ರ.


ಅಮೋಘ್ ಎ.ಪಿ. ರವರು 53 ಅಂಕಗಳನ್ನು ಗಳಿಸುವ ಮೂಲಕ ಯಸ್.ಟಿ. ವಿಭಾಗದಲ್ಲಿ 1561 ರ್‍ಯಾಂಕ್ ಗಳಿಸಿದ್ದಾರೆ. ಇತನು ಪುತ್ತೂರು ಬನ್ನೂರಿನ ಅಶೋಕ್ ಮತ್ತು ಚೇತನವಾಣಿ ಅವರ ಪುತ್ರ. ವಿದ್ಯಾರ್ಥಿಗಳ ಅತ್ಯುನ್ನತ ಸಾಧನೆಯನ್ನು ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಮತ್ತು ಅಧ್ಯಾಪಕರು ಅಭಿನಂದಿಸಿದ್ದಾರೆ.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

إرسال تعليق

0 تعليقات
إرسال تعليق (0)
To Top