ಪುತ್ತೂರು: ಫಿಲೋಮಿನಾ ಪ್ರಥಮ ಪಿಯುಸಿ ತರಗತಿ ಪ್ರಾರಂಭೋತ್ಸವ

Upayuktha
0

ಪುತ್ತೂರು: ವಿದ್ಯಾರ್ಥಿಗಳು ಜೀವನದಲ್ಲಿ ಚೆನ್ನಾಗಿ ಓದಿ ಉತ್ತಮ ಹವ್ಯಾಸಗಳನ್ನು ರೂಢಿಸಿಕೊಂಡು ಇನ್ನೊಬ್ಬರಿಗೆ ಸಹಾಯ ಮಾಡುವ ಗುಣವನ್ನು ಮೈಗೂಡಿಸಿಕೊಂಡಾಗ ಸಿಗುವಂತ ಸಂತೋಷ ಬೇರೆಎಲ್ಲಿಯೂ ಸಿಗಲು ಸಾಧ್ಯವಿಲ್ಲ. ಎಂದು ಮಾಯಿದೆದೇವುಸ್ ಶಿಕ್ಷಣ ಸಂಸ್ಥೆಯ ಸಂಚಾಲಕರಾದರೆ. ಫಾ.ಲಾರೆಸ್ಸ್ ಮಸ್ಕರೇನಸ್ ಹೇಳಿದರು.


ಜೂನ್ 2ರಂದು ಪುತ್ತೂರಿನ ಫಿಲೋಮಿನ ಪದವಿ ಪೂರ್ವಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಶೈಕ್ಷಣಿಕ ವರ್ಷದಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದಅವರುದೇವರ ಪ್ರಾರ್ಥನೆಯಿಂದ ಮನುಷ್ಯನಜೀವನದಲ್ಲಿ ಬೆಳಕು ಮೂಡಲು ಸಾಧ್ಯದೇವರಲ್ಲಿ ನಂಬಿಕೆ ಮುಖ್ಯ ಪ್ರತಿಯೊಂದು ವ್ಯಕ್ತಿಗೂ ವಸ್ತುವಿಗೂ ಗೌರವವನ್ನುಕೊಡಬೇಕುಎಂದು ಹೇಳಿದರು. 


ಮುಖ್ಯ ಅತಿಥಿಗಳಾಗಿ ಆಗಮಿಸಿದ  ಕ್ಯಾಂಪಸ್ ನಿರ್ದೇಶಕರಾದರೆ.ಫಾ. ಸ್ಟ್ಯಾನಿ ಪಿಂಟೋಅವರು ಮಾತಾನಾಡಿದೃಢವಾದ ನಂಬಿಕೆ ತಾಳ್ಮೆ ಏಕಾಗ್ರತೆಇದ್ದಾಗ ಬದುಕನ್ನು ಸುಲಭವಾಗಿಸಬಹುದು. ವಿದ್ಯಾರ್ಥಿಗಳಲ್ಲಿರುವ ಗುರಿ ಕನಸುಗಳನ್ನು ನಿಜವಾಗಿಸಲು ಸೂಕ್ತ ವೇದಿಕೆ ಇದಾಗಿದೆಎಂದರು. 


ರಕ್ಷಕ ಶಿಕ್ಷಕ ಸಂಘದಅಧ್ಯಕ್ಷರಾದ ಮಾಮಚ್ಚನ್ ಮಾತಾನಾಡಿ ಪ್ರಾಥಮಿಕ ಪ್ರೌಢಶಾಲಾ ಹಂತದವರೆಗೆ ವಿದ್ಯಾರ್ಥಿಗಳಿಗೆ ಗುರಿಯಿಲ್ಲದಿದ್ದರೂ  ಮುಂದಿನ ಪಿಯುಸಿ ಹಂತದಲ್ಲಿಉತ್ತಮವಾದಗುರಿಯನ್ನು ಇಟ್ಟುಕೊಳ್ಳಲು ಸಾಧ್ಯವಾಗುತ್ತದೆ, ವಿದ್ಯಾರ್ಥಿಗಳು ಬದುಕಿನಲ್ಲಿ ಯಶಸ್ವಿಯಾಗಲು ಉತ್ತಮಆಯ್ಕೆ ಮುಖ್ಯವಾಗಿರುತ್ತದೆಎಂದರು.


ಇದೇ ಸಂದರ್ಭದಲ್ಲಿಚರ್ಚ್ ಪಾಲನಾ ಸಮಿತಿಉಪಾಧ್ಯಕ್ಷರಾದಜೆರಾಲ್ಡ್ ಡಿ. ಕೊಸ್ತಾ ಮಾತಾನಾಡಿ ವಿದ್ಯಾರ್ಥಿಗಳು ಕಷ್ಟಪಟ್ಟುಇಷ್ಟಪಟ್ಟು ಓದಿ ಮುಂದಕ್ಕೆ ಬರಬೇಕು ಒಳ್ಳೆಯ ಸಾಧನೆಛಲ ಇದ್ದಾಗಉತ್ತಮ ಭವಿಷ್ಯ ಸಾಧ್ಯಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಕಾಲೇಜಿನ ಪ್ರಾಂಶುಪಾಲರಾದರೆ.ಫಾ. ಅಶೋಕ್‍ರಾಯನ್ ಕಾಸ್ತಾ ಪ್ರಾಸ್ತಾವಿಕ ನುಡಿಗಳ ನುಡಿದರು.


ಕಾರ್ಯಕ್ರಮದಲ್ಲಿಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ 2023ನೇ ಸಾಲಿನ ಎಸ್‍ಎಸ್‍ಎಲ್ ಸಿ ವಾಷಿಪರೀಕ್ಷೆಯಲ್ಲಿಅತಿ ಹೆಚ್ಚು ಅಂಕ ಗಳಿಸಿದ  ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಪ್ರದರ್ಶನ ಕಲಾ ಸಂಘದ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಸಂಖ್ಯಾ ಶಾಸ್ತ್ರ ವಿಭಾಗದಉಪನ್ಯಾಸಕರದ ಭರತ್ ಜಿ. ಪೈ ಸ್ವಾಗತಿಸಿ ಇಂಗ್ಲೀಷ್ ವಿಭಾಗದಉಪನ್ಯಾಸಕಿ ಸುಮಾ ಪಿ ಆರ್ ವಂದಿಸಿದರು. ಇಂಗ್ಲಿಷ್ ವಿಭಾಗದಉಪನ್ಯಾಸಕಿ ಸುಮಾ ಡಿ ಕಾರ್ಯಕ್ರಮ  ನಿರೂಪಿಸಿದರು.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top