ಅಂಬಿಕಾ ಪದವಿಪೂರ್ವ ವಿದ್ಯಾಲಯ: ವಿದ್ಯಾರ್ಥಿ ಸಂಘದ ಚುನಾವಣೆ

Upayuktha
0

ಪುತ್ತೂರು: ಪ್ರಜಾ ಪ್ರಭುತ್ವವನ್ನು ಉಳಿಸಿಕೊಂಡು ಉತ್ತಮ ದೇಶಕಟ್ಟುವ ಜವಾಬ್ದಾರಿ ಪ್ರತಿಯೊಬ್ಬನದ್ದು. ತಮ್ಮ ಅಮೂಲ್ಯ ಮತವನ್ನು ಚಲಾಯಿಸಿ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಜವಾಬ್ದಾರಿ ಪ್ರತಿಯೊಬ್ಬ ಪ್ರಜೆಗೂ ಇದೆ. ವಿದ್ಯಾವಂತರು ಈ ಹೊಣೆಗಾರಿಕೆಯಿಂದ ನುಣುಚಿಕೊಳ್ಳಬಾರದು. ಉತ್ತಮ ರಾಜಕಾರಣಿಗಳು, ಎಂ.ಎಲ್.ಎ.ಗಳು, ಎಂ.ಪಿ.ಗಳು, ಜನನಾಯಕರನ್ನು ನಿರ್ಮಾಣ ಮಾಡುವುದು ವಿದ್ಯಾಲಯಗಳ ಮಹತ್ತರ ಜವಾಬ್ದಾರಿ. ಜನಸೇವೆ, ಸಮಾಜಸೇವೆ, ಮತದಾನದ ಮಹತ್ವವನ್ನು ವಿದ್ಯಾರ್ಥಿಗಳಾಗಿರುವಾಗಲೇ ತಿಳಿದುಕೊಂಡಿರಬೇಕು. ಅದಕ್ಕಾಗಿ ಅಂಬಿಕಾದಲ್ಲಿ ಪ್ರತಿವರ್ಷ ವಿದ್ಯಾರ್ಥಿ ಸಂಘದ ಚುನಾವಣೆ ಅರ್ಥಪೂರ್ಣವಾಗಿ ನಡೆಯುತ್ತದೆ. ಸ್ವಚ್ಛತೆ, ಗಿಡ ನೆಡುವ ಕಾರ್ಯಕ್ರಮದಿಂದ ಸಸ್ಯ ಸಂರಕ್ಷಣೆ, ಸೈನಿಕರನ್ನು ಸನ್ಮಾನಿಸುವುದು, ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಜನರಿಗೆ ಸಹಾಯ ಮುಂತಾದ ಎಲ್ಲಾ ಸತ್ಕಾರ್ಯ, ಸಮಾಜ ಸೇವೆಗೆ ಅಂಬಿಕಾದ ಹಿರಿಯ ವಿದ್ಯಾರ್ಥಿಗಳು ಮೇಲ್ಪಂಕ್ತಿ ಹಾಕಿಕೊಟ್ಟಿರುತ್ತಾರೆ. ಉತ್ತಮ ಜನನಾಯಕರು ಅಂಬಿಕಾ ವಿದ್ಯಾಲಯದಿಂದ ಮೂಡಿಬಂದು ಸದೃಢ ಭಾರತದ ನಿರ್ಮಾಣವಾಗಲಿ. ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ವಿವಿಧ ಖಾತೆಗಳಿಗೆ ಸ್ಪರ್ಧಿಸುವ ವಿದ್ಯಾರ್ಥಿಗಳಿಗೆ ಶುಭವಾಗಲಿ ಎಂದು ನಟ್ಟೋಜ ಫೌಂಡೇಶನ್ ಟ್ರಸ್ಟ್‍ನ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜರು ಹೇಳಿದರು. ಅವರು ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಪದವಿಪೂರ್ವ ವಿದ್ಯಾಲಯ ನೆಲ್ಲಿಕಟ್ಟೆಯ ವಿದ್ಯಾರ್ಥಿ ಸಂಘದ ಚುನಾವಣೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಪನ್ಯಾಸಕಿ ಶೈನಿ ಕೆ ಜೆ ಕಾರ್ಯಕ್ರಮ ನಿರೂಪಿಸಿದರು. ಅಭ್ಯರ್ಥಿಗಳು ತಮ್ಮನ್ನು ಪರಿಚಯಿಸಿ ಮತಯಾಚಿಸಿದರು. ತದನಂತರ ಚುನಾವಣಾ ಪ್ರಕ್ರಿಯೆ ಯಥಾ ಪ್ರಕಾರವಾಗಿ ನಡೆಯಿತು. 

ಉಪನ್ಯಾಸಕರಾದ ಪ್ರದೀಪ್ ಕೆ ವೈ ಮತ್ತು ಶೈನಿ ಕೆ ಜೆ ಚುನಾವಣಾಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದರು. ಉಪನ್ಯಾಸಕರು ಸಹಕರಿಸಿದರು. ಮತ ಎಣಿಕೆಯೊಂದಿಗೆ ಚುನಾವಣಾ ಪ್ರಕ್ರಿಯೆ ಕೊನೆಗೊಂಡಿತು. 


ವಿಜೇತ ಅಭ್ಯರ್ಥಿಗಳು:

ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ದ್ವಿತೀಯ ಪಿಯುಸಿಯ ನಿಶಾಂತ್ ಬಿ ಎಮ್ ಹಾಗೂ ಉಪಾಧ್ಯಕ್ಷರಾಗಿ ದ್ವಿತೀಯ ಪಿಯುಸಿಯ ಸಮೃದ್ಧಿ ಎಸ್ ರೈ ಆಯ್ಕೆಯಾದರು. ಕಾರ್ಯದರ್ಶಿಯಾಗಿ ದ್ವಿತೀಯ ಪಿಯುಸಿಯ ಶಮನ್ ಕೃಷ್ಣ ಕೆ, ಜತೆ ಕಾರ್ಯದರ್ಶಿಯಾಗಿ  ದ್ವಿತೀಯ ಪಿಯುಸಿಯ ವಿಕೇಶ್ ಪ್ರಭು ಆಯ್ಕೆಯಾದರು. ಆರೋಗ್ಯ ಮತ್ತು ಸ್ವಚ್ಛತಾ ಮಂತ್ರಿಯಾಗಿ ದ್ವಿತೀಯ ಪಿಯುಸಿಯ ಸಮೃದ್ಧಿ ಶೆಟ್ಟಿ ಬಿ, ಉಪಮಂತ್ರಿಯಾಗಿ ಪ್ರಥಮ ಪಿಯುಸಿಯ ಅದಿತಿ ನಾಯಕ್ ಆಯ್ಕೆಯಾದರು. ಕ್ರೀಡಾಮಂತ್ರಿಯಾಗಿ ದ್ವಿತೀಯ ಪಿಯುಸಿಯ ಶ್ರೀಮಾನ್ ಘಾಟೆ, ಉಪಮಂತ್ರಿಯಾಗಿ ಪ್ರಥಮ ಪಿಯುಸಿಯ ಚಿಂತನ್ ಎಂ ಶೆಟ್ಟಿ ಆಯ್ಕೆಯಾದರು. ಶಿಸ್ತುಮಂತ್ರಿಯಾಗಿ ದ್ವಿತೀಯ ಪಿಯುಸಿಯ ತನ್ಮಯಿ ಡಿ, ಉಪಮಂತ್ರಿಯಾಗಿ ಪ್ರಥಮ ಪಿಯುಸಿಯ ಇಶಾನ್ ಎಸ್ ಭಟ್ ಆಯ್ಕೆಯಾದರು. ಶಿಕ್ಷಣ ಮಂತ್ರಿಯಾಗಿ ದ್ವಿತೀಯ ಪಿಯುಸಿಯ ಹರ್ಷಿತಾ, ಉಪಮಂತ್ರಿಯಾಗಿ ಪ್ರಥಮ ಪಿಯುಸಿಯ ವರ್ಷಿಣಿ ಆಳ್ವ ಆಯ್ಕೆಯಾದರು. ಸಾಂಸ್ಕೃತಿಕ ಮಂತ್ರಿಯಾಗಿ ದ್ವಿತೀಯ ಪಿಯುಸಿಯ ಅನುಪಮಾ ಸಿ, ಉಪಮಂತ್ರಿಯಾಗಿ ಪ್ರಥಮ ಪಿಯುಸಿಯ ವಿಕಾಸ್ ಬಿ ಆಯ್ಕೆಯಾದರು.  

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top