ಕು. ಸಂಧ್ಯಾ ಮಣಿಕಂಡನ್‌ರವರ "ಮನಮೋಹಕ ನೃತ್ಯ ಪ್ರದರ್ಶನ"

Upayuktha
0

 

ಬೆಂಗಳೂರು: ನೃತ್ಯ ದಿಶಾ ಟ್ರಸ್ಟಿನ ಸಂಸ್ಥಾಪಕರೂ ಗುರುಗಳೂ ಆದ  'ಕಲಾಭೂಷಿಣಿ' ದರ್ಶಿನಿ ಮಂಜುನಾಥ್ ಅವರ ಶಿಷ್ಯೆ ಕು. ಸಂಧ್ಯಾ ಮಣಿಕಂಡನ್ ರವರ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮವು ಇತ್ತೀಚೆಗೆ ನಗರದ ಜೆ.ಸಿ. ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರದಲ್ಲಿ ವಿಜೃಂಭಣೆಯಿಂದ  ಜರುಗಿತು. 


ಈ ವಿಶೇಷ ಕಾರ್ಯಕ್ರಮಕ್ಕೆ ಡಾ. ಎಂ. ಸೂರ್ಯಪ್ರಸಾದ್, ಗುರು. ಸುನಂದಾದೇವಿ, ಗುರು.ಸೀತಾ ಗುರುಪ್ರಸಾದ್ ಮತ್ತು ಬಾಲು ಇವರುಗಳು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.


ಮೊದಲಿಗೆ ಭರತನಾಟ್ಯ ಮಾರ್ಗದಲ್ಲಿನ ವಾಲಚಿ ರಾಗದ ಪುಷ್ಪಾಂಜಲಿ ಯೊಂದಿಗೆ ಸಂಧ್ಯಾ ಕಾರ್ಯಕ್ರಮ ಪ್ರಾರಂಭಿಸಿದಳು. ತದನಂತರ ನರ್ತಿಸಿದ ಕೃತಿ ವರವಲ್ಲಭ ರಮನ  ಗಣಪತಿ ಗಜಾನನ ನಾದ ಕಥಾ ಪ್ರಸಂಗವನ್ನು ಅಮೋಘವಾಗಿ ಅಭಿನಯಿಸಿದಳು.


ಮುಂದಿನ ಆಯ್ಕೆ  ಚೂರ್ಣಿಕೆ ರಂಗಾದಿ ದೇವತೆಗೆ ವಂದನೆ ಸಲ್ಲಿಸಿ ಅರ್ಧನಾರೀಶ್ವರ ಕವಿತ್ವಂ ನಲ್ಲಿ ಶಿವ ಹಾಗೂ ಶಕ್ತಿಯ ನೃತ್ಯ ಅಮೋಘವಾಗಿ 'ರಾಗ ಮಾಲಿಕೆ' ಹಾಗೂ 'ತಾಳ ಮಾಲಿಕೆ'ಯಲ್ಲಿ ಮೂಡಿಬಂತು.


ಸರಸಿಜಾಕ್ಷುಲು ಶಬ್ದo ನಲ್ಲಿ ಅವತಾರ ಪುರುಷ ವಿಷ್ಣು, ಕೃಷ್ಣನ ಅವತಾರದಲ್ಲಿ ಮಾಡಿದ ಕಥಾ ಪ್ರಸಂಗವನ್ನು ಅದ್ಬುತವಾಗಿ ಅಭಿನಯಿಸಿ ರಂಗಪ್ರವೇಶದ ಮುಖ್ಯ ಭಾಗ ವರ್ಣ ಇಂದು ರಂಜಿನಿ ರಾಗದ ಶ್ರೀ ಮಧುರೈ ಮುರಳೀಧರನ್ ರವರ ಸಿಂಹವಾಹಿನಿ ಶ್ರೀ ರಾಜರಾಜೇಶ್ವರಿ ವರ್ಣದಲ್ಲಿ ಗುರು. ದರ್ಶಿನಿ ಅವರ ಸುಂದರ ಸಂಯೋಜನೆಗೆ  ಅದ್ಬುತವಾಗಿ ನೃತ್ಯ ಹಾಗೂ ಅಭಿನಯಗಳಿಂದ  ರಸಿಕರ ಮನ ಗೆದ್ದಳು.


ಎರಡನೆ ಭಾಗದಲ್ಲಿ   ಮನೋಹರವಾಗಿ ನವರಸ ಅಭಿನಯಿಸಿ ಸಂಧ್ಯಾ ತನ್ನ ಗುರುಗಳ ವಿದ್ವತ್ ಪೂರ್ಣ ಸಂಯೋಜನೆಗೆ ಸೈ ಅನ್ನಿಸುವಂತೆ ಅಭಿನಯಿಸಿದಳು. 


ಮುಂದಿನ ಕೃತಿ ಮೀನಾಕ್ಷಿ ಸುಂದರವಾಗಿ ಮೂಡಿಬಂತು. ತಾಯಿ ಯಶೋದೆಯ ಕೃಷ್ಣ ಪುರಂದರದಾಸರ 'ಆಡ ಹೋದಲ್ಲೆ ಮಕ್ಕಳು' ದೇವರನಾಮದಲ್ಲಿ ಕೃಷ್ಣನ  ಜನ್ನನ, ಪೂತನಿ ಮೋಕ್ಷ ದೃಶ್ಯಗಳನ್ನು ಅದ್ಬುತವಾಗಿ ನರ್ತಸಿದಳು. 


ಹಂಸಾನಂದಿ ತಿಲ್ಲಾನದಲ್ಲಿ ಕೊರ್ವೆಗಳು ಅದ್ಬುತವಾಗಿ ಸಂಯೋಜನೆ ಮಾಡಿದ್ದರು ಗುರು ದರ್ಶಿನಿ ಅವರು. ಈ ಸಂಯೋಜನೆ ಪ್ರೇಕ್ಷಕರ, ಸಭೆಯಲ್ಲಿದ್ದ ಗಣ್ಯರ ಪ್ರಸಂಶೆಗೆ ಪಾತ್ರವಾಯಿತು.

ದಶಾವತಾರ ಮಂಗಳ ದೊಂದಿಗೆ ರಂಗಪ್ರವೇಶ ಕಾರ್ಯಕ್ರಮವು ಯಶಸ್ವಿಯಾಗಿ ಮೂಡಿಬಂತು.

ಗುರು.ದರ್ಶಿನಿ ಅವರ ಸಂಯೋಜನೆ ಕು.ಸಂಧ್ಯಾ ಅವರ ಅಭಿನಯಕ್ಕೆ ರಸಿಕರು ಪ್ರಸಂಶೆ ವ್ಯಕ್ತಪಡಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top