ವೇಟ್‍ಲಿಫ್ಟಿಂಗ್: ಸಮಗ್ರ ಪ್ರಶಸ್ತಿ ಎತ್ತಿದ ಆಳ್ವಾಸ್

Upayuktha
0

ಮಂಗಳೂರು ವಿ.ವಿ. ಅಂತರ ಕಾಲೇಜು ಪುರುಷ ಮತ್ತು ಮಹಿಳಾ ಚಾಂಪಿಯನ್‍ಶಿಪ್


ವಿದ್ಯಾಗಿರಿ:
ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ಅಂತರ ಕಾಲೇಜು ಪುರುಷ ಮತ್ತು ಮಹಿಳಾ ವಿಭಾಗದ ವೇಯ್ಟ್ ಲಿಫ್ಟಿಂಗ್ ಚಾಂಪಿಯನ್‍ಶಿಪ್ ಪ್ರಶಸ್ತಿಯನ್ನು ಆಳ್ವಾಸ್ ಕಾಲೇಜು ಎತ್ತಿ ಹಿಡಿದಿದೆ. 


ಮಂಗಳೂರು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ಸಹಯೋಗದಲ್ಲಿ ಆಳ್ವಾಸ್ ದೈಹಿಕ ಶಿಕ್ಷಣ ಕಾಲೇಜು ಕೃಷಿಸಿರಿ ವೇದಿಕೆಯಲ್ಲಿ ಹಮ್ಮಿಕೊಂಡ ಪಂದ್ಯಾವಳಿಯಲ್ಲಿ ಆಳ್ವಾಸ್ ಸಮಗ್ರ ಚಾಂಪಿಯನ್ ಆಯಿತು. 


ಮಹಿಳಾ ವಿಭಾಗದಲ್ಲಿ ಸತತ 19ನೇ ಬಾರಿ ಚಾಂಪಿಯನ್ ಆದ ಆಳ್ವಾಸ್ ಕಾಲೇಜು ತಂಡವು ‘ಶಿರ್ವ ಬ್ಲಾಸಮ್ ಮ್ಯಾನ್ಸನ್ ಸೆಲೆಸ್ಟಿನ್ ಡಿಸೋಜ ಟ್ರೋಫಿ’ ಎತ್ತಿ ಹಿಡಿಯಿತು. ಆಳ್ವಾಸ್ 71 ಅಂಕ ಪಡೆದರೆ, ರನ್ನರ್ ಅಪ್ ಎಸ್‍ಡಿಎಂ ಉಜಿರೆ 39 ಅಂಕಗಳಿಗೆ ತೃಪ್ತಿ ಪಟ್ಟಿತು. 


ಪುರುಷರ ವಿಭಾಗದಲ್ಲಿ 17ನೇ ಬಾರಿಗೆ ಚಾಂಪಿಯನ್ ಆದÀ ಆಳ್ವಾಸ್ ಕಾಲೇಜು ತಂಡವು ‘ಪ್ರೊ. ರಿಚರ್ಡ್ ರೆಬೆಲ್ಲೊ ರೋಲಿಂಗ್ ಟ್ರೋಫಿ’ ಎತ್ತಿ ಹಿಡಿಯಿತು. ಆಳ್ವಾಸ್ 61 ಅಂಕ ಪಡೆದರೆ, 58 ಅಂಕ ಪಡೆದ ಎಸ್‍ಡಿಎಂ ರನ್ನರ್ ಅಫ್ ಪ್ರಶಸ್ತಿ ಪಡೆಯಿತು. 


ಆಳ್ವಾಸ್ ಕಾಲೇಜಿನ ಲಕ್ಷ್ಮೀ ಬಿ. ಹಾಗೂ ಜೇಮ್ಸ್ ಕ್ಯಾರೀ ಕ್ರಮವಾಗಿ ಟೂರ್ನಿಯ ಮಹಿಳಾ ಮತ್ತು ಪುರುಷರ ವಿಭಾಗದ ‘ಬೆಸ್ಟ್ ಲಿಫ್ಟರ್ ಪ್ರಶಸ್ತಿ’ ಪಡೆದರು. 


ಸಮಾರೋಪ:

ಸೇನೆಯಲ್ಲಿನ ನಿವೃತ್ತ ತರಬೇತುದಾರ ವಿಶ್ವನಾಥ್ ಗೌಡ ಮಾತನಾಡಿ, ‘ಸೋಲುವ, ಗೆಲ್ಲುವ ಮಾತು ಕ್ರೀಡೆಯಲ್ಲಿ ಬೇಡ. ಇಲ್ಲಿ ಪಾಲ್ಗೊಳ್ಳುವಿಕೆ ಮುಖ್ಯ’ ಎಂದರು. 


ವಿದ್ಯಾಭ್ಯಾಸದ ಜೊತೆಗೆ ಕ್ರೀಡೆಯನ್ನು ಮುಂದುವರಿಸಿ. ಕ್ರೀಡೆ ವಿಶೇಷ ವಿಷಯ. ನಿಮ್ಮ ಸಾಮಥ್ರ್ಯ ಹೆಚ್ಚಿಸಿ, ಕ್ರೀಡೆ, ಕಲೆ ಯಾವುದೇ ವಿಷಯವಾದರೂ ಇಂದು ಅವಕಾಶ ವಿಪುಲವಾಗಿದೆ’ ಎಂದರು. 


ಮಂಗಳೂರು ವಿಶ್ವವಿದ್ಯಾಲಯ ದೈಹಿಕ ಶಿಕ್ಷಣ ವಿಭಾಗದ ಸಹ ಪ್ರಾಧ್ಯಾಪಕ   ಹರಿದಾಸ್ ಕುಳೂರು, ಆಳ್ವಾಸ್ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ಪ್ರಾಂಶುಪಾಲ ಮಧು ಜಿ. ಆರ್, ‘ಏಕಲವ್ಯ’ ಪ್ರಶಸ್ತಿ ವಿಜೇತ, ಅಂತರರಾಷ್ಟ್ರೀಯ ಲಿಫ್ಟರ್ ಪುಷ್ಪ ರಾಜ್ ಹೆಗ್ಡೆ ಇದ್ದರು. ವಿದ್ಯಾರ್ಥಿ ಪ್ರಖ್ಯಾತ್ ನಿರೂಪಿಸಿ,   ಆಳ್ವಾಸ್ ವೇಟ್‍ಲಿಫ್ಟಿಂಗ್ ತರಬೇತುದಾರ ಪ್ರಮೋದ್ ಶೆಟ್ಟಿ ವಂದಿಸಿದರು. 

 

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top