ನಾಳೆ ತುಳು ಕೂಟ ಕುಡ್ಲ ಬಂಗಾರ್ ಪರ್ಬ ಸರಣಿ ಕಾರ್ಯಕ್ರಮ-4

Upayuktha
0

ಮಂಗಳೂರು: ತುಳುಕೂಟ ಕುಡ್ಲದ ಬಂಗಾರ್ ಪರ್ಬ ಸರಣಿ ಕಾರ್ಯಕ್ರಮದಂಗವಾಗಿ ನಾಲ್ಕನೇ ಕಾರ್ಯಕ್ರಮವು ಇದೇ ಬರುವ ಜೂ.17ರ ಶನಿವಾರ ಶ್ರೀ ಭಾರತೀ ಕಾಲೇಜಿನ ಸದನದಲ್ಲಿ ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ.

ಯಕ್ಷಗಾನದಲ್ಲಿ ತುಳು ಸಾಹಿತ್ಯ ಎಂಬ ವಿಷಯದಲ್ಲಿ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ದಯಾನಂದ ಕತ್ತಲ್‌ಸಾರ್ ವಿಷಯ ಮಂಡಿಸಲಿದ್ದಾರೆ.

ಸಭೆಯಲ್ಲಿ ಶ್ರೀಭಾರತೀ ಕಾಲೇಜ್ ಆಫ್ ಇನಿಸ್ಟಿಟ್ಯೂಷನ್ ಕಾರ್ಯದರ್ಶಿ ಶ್ರೀಕೃಷ್ಣ ಭಟ್ ನೀರಮೂಲೆ, ಖಚಾಂಚಿ ಉದಯಶಂಕರ ನೀರ್ಪಾಜೆ, ಶ್ರೀಭಾರತೀ ಪ.ಪೂ. ಕಾಲೇಜಿನ ಪ್ರಾಂಶುಪಾಲೆ ಗಂಗಾರತ್ನ, ಕದ್ರಿ ನಗರದ ಗೋ ಸಂಯೋಜಕ ಸರವು ರಮೇಶಭಟ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.


ಉಪನ್ಯಾಸದ ಬಳಿಕ ಅಕ್ಷಯ ಸುವರ್ಣರ ಸಂಯೋಜನೆಯಲ್ಲಿ "ರವಿರತ್ನೊ" ಎಂಬ ತುಳು ಬಯಲಾಟ ನಡೆಯಲಿದೆ. ಇದೊಂದು ಉಚಿತ ಕಾರ್ಯಕ್ರಮವಾಗಿದ್ದು, ಎಲ್ಲರನ್ನೂ ಹಾರ್ದಿಕವಾಗಿ ತುಳುಕೂಟದ ಅಧ್ಯಕ್ಷ ಮರೋಳಿ ದಾಮೋದರ ನಿಸರ್ಗ, ಬಿ ಹಾಗೂ ಪ್ರಧಾನ ಕಾರ್ಯದರ್ಶಿ ವರ್ಕಾಡಿ ರವಿ ಅಲೆವೂರಾಯ ಜಂಟಿ ಪತ್ರಿಕಾ ಪ್ರಕಟಣೆಯ ಮೂಲಕ ಸ್ವಾಗತಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
To Top