ಫರಂಗಿಪೇಟೆ ಶ್ರೀರಾಮ ಶಾಲೆಗೆ ಪಟ್ಲ ಸಂಭ್ರಮದಲ್ಲಿ ಬಹುಮಾನ

Upayuktha
0

ಮಂಗಳೂರು: ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಶ್ರೀರಾಮ ವಿದ್ಯಾ ಸಂಸ್ಥೆ ಅರ್ಕುಳ ಫರಂಗಿಪೇಟೆ ಇಲ್ಲಿನ ಮಕ್ಕಳ ಯಕ್ಷಗಾನ ತಂಡ 'ಪಟ್ಲ ಸಂಭ್ರಮ- 2023'ರ ಪ್ರೌಢ ಶಾಲಾ ವಿಭಾಗದ  ಯಕ್ಷಗಾನ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದು ರೂ.20,000 ನಗದು ಬಹುಮಾನ ಗಳಿಸಿದೆ.


ವೃತ್ತಿಪರ ಕಲಾವಿದರಂತೆ, ಅಭಿನಯ, ಸ್ಪಷ್ಟ ಉಚ್ಚಾರದೊಂದಿಗೆ ಅರ್ಥಗಾರಿಕೆ, ವೇಷ ಭೂಷಣಗಳ ಒಟ್ಟಂದದಲ್ಲಿ ಅವರು ಅಭಿನಯಿಸಿದ 'ವೀರ ತರಣಿಸೇನ' ಪ್ರಸಂಗಕ್ಕೆ ಈ ಬಹುಮಾನ ಲಭಿಸಿದೆ. ಅಲ್ಲದೆ ರಾವಣ, ವಿಭೀಷಣ ಮತ್ತು ಸರಮೆ ಪಾತ್ರಧಾರಿಗಳು ವೈಯಕ್ತಿಕ ಪ್ರಶಸ್ತಿಗೂ ಭಾಜನರಾಗಿದ್ದಾರೆ.


ವಿದ್ಯಾರ್ಥಿಗಳಿಗೆ ಅಭಿನಂದನೆ: 

ತಂಡದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಅರ್ಕುಳ ಫರಂಗಿಪೇಟೆ ಶ್ರೀರಾಮ ವಿದ್ಯಾ ಸಂಸ್ಥೆಯಲ್ಲಿ ಅಭಿನಂದನಾ ಕಾರ್ಯಕ್ರಮ ಜರಗಿತು. ಯಕ್ಷಗಾನವನ್ನು ಸಂಯೋಜಿಸಿ ಯಶಸ್ಸಿಗೆ ಕಾರಣರಾದ   ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ಎ.ಕೆ ಜಯರಾಮ ಶೇಕರನ್ನೂ ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು. ಶಾಲಾಭಿವೃದ್ಧಿ ಸಮಿತಿ ಮತ್ತು ಹಳೆ ವಿದ್ಯಾರ್ಥಿ ಸಂಘದ ಸದಸ್ಯರು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top