ಎಂಸಿಎಫ್‌ ನಿರ್ಮಿತ ಕುಳೂರು ಪ್ರಾಥಮಿಕ ಆರೋಗ್ಯ ಕೇಂದ್ರ ಉದ್ಘಾಟನೆ

Chandrashekhara Kulamarva
0

ಮಂಗಳೂರು: MCF ವತಿಯಿಂದ ನಿರ್ಮಿಸಿಕೊಟ್ಟ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ಕುಳೂರು ಇದರ ಮೊದಲ ಮಹಡಿಯ ಕಟ್ಟಡವನ್ನು ಮಂಗಳೂರು ನಗರ ಉತ್ತರ ಶಾಸಕರಾದ ಡಾ. ಭರತ್ ಶೆಟ್ಟಿಯವರು ಲೋಕಾರ್ಪಣೆಗೊಳಿಸಿದರು.


ಶಾಸಕರಾದ ಡಾ. ಭರತ್ ಶೆಟ್ಟಿಯವರು ಆರೋಗ್ಯ ಕ್ಷೇತ್ರದಲ್ಲಿ ವಿಶೇಷವಾದ ಅಭಿವೃದ್ಧಿಯ ಕಾಳಜಿಯನ್ನು ಹೊಂದಿದ್ದು, ಅದಕ್ಕೆ ಸೂಕ್ತ ಅನುದಾನವನ್ನು ಹೊಂದಿಸಲು ಪ್ರಮುಖ ಕಾರ್ಯಯೋಜನೆ ಹೊಂದಿರುವ ಭಾಗವಾಗಿ MCF ಕಂಪೆನಿಗೆ ವಿಶೇಷ ಶಿಫಾರಸ್ಸು ಮಾಡಿ ಕಂಪೆನಿಯ ಸಾಮಾಜಿಕ ಬದ್ಧತಾನಿಧಿಯಿಂದ ಅನುದಾನ ಕೊಡಿಸಿದ್ದಾರೆ.

MCF ಅಧಿಕಾರಿ ಗಿರೀಶ್, MCF ವೈದ್ಯಾಧಿಕಾರಿ ಡಾ. ಯೋಗೀಶ್, ಮನಪಾ ಸದಸ್ಯರಾದ ಸುಮಂಗಲಾ ರಾವ್, ಕಿರಣ್ ಕುಮಾರ್, ಅನಿಲ್ ಕುಮಾರ್, ಮಾಜಿ ವೈದ್ಯಾಧಿಕಾರಿ ಡಾ. ಪ್ಯಾಟ್ರಿಕ್, ಆರೋಗ್ಯ ರಕ್ಷಾ ಸಮಿತಿ ಸದಸ್ಯರು, MCF ಸಿಬ್ಬಂದಿ ವರ್ಗ, ಆರೋಗ್ಯ ಕೇಂದ್ರದ ಸಿಬ್ಬಂದಿ ವರ್ಗ, ಪ್ರಮುಖರು, ಗಣ್ಯರು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
To Top