ಕರ್ನಾಟಕ ಸಮುದಾಯ ಬಾನುಲಿ ಕೇಂದ್ರಗಳ ಸಂಘದ ಸ್ಥಾಪಕ ಅಧ್ಯಕ್ಷರಾಗಿ ಡಾ.ರಶ್ಮಿ ಅಮ್ಮೆಂಬಳ ಆಯ್ಕೆ

Upayuktha
0

ಮಣಿಪಾಲ: ಸಮುದಾಯದ ಅಭಿವೃದ್ಧಿಗಾಗಿ ಕರ್ನಾಟಕದ ಬೇರೆ ಬೇರೆ ಜಿಲ್ಲೆಗಳಲ್ಲಿ 2007ನೇ ಇಸವಿಯಿಂದ ಕಾರ್ಯಾಚರಿಸುತ್ತಿರುವ ಸಮುದಾಯ ಬಾನುಲಿಗಳ ರಾಜ್ಯಮಟ್ಟದ ಸಂಘ ನಿರ್ಮಾಣಗೊಂಡು ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆಯಿತು.

ಸಂಘದ ಸ್ಥಾಪಕ ಅಧ್ಯಕ್ಷರಾಗಿ ಮಣಿಪಾಲದ ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಕಮ್ಯುನಿಕೇಶನ್ ಕ್ಯಾಂಪಸ್ ನಲ್ಲಿರುವ 'ರೇಡಿಯೋ ಮಣಿಪಾಲ್' ಸಮುದಾಯ ಬಾನುಲಿ ಕೇಂದ್ರದ ಮುಖ್ಯಸ್ಥರಾದ ಡಾ.ರಶ್ಮಿ ಅಮ್ಮೆಂಬಳ ಅವಿರೋಧವಾಗಿ ಆಯ್ಕೆಗೊಂಡರು. ಗೌರವಾಧ್ಯಕ್ಷರಾಗಿ ಬೂದಿಕೋಟೆ 'ನಮ್ಮಧ್ವನಿ'ಯ ಶಿವಶಂಕರಸ್ವಾಮಿ, ಉಪಾಧ್ಯಕ್ಷರಾಗಿ 'ಕಲಿಕೆ'ಯ ಸಾಯಿಬಾಬು, ಕಾರ್ಯದರ್ಶಿಯಾಗಿ ಬಾಗಲಕೋಟೆ ಬಿ.ಇ.ಸಿ ಧ್ವನಿಯ ಭರತ್ ಬಿ. ಬಡಿಗೇರ್, ಜೊತೆ ಕಾರ್ಯದರ್ಶಿಯಾಗಿ 'ಜನಧ್ವನಿ'ಯ ನಿಂಗರಾಜು, ಕೋಶಾಧಿಕಾರಿಯಾಗಿ 'ರೇಡಿಯೊ ಆಕ್ಟಿವ್'ನ ರಮ್ಯಾ, ಕಾರ್ಯಕಾರಿ ಸಮಿತಿ  ಸದಸ್ಯರಾಗಿ 'ರೇಡಿಯೊ ಸಿದ್ದಾರ್ಥ'ದ ಶಿವಾಜಿ ಗಣೇಶನ್, 'ಅಂತರ್ವಾಣಿ'ಯ ಡಾ.ಶಿವರಾಜ್ ಶಾಸ್ತ್ರಿ, 'ಸಾರಥಿ ಝಲಕ್'ನ ಶಮಂತ ಡಿ.ಎಸ್, 'ರೇಡಿಯೊ ಶಿವಮೊಗ್ಗ'ದ ಗುರುಪ್ರಸಾದ್, 'ರೇಡಿಯೊ ನಿನಾದ'ದ ವಿ.ಕೆ ಕಡಬ, "ರೇಡಿಯೊ ಸಾರಂಗ್' ನ ಅಭಿಷೇಕ್, 'ರಮಣ ಧ್ವನಿ'ಯ ಅನಂತ್, 'ಕೆ.ಎಲ್. ಇ ಧ್ವನಿ'ಯ ರವೀಂದ್ರ ಕಾವಟೇಕರ್,

'ವೇಣುಧ್ವನಿ'ಯ ಮಂಜುನಾಥ್, 'ಕೃಷಿ ರೇಡಿಯೊ' ದ ಸುರೇಖಾ ಸಂಕನಗೌಡರ್, ಜ್ಞಾನಧ್ವನಿಯ ಪಾಂಡುರಂಗ ವಿಠ್ಠಲ್, 'ಜೆ.ಎಸ್.ಎಸ್ ರೇಡಿಯೊ"ದ ಶಿವಕುಮಾರ್, 'ನಮ್ಮೂರ ಬಾನುಲಿ'ಯ ಕಿರಣ್ ಚೌಗಾಲ 'ನಮ್ಮ ನಾಡಿ'ಯ ವರುಣ್ ಕಂಜರ್ಪಣೆ, 'ರೇಡಿಯೊ ಪಾಂಚಜನ್ಯ'ದ ತೇಜಸ್ವಿನಿ, 'ರೇಡಿಯೊ ಮಾನಸ'ದ ದೇವೇಂದ್ರ, 'ಸಹಕಾರ್ ರೇಡಿಯೊ'ದ ನೂರ್ ಅಹ್ಮದ್ ಮಕಾನ್ದಾರ್ 'ನೆಲದನಿ'ಯ ಡಾ.ಶಿವಲಿಂಗಯ್ಯ ಮೊದಲಾದವರು ಆಯ್ಕೆಗೊಂಡರು.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top