ಉಡುಪಿ: ಪ್ರಿ ಓನ್ಡ್ ವೈಕಲ್ಸ್ ಡೀಲರ್ಸ್ ಅಸೋಸಿಯೇಷನ್‌ ವತಿಯಿಂದ ವಿನೂತನ ಕಾಯ೯ಕ್ರಮ

Chandrashekhara Kulamarva
0



ಉಡುಪಿ: ಪ್ರಿ ಓನ್ಡ್ ವೈಕಲ್ಸ್ ಡೀಲರ್ಸ್ ಅಸೋಸಿಯೇಷನ್ ಉಡುಪಿ ಇದರ ವತಿಯಿಂದ ಜೂನ್ 15ರಂದು ಬೆಳಿಗ್ಗೆ 10 ಗಂಟೆಗೆ  ಅಜ್ಜರಕಾಡು ಭುಜಂಗ ಪಾರ್ಕ್ ನಲ್ಲಿ ಒಂದು ವಿನೂತನ ಕಾಯ೯ಕ್ರಮದ ಚಾಲನೆ ದೊರಕಲಿದೆ.

ಒಂದು ಸಾವಿರಕ್ಕೂ ಮಿಕ್ಕಿ ಲಕ್ಷ್ಮಣ ಫಲ ಗಿಡ ಮತ್ತು ಇನ್ನಿತರ ಪರಿಸರಕ್ಕೆ ಪೂರಕವಾದ ಗಿಡಗಳನ್ನು ಉಚಿತವಾಗಿ ನೀಡಿ ಸಾರ್ವಜನಿಕ ಪ್ರದೇಶಗಳಲ್ಲಿ ನೆಟ್ಟು ರಕ್ಷಣಾ ಬೇಲಿ ಹಾಕಿ ಪೋಷಿಸುವ ಕಾರ್ಯಕ್ರಮ ಇದಾಗಿದ್ದು, ಇದರ ಉದ್ಘಾಟನಾ ಸಮಾರಂಭದ ಕಾರ್ಯಕ್ರಮವನ್ನು ನಗರಸಭೆಯ ಪೌರಾಯುಕ್ತರಾದ  ರಮೇಶ್ ಪಿ ನಾಯ್ಕ್, ರವರು ಉದ್ಘಾಟಿಸಲಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು  ಸಂಘದ ಅಧ್ಯಕ್ಷರಾದ ಮೊಹಮ್ಮದ್ ಅಶ್ರಫ್ ವಹಿಸಲಿದ್ದು ,ಮುಖ್ಯ ಅತಿಥಿಯಾಗಿ ಪ್ರಾದೇಶಿಕ ಸಾರಿಗೆ ಅಧಿಕಾರಿ ರವಿಶಂಕರ್ ಪಿ, ವಲಯ ಅರಣ್ಯ ಅಧಿಕಾರಿ ಸುಬ್ರಮಣ್ಯ ಆಚಾರ್ಯ ,ಖ್ಯಾತ ಮಕ್ಕಳ ತಜ್ಞರಾಗಿರುವ ಡಾ||ಮನೋಹರ್ ಬೋಳೂರು, ಪರಿಸರವಾದಿ ರಾಘವೇಂದ್ರ ಪ್ರಭು, ಕವಾ೯ಲು , ಮುಂತಾದವರು ಭಾಗವಹಿಸಲಿರುವರು ಎಂದು ಅಧ್ಯಕ್ಷರಾದ ಮೊಹಮ್ಮದ್ ಅಶ್ರಫ್ ಹಾಗೂ ಪ್ರ.ಕಾರ್ಯದರ್ಶಿ ಉದಯ್ ಕಿರಣ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ. 


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
To Top