ಜುಲೈ 1: ಗೋವಿಂದ ದಾಸ ಕಾಲೇಜು ಸುರತ್ಕಲ್- ವಿದ್ಯಾರ್ಥಿ ಸೆನೆಟ್‌ ದಿನಾಚರಣೆ

Upayuktha
0


ಸುರತ್ಕಲ್: ಗೋವಿಂದ ದಾಸ ಕಾಲೇಜಿನ ವಿದ್ಯಾರ್ಥಿಗಳ ಸೆನೆಟ್ ದಿನಾಚರಣೆ ಜುಲೈ 1ರಂದು ಬೆಳಗ್ಗೆ 9:30ಕ್ಕೆ ಕಾಲೇಜಿನ ರಂಗಮಂದಿರದಲ್ಲಿ ನಡೆಯಲಿದೆ.


ಹಿಂದೂ ವಿದ್ಯಾದಾಯಿನೀ ಸಂಘ ಸುರತ್ಕಲ್‌ನ ಅಧ್ಯಕ್ಷರಾದ ಜಯಚಂದ್ರ ಹತ್ವಾರ್ ಎಚ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಎನ್‌ಐಟಿಕೆ ಸುರತ್ಕಲ್ ಹಾಗೂ ಎಂಎನ್‌ಐಟಿ ಜೈಪುರದ ಮಾಜಿ ನಿರ್ದೇಶಕ ಹಾಗೂ ಪ್ರಾಧ್ಯಾಪಕ ಡಾ. ಉದಯಕುಮಾರ್ ಆರ್ ಯರಗಟ್ಟಿ ಭಾಗವಹಿಸಲಿದ್ದಾರೆ.


ಅಪರಾಹ್ನ 1:30ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಆಡಳಿತ ನಿರ್ದೇಶಕ ಪ್ರೊ. ರಮೇಶ್ ಕುಳಾಯಿ, ಪ್ರಾಂಶುಪಾಲ ಪ್ರೊ. ಪಿ. ಕೃಷ್ಣಮೂರ್ತಿ ಹಾಗೂ ಉಪ ಪ್ರಾಂಶುಪಾಲ ಪ್ರೊ. ರಮೇಶ್ ಭಟ್ ಎಸ್‌.ಜಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ವಿದ್ಯಾರ್ಥಿ ಸೆನೆಟ್‌ ಪದಾಧಿಕಾರಿಗಳು:

ಶ್ರೇಯಾ (ತೃತೀಯ ಬಿ.ಎ), ಆಶಿಶ್‌ (ತೃತೀಯ ಬಿಕಾಂ), ಯಶವಂತ್ (ತೃತೀಯ ಬಿಎಸ್‌ಸಿ), ರಾಕೇಶ್ ಕುಮಾರ್ (ತೃತೀಯ ಬಿಸಿಎ), ಕೆ.ಎಂ ಜಯಸೂರ್ಯನ್ (ತೃತೀಯ ಬಿಬಿಎ) ಕಾರ್ಯದರ್ಶಿಗಳಾಗಿ ಆಯ್ಕೆಯಾಗಿದ್ದಾರೆ.

ಸೌಪರ್ಣಿಕಾ ನಾಯಕ್ ಎಸ್ (ದ್ವಿತೀಯ ಬಿಎ), ಪಲ್ಲವಿ (ದ್ವಿ.ಬಿಕಾಂ), ಪ್ರಿಯಾಂಕಾ (ದ್ವಿ. ಬಿಎಸ್‌ಸಿ), ವಿಭಾ ಎಂ.ಶೆಟ್ಟಿ (ದ್ವಿ ಬಿಸಿಎ), ಪೂರ್ವಿ ಅಶೋಕ್ ಕುಮಾರ್ (ದ್ವಿ. ಬಿಬಿಎ)- ಜಂಟಿ ಕಾರ್ಯದರ್ಶಿಗಳಾಗಿ ಆಯ್ಕೆಯಾಗಿದ್ದಾರೆ.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 


Post a Comment

0 Comments
Post a Comment (0)
To Top