ಮೊನ್ನೆ ಸಹ್ಯಾದ್ರಿ ಚಿತ್ರಮಂದಿರದಲ್ಲಿ ಶ್ರೀಮಂತ ಚಿತ್ರ ನೋಡಿದೆ. ಬಹಳ ದಿನಗಳ ಥಿಯೇಟರ್‌ನಲ್ಲಿ ಚಿತ್ರ ನೋಡಿದ್ದು. ಇದಕ್ಕೂ ಹಿಂದೆ ಪತ್ನಿಯೊಂದಿಗೆ ಪುನೀತ್ ರಾಜಕುಮಾರ್ ಅಭಿನಯದ ರಾಜಕುಮಾರ ಚಿತ್ರ ನೋಡಿದ್ದೆ. ಅಂದು ಚಿತ್ರ ನೋಡಲು ಚೈತನ್ಯ ವೃದ್ಧಾಶ್ರಮದ ವೃದ್ಧರು ಆಗಮಿಸಿದ್ದರು. ರೈತನೇ ಜಗತ್ತಿನ ಅತೀ ದೊಡ್ಡ ಶ್ರೀಮಂತ (ಭಾವನಾತ್ಮಕವಾಗಿ)ನೆಂದು ಸಾರುವಲ್ಲಿ ಹಾಸನ್ ರಮೇಶ್ ಸೊಗಸಾಗಿ ಚಿತ್ರಕಥೆ ಹೆಣೆದಿದ್ದಾರೆ. ನಿರ್ದೇಶಕರು ಹೌದು. ರೈತ ಪರ ಕಾಳಜಿಯ ಹಳ್ಳಿ ಕಥೆಗೆ ಸುಂದರ ಲೊಕೇಶನ್ ಅಂದಗೊಳಿಸಿದೆ. ಬೇಲೂರು ಚನ್ನಕೇಶವ ದೇಗುಲ, ಪುಷ್ಪಗಿರಿ ಶ್ರವಣಬೆಳಗೊಳ ಬೆಟ್ಟ, ಗೊರೂರು ಬಳಿಯ ಹೇಮಾವತಿ ಅಣೆಕಟ್ಟೆ ಹಿನ್ನೀರಿನ ಕೋನಾಪುರ ಪರಿಸರ, ಬಿಸಿಲೆ ಘಾಟ್ ಮೊದಲಾಗಿ ಜಿಲ್ಲೆಯ ಪ್ರಕೃತಿ ತಾಣದಲ್ಲಿ ಚಿತ್ರೀಕರಣವಾಗಿದೆ. ಗೋಲ್ಡನ್ ರೈನ್ ಮೂವೀಸ್ ಹೆಸರಿನ ಚಿತ್ರ ಮಳೆಯೇ ರೈತಾಪಿ ಬದುಕಿನ ಜೀವಾಳವೆಂಬುದನ್ನು ಬಿಂಬಿಸಿದೆ.
‘ಮಳೆ ಮುನಿದರೆ ಸಂತ ಜನಪದ ಸಂತ ಮಳೆ ಬಿದ್ದರೆ ಬೆಳೆ ಎದ್ದರೆ ಜಗಕೆ ಅನ್ನ ನೀಡುವ ಶ್ರೀಮಂತ.. ಚಿತ್ರದ ಟೈಟಲ್ ಸಾಂಗ್ ಆರ್ಥಪೂರ್ಣವಾಗಿದೆ. ಸುಗ್ಗಿ ಜಾತ್ರೆ, ಹಬ್ಬ ಹಾಡು ಹಸೆ ಚಿನ್ನಿದಾಂಡು ಆಟ ಎತ್ತಿನಗಾಡಿ ಓಟ ಮಳೆ ದೇವರ ಪೂಜೆ ಎಲ್ಲವೂ ಹಳ್ಳಿಯ ಜನಪದ ಬದುಕನ್ನು ನೆನಪಿಸುತ್ತವೆ. ರೈತರ ಮಕ್ಕಳಿಗೆ ಹೆಣ್ಣು ಸಿಗುತ್ತಿಲ್ಲ ಎಂಬ ಸಂಗತಿ ಪಟ್ಟಣಕ್ಕೆ ಕೆಲಸ ಹುಡುಕಿ ಬಂದು ಹೋಟೆಲ್‌ನಲ್ಲಿ ಲೋಟ ತೊಳೆಯುವ ದುಸ್ಥಿತಿ ಇವರೆಡರ ನಡುವಿನ ಪಡಿಪಾಟಲು ನೈಜತೆಗೆ ಹತ್ತಿರವಿದೆ. ಕೆಲಸ ಹುಡುಕಿ ಪಟ್ಟಣಕ್ಕೆ ಹೋಗದೆ ಹಳ್ಳಿಯಲ್ಲೇ ಉಳಿಯುವ ಕೃಷ್ಣನ ಮೇಲೆ ಪಟೇಲರ (ಚರಣ್‌ರಾಜ್) ಮಗಳು ಪದ್ಮಳಿಗೆ ಪ್ರೀತಿ. ತೆಂಗಿನಕಾಯಿ ಕದ್ದು ಊರು ಬಿಟ್ಟಿದ್ದ ವೆಂಕಟ (ಗಿರಿ ಶಿವಣ್ಣ) ಊರಿಗೆ ಮರಳಿ ಮುಂಬೈ ಬೆಡಗಿ ರುಚಿಯೊಂದಿಗೆ ‘ಎಳೆ ಹಲಸಿನ ತೊಳೆ ಬಿಡಿಸ್ಕೊಂಡು ತಿನ್ನಂಗವ್ಳೆ ಹಾಡಿಗೆ ಹಟ್ಟಿ ಹೈಕ್ಳೊಂದಿಗೆ ಸ್ಟೆಪ್ ಹಾಕಿ ಕುಣಿಯುತ್ತಾರೆ.
ಊರ ಜಾತ್ರೆಗೆ ಕುರುಕ್ಷೇತ್ರ ನಾಟಕ ಕಲಿಸಲು ರಮೇಶ್ ಭಟ್ ಜೊತೆ ಹರ‍್ಮೋನಿಯಂ ಮೇಷ್ಟ್ರಾಗಿ ರಾಜು ತಾಳಿಕೋಟೆ ಮದ್ಯಾಂತರ ನಂತರ ಬಂದು ನಾಟಕ ಕಲಿಕೆಯ ಪ್ರಸಂಗಗಳು ನಗೆ ತರಿಸುತ್ತವೆ. ಜೈಲ್‌ನಿಂದ ಬರುವ ಸಾಧು ಕೋಕಿಲ ಕುರುಕ್ಷೇತ್ರ ನಾಟಕಕ್ಕೆ ರಾವಣನ ಹಾಡು ಹೇಳಿ ಎಸ್ಕೇಪ್ ಆಗುತ್ತಾರೆ. ಹೊಸ ಮುಖ ಕ್ರಾಂತಿಗೆ ಜೋಡಿಯಾಗಿ ವೈಷ್ಣವಿ ಮೆನನ್ (ಪದ್ಮ) ವೈಷ್ಣವಿ ಪಟವರ್ಧನ್ (ರುಚಿ) ಲವ್ ಡ್ಯುಯೆಟ್ ಹಾಡಿ ಒನ್ಸ್ ಮೋರ್ ಶಿಳ್ಳೆ ಅಲ್ಲಲ್ಲಿ ಕೇಳಿ ಬಂತು. ಆದರೆ ಇದು ನಾಟಕವಲ್ಲ ಸಿನಿಮಾ ಎಂಬುದನ್ನು ಮರೆತ ಪ್ರೇಕ್ಷಕ ಪೌರಾಣಿಕ ನಾಟಕಗಳ ನಟನೇ ಇರಬೇಕು. ಏಕೆಂದರೆ ಮರೆತುಹೊಗುತ್ತಿರುವ ಪೌರಾಣಿಕ ನಾಟಕ ಕಲೆ ಹಳ್ಳಿ ಬದುಕಿನೊಂದಿಗೆ ಹೇಗೆ ಬೆರೆತುಹೋಗಿದೆ ಎಂಬುದನ್ನು ನಾಟಕ ವಿಡಂಬನೆಯಾದರೂ ಪರಿಣಾಮಕಾರಿಯಾಗಿ ರಂಗಕಲೆಗೆ ಬೂಸ್ಟ್ ನೀಡಿದೆ ಎಂದು ಹೇಳಬಹುದು. ಹಾಸನದ ಕೆಲವು ರಂಗನಟರು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಬಾಲಿವುಡ್ ನಟ ಸೋನು ಸೂದು ನಾಟಕದ ಕಡೆಯಲ್ಲಿ ರೈತೋಪದೇಶ ಹೇಳಿ ಗ್ರೂಪ್ ಪೋಟೋದೊಂದಿಗೆ ಮೂರು ಗಂಟೆ ಸಿನಿಮಾ ಮುಗಿಯುತ್ತದೆ. ಕೃಷ್ಣನ ತಾಯಿ ಪಾತ್ರದಲ್ಲಿ ಕಲ್ಯಾಣಿಯವರದು ಹಳ್ಳಿ ಹೆಂಗಸಿನ ನೈಜ ಅಭಿನಯ. ಛಾಯಾಗ್ರಹಣ ಸೊಗಸಿದೆ. ಹಾಡು ನೃತ್ಯ ಸಂಗೀತ ಚಿತ್ರದ ಫ್ಲಸ್ ಪಾಯಿಂಟ್. ಮನರಂಜನೆ ಜೊತೆಗೆ ಮೆಸೇಜ್ ಸಿನಿಮಾದಲ್ಲಿದೆ.
-ಗೊರೂರು ಅನಂತರಾಜು, ಹಾಸನ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ