ಬೆಂಗಳೂರು: ಬೆಂಗಳೂರಿನ ಪಿ ಅಂಡ್ ಟಿ ಕ್ವಾಟ್ರಸ್ ಸಮೃದ್ಧಿ ಸಭಾಂಗಣ ಕಾವಲ್ ಬೈರಸಂದ್ರದಲ್ಲಿ ರಂಗ ಚಂದಿರ ಟ್ರಸ್ಟ್ ಹಾಗೂ ಸಮೃದ್ಧಿ ಸಂಸ್ಥೆಯಿಂದ ನಡೆದ ಸಂಚಾರಿ ವಿಜಯ್ ಸ್ಮರಣೆಯಲ್ಲಿ ಮಕ್ಕಳ ಬೇಸಿಗೆ ಶಿಬಿರ ಸಮಾರೋಪ ಸಮಾರಂಭದಲ್ಲಿ ಅಂಚೆ ಇಲಾಖೆ ಬೆಂಗಳೂರು ಪೂರ್ವ ವಿಭಾಗದ ಹಿರಿಯ ಸೂಪರಿಂಟೆಂಡೆಂಟ್ ಕೆ ರಂಜಿತ್ ಕುಮಾರ್ ಅವರಿಗೆ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಚಲನಚಿತ್ರ ನಟ ಮೈಕೋ ಮಂಜು, ನಾಟಕಕಾರ ಬೇಲೂರು ರಘುನಂದನ್, ಡಾ. ಮಾಗಡಿ ಗಿರೀಶ್, ಲಯನ್ ಶೋಭಾ ಶ್ರೀನಿವಾಸ್, ಕೆ ಎಸ್ ಮಂಜುನಾಥ್, ರುದ್ರೇಶ್ ಕೊಟ್ಟಗಾಲ, ರಂಗ ಚಂದಿರದ ಕಾರ್ಯದರ್ಶಿ ಜಿಪಿಓ ಚಂದ್ರು, ಭಾಗವಹಿಸಿದರು, ಇದೇ ವೇಳೆ ಅಂತರಾಷ್ಟ್ರೀಯ ಡೊಳ್ಳು ಕಲಾವಿದರಾದ ಹಿದಾಯತ್ ಅಹಮದ್ ರವರಿಗೆ ಸಂಚಾರಿ ವಿಜಯ್ ರಂಗ ಪುರಸ್ಕಾರ ನೀಡಿ ಗೌರವಿಸಲಾಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


