ಬೆಂಗಳೂರು: ಶ್ರೀ ಜಗನ್ನಾಥದಾಸರು ಚಲನಚಿತ್ರ ನಿರ್ಮಿಸಿದ ಡಾಕ್ಟರ್ ಮಧುಸೂದನ್ ಹವಾಲ್ದಾರ್ ಅವರು ಶ್ರೀ ಪ್ರಸನ್ನ ವೆಂಕಟ ದಾಸರು, ಎಂಬ ಚಲನ ಚಿತ್ರವನ್ನು ಅದ್ದೂರಿಯಾಗಿ ನಿರ್ಮಿಸಿದ್ದಾರೆ. ಚಿತ್ರ ಕಥೆ- ಸಂಭಾಷಣೆ ರೇಖಾ ಕಾಖಂಡಕಿ"ನಿರ್ದೇಶನ-ಪರಿಕಲ್ಪನೆ"- ಡಾಕ್ಟರ್ ಮಧುಸೂದನ್ ಹವಾಲ್ದಾರ್ ಅವರ ನೇತೃತ್ವದಲ್ಲಿ ಯಶಸ್ವಿಯಾಗಿ ಮೂಡಿಬಂದಿದೆ.
ಈ ಚಲನ ಚಿತ್ರದ ಪಾತ್ರ ವರ್ಗ ದಲ್ಲಿ ಮೊಟ್ಟಮೊದಲ ಬಾರಿಗೆ ಅಭಿನಯಿಸಿದ ಚಿರಂಜೀವಿ ದೇವರಾತ್ ಜೋಶಿ, ವೆಂಕಣ್ಣನ ಪಾತ್ರದಲ್ಲಿ-(ಶ್ರೀ ಪ್ರಸನ್ನ ವೆಂಕಟ ದಾಸರ ತರುಣನ ಪಾತ್ರದಲ್ಲಿ), ಹಾಗೂ "ಶ್ರೀ ಪ್ರಸನ್ನ ವೆಂಕಟ ದಾಸರ" ಪಾತ್ರದಲ್ಲಿ ಪ್ರಭಂಜನ್ ದೇಶಪಾಂಡೆ, ವೆಂಕಟರ ಮಣನ ಪಾತ್ರದಲ್ಲಿ ವಿಷ್ಣುತೀರ್ಥ ಜೋಶಿ, ವಿಜಯ ದಾಸರ ಪಾತ್ರದಲ್ಲಿ ತ್ರಿವಿಕ್ರಮ ಜೋಶಿ, ಪ್ರಸನ್ನ ವೆಂಕಟ ದಾಸರ ಅಣ್ಣನ ಪಾತ್ರದಲ್ಲಿ ವಿಜಯಾನಂದ ನಾಯಕ್, ಅತ್ತಿಗೆಯ ಪಾತ್ರದಲ್ಲಿ ಶ್ರೀಲಕ್ಷ್ಮಿ ಶ್ರೀಯಾಂಸಿ, ಅಭಿನಯಿಸಿದ್ದಾರೆ. ಇನ್ನೂ ಹಲವಾರು ಹೊಸ ಮುಖ ಪ್ರತಿಭೆಗಳು ತಾರಾ ಬಳಗದಲ್ಲಿ ದ್ದಾರೆ.
ಈ ಚಿತ್ರಕ್ಕೆ ಮ್ಯೂಸಿಕ್ ಡೈರೆಕ್ಟರ್ ವಿಜಯ ಕೃಷ್ಣ ರವರು ಹಾಗೂ ವಿಶೇಷವಾಗಿ ಸಂಗೀತ ಸೇವೆ ಸಲ್ಲಿಸಿದ ಬಾಗಲಕೋಟೆ ಅನಂತ ಕುಲಕರ್ಣಿ, ರಾಯಚೂರು ಶೇಷಗಿರಿ ದಾಸ್ ಅವರು ಕೂಡ ಸೇವೆ ಸಲ್ಲಿಸಿ ಸಹಕರಿಸಿದ್ದಾರೆ. ಈ ಚಲನಚಿತ್ರಕ್ಕೆ ಹಾಗೂ ತಂಡಕ್ಕೆ "ಇನ್ಫೋಸಿಸ್" ಶ್ರೀಮತಿ ಶ್ರೀ ಸುಧಾಮೂರ್ತಿಯವರು ಶುಭ ಹಾರೈಸಿ ಅಭಿನಂದಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ