ಉಡುಪಿ: ಅತಿಯಾದ ರಾಷ್ಟ್ರೀಯತೆ ಧಾರ್ಮಿಕ ಮತದಂತೆ ಜೊತೆಗೆ ಬಡತನ ನಿರುದ್ಯೋಗದಂತಹ ನೆಲದಲ್ಲಿ ಭಯೇೂತ್ಪಾದನೆ ಬೆಳೆದು ರಾಜಕೀಯ ಅರಾಜಕತೆಯನ್ನು ಸೃಷ್ಟಿ ಮಾಡುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲು ಮಾಡುವ ಕೃತ್ಯ ಭಯೇೂತ್ಪಾದನೆ ಮಾನವೀಯತೆಗೊಂದು ಕಳಂಕವೆಂದು ರಾಜಕೀಯ ವಿಶ್ಲೇಷಕ ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಅಭಿಪ್ರಾಯಿಸಿದರು. ಉಡುಪಿ ವೈಕುಂಠ ಬಾಳಿಗ ಕಾನೂನು ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ಭಯೇೂತ್ಪಾದನಾ ನಿಗ್ರಹ ದಿನಾಚರಣಾ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸವಿತ್ತು ಮಾತನಾಡಿದರು.
ಸಭೆಯ ಅಧ್ಯಕ್ಷತೆಯನ್ನು ಹಿರಿಯ ಪ್ರಾಧ್ಯಾಪಕಿ ಪ್ರೊ.ಸುರೇಖ ವಹಿಸಿದ್ದರು. ರಾಷ್ಟ್ರೀಯ ಸೇವಾ ಯೇೂಜನಾ ಘಟಕದ ಅಧಿಕಾರಿ ಡಾ.ನವೀನ್ ಚಂದ್ರ ಪ್ರಾಸ್ತಾವಿಕವಾಗಿ ಮಾತನಾಡಿ ಪ್ರತಿಜ್ಞಾ ವಿಧಿ ಬೇೂಧಿಸಿದರು. ರಾ.ಸೇ.ಯೇೂ ವಿದ್ಯಾರ್ಥಿ ಪ್ರತಿನಿಧಿ ನಮ್ರತಾ ಸ್ವಾಗತಿಸಿದರು. ಚಿನ್ಮಯಿ ವಂದಿಸಿದರು. ಮಮತಾ ಕಾರ್ಯಕ್ರಮ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ