ಪ್ರಸ್ತುತವಾಗಿ ಉದ್ಯೋಗ ಕ್ಷೇತ್ರಕ್ಕೆ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ನಂತಹ ಹೊಸ ಹೊಸ ಮಾಧ್ಯಮಗಳು ಪ್ರಚಾರಗೊಂಡಿದೆ. ಆದರೂ ಇಂದಿನ ಉದ್ಯೊಗಕ್ಕೆ ಕೌಶಲಗಳು ಬೇಕು. ಅವುಗಳನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು. ಜೀವನ ಕೌಶಲ್ಯ, ಕಲಿಯುವ ಕೌಶಲ, ಸಾಕ್ಷರತೆಯು ಮುಖ್ಯ . ಹಾಗೂ ಬದಲಾವಣೆಯೆ ಜಗದ ನಿಯಮ ಎಂದು ಮುಂಬಾಯಿಯ ಯುನಿವರ್ಸಲ್ ಬಿಸಿನೆಸ್ ಸ್ಕೂಲಿನ ಇಂದ್ರಪಾಲ್ ಸಿಂಗ್ ಅವರು ಮಾತನಾಡಿದರು.
ಹಳ್ಳಿ ಪ್ರದೇಶಗಳಲ್ಲಿ ಕಲಿತ ವಿದ್ಯಾರ್ಥಿಗಳು ನಂಬಿಕೆ ಹಾಗೂ ವಿಶ್ವಾಸಾರ್ಹರು. ಮಾತುಗಾರಿಕಾ ಕೌಶಲ್ಯವನ್ನು ಹೆಚ್ಚು ರೂಢಿಸಿಕೊಳ್ಳ ಬೇಕು. ತನ್ಮೂಲಕ ಉದ್ಯೊಗಾವಕಾಶಗಳಲ್ಲಿ ಜನರು ಲಗ್ಗೆಯಿಡಬಹುದು ಎಂದು ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲ ಕುಮಾರ್ ಹೆಗಡೆ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಕೆರಿಯರ್ ಗೈಡೆನ್ಸಿನ ಮುಖ್ಯಸ್ಥ ನಾಗರಾಜ ಪೂಜಾರಿ, ವಾಣಿಜ್ಯೊಧ್ಯಮಿ ಶಶಿರಂಜನ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಮಹಿಮಾ ಹೆಬ್ಬಾರ್ ಕಾರ್ಯಕ್ರಮ ನಿರೂಪಿಸಿದರು, ಲೀಶ್ಮಾ ಸ್ವಾಗತಿಸಿದರು. ಸಂದ್ಯಾ ವಂದಿಸಿದರು.