'ದುರ್ಬಲರ ಪರವಾದ ಬದ್ಧತೆ ಇರಲಿ'-ಶಿವಕುಮಾರ್ ಪಿ.

Upayuktha
0

 ಎಸ್.ಡಿ.ಎಂ ಸಮಾಜಕಾರ್ಯ ವಿಚಾರ ಸಂಕಿರಣ

ಉಜಿರೆ:  ಸಮಾಜದಲ್ಲಿ ನಿರ್ಲಕ್ಷಿತರಾದ ದುರ್ಬಲರ ಅಭಿವೃದ್ಧಿಗೆ ಪೂರಕವಾಗುವ ಅವಕಾಶಗಳನ್ನು ಒದಗಿಸಿಕೊಡುವ ಮಹತ್ವದ ಪ್ರಕ್ರಿಯೆಯಲ್ಲಿ ಸಮಾಜಕಾರ್ಯ ವಿದ್ಯಾರ್ಥಿಗಳು ತೊಡಗಿಸಿಕೊಳ್ಳಬೇಕು ಎಂದು ಬೆಳ್ತಂಗಡಿ ವೃತ್ತ ನಿರೀಕ್ಷಕ ಶಿವಕುಮಾರ್ ಪಿ ಹೇಳಿದರು.


ಎಸ್.ಡಿ.ಎಂ ಕಾಲೇಜಿನ ಸಮಾಜಕಾರ್ಯ ವಿಭಾಗವು ಶುಕ್ರವಾರ 'ಸಂಭ್ರಮ' ಶೀರ್ಷಿಕೆಯಲ್ಲಿ ಆಯೋಜಿಸಿದ್ದ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.


ಪ್ರಸ್ತುತ ಕಾಲಮಾನದಲ್ಲಿಯೂ ಕೂಡ ಹಲವರು ಯುವಕರು ಯೋಚಿಸುವುದೇನೆಂದರೆ ಡಾಕ್ಟರ್, ಇಂಜಿನಿಯರ್ ಮತ್ತುಇತರೆ ಕೆಲಸಗಳಿಗೆ ಮಾತ್ರ ಸೀಮಿತರಾಗಿರುತ್ತಾರೆ. ಆದರೆ ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ಸಮರ್ಪಿಸಿಕೊಳ್ಳಲು ಯಾರೂ ಸಿದ್ಧರಿಲ್ಲ. ಇಂಥ ಮನಸ್ಥಿತಿಯ ಚೌಕಟ್ಟಿನಿಂದ ಹೊರಬರಬೇಕು. ಖಿನ್ನತೆಗೆ ಒಳಗಾಗಿರುವ ಎಷ್ಟೋ ಶೋಷಿತ ಸಮುದಾಯದವರನ್ನು ಮೇಲೆತ್ತುವಲ್ಲಿ ಸರ್ಕಾರೇತರ ಸಂಸ್ಥೆಗಳು ಮಹತ್ತರ ಕಾರ್ಯವನ್ನು ವಹಿಸಬೇಕು  ಎಂದು ತಿಳಿಸಿದರು. 'ಕಾಯಕವೇ ಕೈಲಾಸ' ಎಂಬ ಬಸವಣ್ಣನವರ ನುಡಿಯಂತೆ ಕಾರ್ಯೋನ್ಮುಖರಾಗಬೇಕು. ಕೆಲಸ ಯಾವುದೇ ಆಗಿರಬಹುದು. ಆ ಕೆಲಸವನ್ನು ಶ್ರದ್ಧೆಯಿಂದ ನಿರ್ವಹಿಸಬೇಕು. ಈ ಮನೋಭಾವದೊಂದಿಗಿನ ವೃತ್ತಿಬದ್ಧತೆಯು ಸಮಾಜದ ನಿರ್ಲಕ್ಷಿತ ಸಮುದಾಯದ ಬೆಳವಣಿಗೆಗೆ ಸಹಾಯಕವಾಗುತ್ತದೆ ಎಂದರು.


ಮುಖ್ಯ ಅತಿಥಿಯಾದ ಎಸ್.ಡಿ .ಎಂ ಶಿಕ್ಷಣ ಸಂಸ್ಥೆಯ ಕಾರ್ಯನಿರ್ವಾಹಕ ಅಧಿಕಾರಿ ಎಂ. ವೈ ಹರೀಶ್ ಮಾತನಾಡಿ ದೇಶದ ಬೆಳವಣಿಗೆಯಲ್ಲಿ ಯುವಕರ ಪಾತ್ರವನ್ನು ವಿಶ್ಲೇಷಿಸಿದರು.   ಪ್ರಸ್ತುತ ದಿನಗಳಲ್ಲಿ ಯುವಕರು ಮಾದಕ ವಸ್ತುಗಳ ಮೊರೆ ಹೋಗುತ್ತಿದ್ದಾರೆ. ಈ ಬಗೆಯ ದುಶ್ಚಟಗಳಿಂದ ದೂರವಿರಬೇಕು.  ಯುವಕರು ದೇಶದ ಶಕ್ತಿಯಾಗಿರಬೇಕು. ಸಮಾಜ ಸೇವೆಯಲ್ಲಿಯುವಕರುತಮ್ಮನತಾವು ತೊಡಗಿಸಿಕೊಳ್ಳಬೇಕು ಎಂದರು.


ತುಮಕೂರು ವಿಶ್ವವಿದ್ಯಾನಿಲಯದ ಸಮಾಜಕಾರ್ಯ ವಿಭಾಗದ ಅಧ್ಯಕ್ಷರಾದ ಡಾ.ಕೆ.ಜಿ. ಪರಶುರಾಮ ಮಾತನಾಡಿದದರು.  ಎಸ್ ಡಿ ಎಂ ಕಾಲೇಜಿನ ಗ್ರಂಥಾಲಯವು ವಿಶಿಷ್ಟವಾಗಿದೆ. ಇಲ್ಲಿ ಅಧ್ಯಯನಕ್ಕೆ ಪೂರಕವಾಗುವಂಥ ಎಲ್ಲಾ ರೀತಿಯ ಸಂಪನ್ಮೂಲಗಳು ಲಭ್ಯ ಇಂತಹ ಒಂದು ಗ್ರಂಥಾಲಯವನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿದ ಎಸ್ .ಡಿ .ಎಂ ಸ್ನಾತಕೋತ್ತರ ಕೇಂದ್ರದ ಡೀನ್ ವಿಶ್ವನಾಥ .ಪಿ ಮಾತನಾಡಿದರು. ವಿದ್ಯಾರ್ಥಿಗಳು ಉತ್ತಮ ವ್ಯಕ್ತಿತ್ವವನ್ನು ರೂಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಎಸ್.ಡಿ.ಎಂ. ಕಾಲೇಜಿನ ಸಮಾಜಕಾರ್ಯ ವಿಭಾಗದ ಮುಖ್ಯಸ್ಥರಾದ ಡಾ. ರವಿಶಂಕರ್‍ಕೆ.ಆರ್ ಮತ್ತು ವಿದ್ಯಾರ್ಥಿ ಪ್ರತಿನಿಧಿ ಸಂಪತ್‍ಕುಮಾರ್ ಉಪಸ್ಥಿತರಿದ್ದರು. ಸಮಾಜಕಾರ್ಯವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಧನೇಶ್ವರಿ ಸ್ವಾಗತಿಸಿದರು. ದ್ವೀತಿಯ ಸಮಾಜಕಾರ್ಯ ವಿಭಾಗದ ವಿಧ್ಯಾರ್ಥಿನಿ ಆಗ್ನೇಯ ನಿರೂಪಿಸಿ, ಸಹಾಯಕ ಪ್ರಾಧ್ಯಾಪಕ ಡಾ. ಅಥುಲ್‍ ಎಸ್.ಸೆಮಿತಾ ವಂದಿಸಿದರು.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top