ಉಡುಪಿ: ಜಿಲ್ಲಾ ಸಂಚಾರಿ ನೇತ್ರಘಟಕ ಉಡುಪಿ ಜಿಲ್ಲೆಇವರ ವತಿಯಿಂದ ಇಂದು ಪ್ರಾಥಮಿಕ ಆರೋಗ್ಯಕೇಂದ್ರ ಹಿರಿಯಡ್ಕದಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರ ನಡೆಸಲಾಯಿತು.
ಶಿಬಿರದಲ್ಲಿ 56 ಮಂದಿ ಕಣ್ಣಿನ ತಪಾಸಣೆಯನ್ನು ಮಾಡಿಸಿಕೊಂಡಿದ್ದು.11 ಮಂದಿಗೆ ಕನ್ನಡಕವನ್ನುಉಚಿತವಾಗಿ ನೀಡಲಾಗಿದೆ. 8 ಮಂದಿ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಆಯ್ಕೆಯಾಗಿದ್ದಾರೆ.ಆಯ್ಕೆಯಾದ ಫಲಾನುಭವಿಗಳನ್ನು ಜಿಲ್ಲಾ ಆಸ್ಪತ್ರೆಉಡುಪಿ ದಿನಾಂಕ 14.06.2023 ಶಸ್ತ್ರಚಿಕಿತ್ಸೆ ಮಾಡಲಾಗುವುದು.
ಶಿಬಿರದಲ್ಲಿ ನೇತ್ರತಜ್ಞರು,ಡಾ ಲತಾ ನಾಯಕ್, ಜಿಲ್ಲಾಅಂಧತ್ವ ನಿಯಂತ್ರಣಾಧಿಕಾರಿ ಡಾ;ಸತ್ಯಶಂಕರ್, ಆಡಳಿತ ವೈದ್ಯಾಧಿಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಿರಿಯಡ್ಕ ನೇತ್ರಸಹಾಯಕಿ ಸುಪ್ರಿತ ಹಾಗೂ ಇತರೆ ಸಿಬ್ಬಂದಿಗಳು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ