ಉಡುಪಿ: ಜೆಸಿಐ ಕಲ್ಯಾಣಪುರ, ಡಾ ಶಿವರಾಂ ಕಾರಂತ, ಹುಟ್ಟೂರ ಸನ್ಮಾನ ಸಮಿತಿ ಇವರ ಆಶ್ರಯದಲ್ಲಿ 25 ಗಂಟೆಗಳ ಕಾಲ ನಿರಂತರ ವ್ಯಕ್ತಿತ್ವ ವಿಕಸನ ಮಾಲಿಕೆ ತರಬೇತಿ ಕಾರ್ಯಕ್ರಮ ಮನ್ವಂತರ 2023 ಇದರ ಸಮಾರೋಪ ಸಮಾರಂಭ ಶಿವರಾಮ ಕಾರಂತ ಥೀಮ್ ಪಾರ್ಕ್ ಕೋಟದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ತರಬೇತಿ ಕಾರ್ಯಕ್ರಮದ ರೂವಾರಿ ಶಿಕ್ಷಕ ತರಬೇತಿದಾರ ನರೇಂದ್ರ ಕುಮಾರ್ ಕೋಟ ಇವರನ್ನು ಎಲ್ಲ ತರಬೇತಿದಾರರ ಪರವಾಗಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಜೆಸಿಐ ಕಲ್ಯಾಣಪುರದ ಅಧ್ಯಕ್ಷೆ ಅನಿತಾ ನರೇಂದ್ರ ಕುಮಾರ್ ಪೂರ್ವಾಧ್ಯಕ್ಷ ಚಿತ್ರ ಕುಮಾರ್ ಮತ್ತು ಎಲ್ಲಾ ತರಬೇತಿದಾರರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ