ಯುಪಿಎಸ್‍ಸಿ 2022ರಲ್ಲಿ ರಾಜ್ಯದ 26 ಮಂದಿ ಆಯ್ಕೆ: ಧೀ ಅಕಾಡೆಮಿಯಿಂದ ಟ್ರೈನಿಂಗ್ ಪಡೆದ 5 ಅಭ್ಯರ್ಥಿಗಳು ತೇರ್ಗಡೆ

Upayuktha
0


ಬೆಂಗಳೂರು: ಕೆಂದ್ರ ಲೋಕ ಸೇವಾ ಆಯೋಗವು (ಯುಪಿಎಸ್‍ಸಿ) 2022ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆ ಫಲಿತಾಂಶ ಪ್ರಕಟಿಸಿದ್ದು ಆಯ್ಕೆಯಾಗಿರುವ ಒಟ್ಟು 933 ಅಭ್ಯರ್ಥಿಗಳ ಪೈಕಿ ರಾಜ್ಯದ 26 ಅಭ್ಯರ್ಥಿಗಳಿದ್ದಾರೆ.


ಮೊದಲ ಪ್ರಯತ್ನದಲ್ಲಿ ಬೆಂಗಳೂರಿನ ಚಂದ್ರಾಲೇಔಟ್ ನಲ್ಲಿರುವ ಧೀ ಅಕಾಡಮಿ ಯಶಸ್ವಿಯಾಗಿದೆ ಈ ಅಕಾಡಮಿಯಿಂದ ಟ್ರೈನಿಂಗ್ ಮತ್ತು ಪರೀಕ್ಷೆ ತಯಾರಿಗೆ ಬೇಕಾದ ಪೂರಕ ಚಟುವಟಿಕೆ ಬಗ್ಗೆ ಸಲಹೆ ಪಡೆದ ಸೌರಭ್ ಎ ನರೇಂದ್ರ 198ನೇ ರ‍್ಯಾಂಕ್; ಪಿ ಶ್ರವಣ್ ಕುಮಾರ್ 222ನೇ ರ‍್ಯಾಂಕ್; ವಿಜಯಪುರ ಜಿಲ್ಲೆಯ ಸರೂರ ತಾಂಡದ ಶೃತಿ ಯರಗಟ್ಟಿ 362ನೇ ರ‍್ಯಾಂಕ್; ಮೈಸೂರಿನ ಪೂಜಾ ಮುಕುಂದ್ 390ನೇ ರ‍್ಯಾಂಕ್  ಮತ್ತು ಅಪೂರ್ವ ಮಂದಾ 646ನೇ ರ‍್ಯಾಂಕ್ ಪಡೆದು ಯುಪಿಎಸ್‍ಸಿ ಪರೀಕ್ಷೆಯಲ್ಲಿ ಯಶಸ್ವಿಯಾಗಿದ್ದಾರೆ.


2022ನೇ ಸಾಲಿನ ಯುಪಿಎಸ್‍ಸಿ ಪರೀಕ್ಷೆಗೆ ಧೀ ಅಕಾಡೆಮಿಯಲ್ಲಿ 200ಕ್ಕೂ ಹೆಚ್ಚು ಅಭ್ಯರ್ಥಿಗಳು ಟ್ರೈನಿಂಗ್ ಪಡೆದಿದ್ದರು ವಿಶೇಷ ಸಂಗತಿ ಎಂದರೆ ಸಂಸ್ಥೆಯ ಮೊದಲ ಬ್ಯಾಚ್‍ನಲ್ಲಿ ರಾಜ್ಯದ 30ಕ್ಕೂ ಹೆಚ್ಚು ಬಡತನ ಹಿನ್ನೆಲೆಯುಳ್ಳ ಅಭ್ಯರ್ಥಿಗಳಿಗೆ ಸಂಪೂರ್ಣ ಉಚಿತವಾಗಿ ತರಬೇತಿಯನ್ನು ನೀಡಿತ್ತು. ಪರೀಕ್ಷೆ ತಯಾರಿಗೆ ಬೇಕಾದ ಪೂರಕ ಚಟುವಟಿಕೆ ಬಗ್ಗೆ ಸಲಹೆ ಪಡೆದು ಯುಪಿಎಸ್‍ಸಿ 2022ರಲ್ಲಿ ಆಯ್ಕೆ ಆಗುವ ಮೂಲಕ ಸೌರಭ್ ಎ ನರೇಂದ್ರ, ಪಿ ಶ್ರವಣ್ ಕುಮಾರ್, ಶೃತಿ ಯರಗಟ್ಟಿ ಪೂಜಾ ಮುಕುಂದ್ ಮತ್ತು ಅಪೂರ್ವ ಮಂದಾ ರವರು ಸಂಸ್ಥೆ ಹೆಮ್ಮೆ ಪಡುವ ಕೆಲಸ ಮಾಡಿದ್ದಾರೆ ಎಂದು ಸಂಸ್ಥೆಯ ನಿರ್ದೇಶಕಿ ಕಾವ್ಯಾ ಅನಂತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top