ತೆಂಕನಿಡಿಯೂರು: ಆರು ಮೇಳದ ಆಯೋಜನೆಯಿಂದ ವಿದ್ಯಾರ್ಥಿಗಳಲ್ಲಿ ನೈಜ ಮಾರುಕಟ್ಟೆಯಲ್ಲಿನ ಅನುಭವ, ಮಾರಾಟಗಾರರ ಹಿಂದಿನ ಪ್ರಯತ್ನ ಮತ್ತು ಸಮಸ್ಯೆಗಳು ಹಾಗೂ ಗ್ರಾಹಕರ ವರ್ತನೆಯ ವಿವಿಧ ಮೊದಲಾದವುಗಳನ್ನು ಅರ್ಥ ಮಾಡಿಕೊಳ್ಳಲು ವಾಣಿಜ್ಯಶಾಸ್ತ್ರದ ಮತ್ತು ನಿರ್ವಹಣಾಶಾಸ್ತ್ರ ವಿದ್ಯಾರ್ಥಿಗಳಿಗೆ ಇದು ಅನುಕೂಲಕಾರಿಯಾಗಲಿದೆ. ವಿದ್ಯಾರ್ಥಿಗಳಲ್ಲಿ ಹೊಸ ಅನುಭವವನ್ನು ನೀಡುತ್ತದೆ ಎಂದು ಪ್ರೊ. ಸುರೇಶ್ ರೈ ಕೆ. ತಿಳಿಸಿದರು.
ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು, ಉಡುಪಿ ವಾಣಿಜ್ಯಶಾಸ್ತ್ರ ಮತ್ತು ನಿರ್ವಹಣಾಶಾಸ್ತ್ರದ ವಿಭಾಗದ ವತಿಯಿಂದ ಕಾಲೇಜು ಆವರಣದಲ್ಲಿ ಆಯೋಜಿಸಿದ ಆಹಾರ ಮೇಳ “ಸ್ನ್ಯಾಪ್ ಕ್ರೌಡ್” ಉದ್ಘಾಟಿಸಿ ಮಾತನಾಡಿದರು. ಪೂರ್ಣಪ್ರಜ್ಞಾ ಸಂಧ್ಯಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಶ್ರೀ ದಿನೇಶ್ ಮತ್ತು ಡಾ.ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಕುಂದಾಪುರದ ಸಹಾಯಕ ಪ್ರಾಧ್ಯಾಪಕರಾದ ಶ್ರೀಮತಿ ಅನ್ವಿತಾ ಕೋರಿಯಾ ಮುಖ್ಯ ಅತಿಥಿಗಳ ನೆಲೆಯಲ್ಲಿ ಉಪಸ್ಥಿತರಿದ್ದರು. ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಶ್ರೀಮತಿ ಬಿಂದು ಟಿ., ನಿರ್ವಹಣಾಶಾಸ್ತ್ರ ವಿಭಾಗ ಮುಖ್ಯಸ್ಥ ಡಾ. ರಘು ನಾಯ್ಕ, ಎಕ್ಯೂಎಸಿ ಸಂಚಾಲಕಿ ಡಾ. ಮೇವಿ ಮಿರಾಂದ. ರೋವರ್ಸ್ ರೇಂಜರ್ಸ್ ಅಧಿಕಾರಿ ಡಾ. ಉದಯ ಶೆಟ್ಟಿ ಕೆ., ಆಂಗ್ಲಭಾಷಾ ವಿಭಾಗ ಮುಖ್ಯಸ್ಥರಾದ ಶ್ರೀ ನಿತ್ಯಾನಂದ ವಿ. ಗಾಂವ್ಕರ್, ಕಾರ್ಯಕ್ರಮ ಸಂಚಾಲಕರಾದ ಶ್ರೀಮತಿ ಸೋನಿಯಾ ನೊರೋಹ್ಹ ಉಪಸ್ಥಿತರಿದ್ದರು.
ಆಹಾರ ಮೇಳದಲ್ಲಿ ಒಟ್ಟು 21 ಔಟ್ಲೆಟ್‍ಗಳನ್ನು ತೆರೆದಿದ್ದು, ಕಾಲೇಜಿನ ಒಂದು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಿಂದ ಗ್ರಾಹಕರ ನೆಲೆಯಲ್ಲಿ ಪಾಲ್ಗೊಂಡು, ಸುಮಾರು 67,000/- ಮೊತ್ತದ ವಹಿವಾಟು ನಡೆಸಲಾಯಿತು. ಕಾರ್ಯಕ್ರಮ ಸಂಚಾಲಕಿ ಶ್ರೀಮತಿ ಸ್ಮಿತಾ ಸ್ವಾಗತಿಸಿ ವಂದಿಸಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ