ಸುರತ್ಕಲ್: ಪರಿಮಿತ ಇಂಧನ ಶಕ್ತಿ ಸಂಪನ್ಮೂಲಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಹಾಗೂ ಜಾಗರೂಕತೆಯಿಂದ ಬಳಸಬೇಕು. ಶಕ್ತಿ ಮೂಲಗಳನ್ನು ಉತ್ಪಾದಿಸಲು ಅಥವಾ ನಾಶ ಪಡಿಸಲು ಅಸಾಧ್ಯವಾಗಿದ್ದು ಪರಿವರ್ತನೆ ಮಾತ್ರ ಸಾಧ್ಯ. ಶಕ್ತಿ ಸಂಪನ್ಮೂಲದ ರಕ್ಷಣೆಯ ಬಗ್ಗೆ ವಿದ್ಯಾರ್ಥಿ ಸಮುದಾಯ ಜಾಗೃತವಾಗಬೇಕಾಗಿದೆ ಎಂದು ಮಂಗಳೂರಿನ ಎಂ.ಆರ್.ಪಿ.ಎಲ್ ಸಂಸ್ಥೆಯ ಚೀಫ್ ಜನರಲ್ ಮ್ಯಾನೇಜರ್ (ಪ್ರಾಡಕ್ಟ್) ಸಂದೀಪ್ ನಾೈಕ್ ನುಡಿದರು.
ಅವರು ಎಂ.ಆರ್.ಪಿ.ಎಲ್ ಕೈಗಾರಿಕಾ ಸಂಸ್ಥೆ ಮತ್ತು ಗೋವಿಂದ ದಾಸ ಕಾಲೇಜಿನ ವಿಜ್ಞಾನ ಸಂಘಗಳ ಸಹಭಾಗಿತ್ವದಲ್ಲಿ ನಡೆದ ಇಂಧನಶಕ್ತಿ ಉಳಿತಾಯ ಅರಿವು ಕಾರ್ಯಾಗಾರ ಉದ್ಘಾಟಿಸಿ ಮಾತನಾಡುತ್ತಿದ್ದರು.
ಎಂ.ಆರ್.ಪಿ.ಎಲ್ ಸಂಸ್ಥೆಯ ಪ್ರೊಸೇಸ್ ಇಂಜಿನಿಯರಿಂಗ್ ವಿಭಾಗದ ಚೀಫ್ ಇಂಜಿನಿಯರ್ ಸುಬ್ರಹ್ಮಣ್ಯ ಪ್ರಭು ಕೆ.ಎಸ್. ಮಾತನಾಡಿ, ನವೀಕರಿಸಬಹುದಾದ ಇಂಧನ ಶಕ್ತಿ ಹಾಗೂ ನವೀಕರಿಸಲಾಗದ ಇಂಧನ ಶಕ್ತಿಯ ಕುರಿತು ಅರಿವು ಬೇಕಾಗಿದ್ದು ಜನಜಾಗೃತಿಯ ಮೂಲಕ ಸಂಪನ್ಮೂಲಗಳನ್ನು ಬಳಕೆ ಮಾಡಬೇಕೆಂದರು.
ಕಾಲೇಜಿನ ಪ್ರಾಚಾರ್ಯ ಪ್ರೊ. ಪಿ. ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಿದ್ದರು.
ಎಂ.ಆರ್.ಪಿ.ಎಲ್. ಸಂಸ್ಥೆಯ ಪಾರ್ಥ ಪ್ರತಿಮ್ ಗೋಸ್ವಾಮಿ, ದಿಲೀಪ್, ಗೋವಿಂದ ದಾಸ ಕಾಲೇಜಿನ ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ವಾಮನ ಕಾಮತ್, ವಿಜ್ಞಾನ ಸಂಘದ ಸಂಯೋಜಕಿ ಸಜಿತಾ ನಾಯರ್ ಉಪಸ್ಥಿತರಿದ್ದರು.
ವೀಣಾ ಸ್ವಾಗತಿಸಿದರು ಸಂಧ್ಯಾಶ್ರೀ ವಂದಿಸಿದರು. ಸ್ವಾತಿ ಭಟ್ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳಿಗೆ ಕ್ವಿಜ್ ಸ್ಪರ್ಧೆ ನಡೆಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ