ಅಳಿವಿನತ್ತ ಸಾಗುತ್ತಿವೆ ಗುಬ್ಬಚ್ಚಿಗಳು.....

Upayuktha
0

 

ಸುಮಾರು ಹತ್ತು ವರ್ಷಗಳ ಹಿಂದೆ ಗುಬ್ಬಚ್ಚಿಗಳಿರದ ಮನೆಗಳೇ ಇರಲಿಲ್ಲ.ಅಷ್ಟರ ಮಟ್ಟಿಗೆ ಮಾನವರೊಂದಿಗೆ ಸಂಬಂಧ ಹೊಂದಿತ್ತು.ಇವುಗಳು ಮನುಷ್ಯರಿಂದ ತಮಗೆ ತೊಂದರೆ ಇಲ್ಲ ಎಂಬ ಕಾರಣದಿಂದಾಗಿಯೇ ಇರಬಹುದು ಮನುಷ್ಯರ ಸ್ಥಳವನ್ನೇ ಇಷ್ಟಪಡುತ್ತಿದ್ದವು. ಆ ಸಮಯದಲ್ಲಿ ಗುಬ್ಬಿಗಳ ಬದುಕು ಅದೆಷ್ಟು ಸುಂದರವಾಗಿತ್ತು.ಆದರೆ ಈಗ ನಾವು ಅವುಗಳ ಭರವಸೆಗೆ ಮೋಸ ಮಾಡುತ್ತಿದ್ದೇವೆ.


ಗುಬ್ಬಿಯು ಒಂದು ಸಣ್ಣ ಜಾತಿಯ ಪಕ್ಷಿಯಾಗಿದ್ದು,ಇವುಗಳಲ್ಲಿ 12ಕ್ಕೂ ಹೆಚ್ಚಿನ ಪ್ರಭೇದಗಳಿವೆ.ಇವುಗಳು ಸಾಮಾನ್ಯವಾಗಿ 4ರಿಂದ 5 ಮೊಟ್ಟೆಗಳನ್ನಿಟ್ಟು,14 ದಿನ ಕಾವು ಕೊಡುವ ಜವಾಬ್ದಾರಿ ಯನ್ನು ಹೆಣ್ಣು ಗುಬ್ಬಚ್ಚಿ ಹೊಂದಿರುತ್ತದೆ.ಇವುಗಳು ಬೂದು ಮಿಶ್ರಿತ ತಿಳಿ ಕಂದು ಬಣ್ಣದ ಹಕ್ಕಿ.ಗಂಡು ಹಕ್ಕಿಯ ನೆತ್ತಿ ಬೂದು, ಮೈ ಹಾಗೂ ಕೆನ್ನೆ ಬೂದು ಮಿಶ್ರಿತ ಕಂದು.ಪಕ್ಕೆ ಹಾಗೂ ಹೊಟ್ಟೆ ಬಿಳಿ, ಕಣ್ಣಿನ ಸುತ್ತ ಹಾಗೂ ಎದೆಯ ಭಾಗ ಪೂರ್ತಿಯಾಗಿ ಕಪ್ಪಾಗಿರುತ್ತದೆ.ಹೆಣ್ಣು ಗುಬ್ಬಿಯ ಕತ್ತು,ಕೆನ್ನೆ ಹಾಗೂ ತಳಭಾಗ ಬಿಳಿ ಬಣ್ಣವನ್ನು ಹೊಂದಿರುತ್ತವೆ. ಇವುಗಳಲ್ಲಿ 26 ವಿಭಿನ್ನ ಜಾತಿಗಳಿವೆ.


ಐ.ಯು.ಸಿ. ಎನ್.ವರದಿಯ ಪ್ರಕಾರ ಕಳೆದ 25 ವರ್ಷಗಳಲ್ಲಿ ಗುಬ್ಬಿಗಳ ಸಂತತಿ ಶೇ.71ರಷ್ಟು ಕುಸಿದಿದೆ.ಈ ಪಕ್ಷಿ ಸಂಕುಲವನ್ನು ಸಂರಕ್ಷಿಸಲು 2012 ರಲ್ಲಿ ದಿಲ್ಲಿಯು  ಇವುಗಳನ್ನು ರಾಜ್ಯ ಪಕ್ಷಿಯಾಗಿ ಘೋಷಿಸಲಾಯಿತು. ಇತ್ತೀಚೆಗೆ ಬಿಹಾರವೂ ಸಹ ರಾಜ್ಯ ಪಕ್ಷಿಯಾಗಿ ಘೋಷಿಸಿದೆ.  ಇವುಗಳನ್ನು ಸಾಮಾನ್ಯವಾಗಿ ಮನೆಗುಬ್ಬಚ್ಚಿ ಎಂದು ಕರೆಯುತ್ತಾರೆ.ಇವುಗಳ ವೈಜ್ಞಾನಿಕ ಹೆಸರು ಪಾಸರ್ ಡೊಮೆಸ್ಟಿಕಸ್.ಇವು ಸುಮಾರು 16 ಸೆಂಟಿ ಮೀಟರ್ ಎತ್ತರ ಹಾಗೂ 21 ಸೆಂಟಿ ಮೀಟರ್ ರೆಕ್ಕೆಗಳ ಅಳತೆಯನ್ನು ಹೊಂದಿರುತ್ತದೆ.ಹಾಗೆಯೇ 20-40 ಗ್ರಾಂ ತೂಕವನ್ನು ಹೊಂದಿವೆ.


ಗುಬಬಚ್ಚಿಗಳಲ್ಲಿ ಹಲವು ರೀತಿಗಳಿವೆ.ಹಾಡು ಗುಬ್ಬಚ್ಚಿ (song sparrow) ಚಿಪ್ಪಿಂಗ್ ಗುಬ್ಬಚ್ಚಿ (chipping sparrow) ಬಿಳಿ ಕಿರೀಟದ ಗುಬ್ಬಚ್ಚಿ(white-crowned sparrow) ಲಾರ್ಕ್ ಗುಬ್ಬಚ್ಚಿ(lark sparrow)ಚಿನ್ನದ ಕಿರೀಟದ ಗುಬ್ಬಚ್ಚಿ (golden - crowend sparrow) ಬಿಳಿ ಗಂಟಲಿನ ಗುಬ್ಬಚ್ಚಿ(white throated sparrow) ಸವನ್ನಃ ಗುಬ್ಬಚ್ಚಿ(Savannah sparrow)ಯುರೇಷಿಯನ್ ಮರ ಗುಬ್ಬಚ್ಚಿ (Eurasian tree sparrow) ನರಿ ಗುಬ್ಬಚ್ಚಿ(fox sparrow)ಮಣ್ಣಿನ ಬಣ್ಣದ ಗುಬ್ಬಚ್ಚಿ (clay colored sparrow) ಅಮೇ ರಿಕನ್ ಮರ ಗುಬ್ಬಚ್ಚಿ (american tree sparrow) ಲೇ ಕಾಂಟೆಸ್ ಗುಬ್ಬಚ್ಚಿ (le contes sparrow) ರಾಜ್ಯ ಕಪ್ಪು ಕಣ್ಣಿನ ಜಾಂಕೊ(state dark eyed junco) ಒರೆಗಾನ್ ಕಪ್ಪು ಕಣ್ಣಿನ ಜಾಂಕೊ(oregon dark eyed  junco)ಗಂಡು ಮನೆ ಗುಬ್ಬಚ್ಚಿ (male house sparrow) ಹೆಣ್ಣು ಮನೆ ಗುಬ್ಬಚ್ಚಿ (female house sparrow).


ಹತ್ತು ಹದಿನೈದು ವರ್ಷಗಳ ಹಿಂದೆ ಮಕ್ಕಳಿಗೆ,ಸಾಮಾನ್ಯರಿಗೆ ಎಲ್ಲರಿಗೂ ಇವುಗಳ ಬಗ್ಗೆ ತಿಳುವಳಿಕೆ ಇತ್ತು.ಈ ಭೂಮಿಯಲ್ಲಿ ಹಲವಾರು ಜೀವಸಂಕುಲಗಳಿವೆ.ಅವುಗಳ ನಿಖರವಾದ ಮಾಹಿತಿಯನ್ನು  ತಜ್ಞರು ನೀಡುತ್ತಾರೆ.ಆದರೆ ಗುಬ್ಬಿಗಳ ಜೀವನ ಶೈಲಿ,ಮೊಟ್ಟೆ ಇಡುವಿಕೆ,ಕಾವು ಇವುಗಳನ್ನೆಲ್ಲಾ ನಮ್ಮ ಹಿರಿಯರೇ ಹೆಚ್ಚಾಗಿ ತಿಳಿದಿರುತ್ತಾರೆ.ಹೆಣ್ಣು ಗುಬ್ಬಿಗಳು ಒಂದು ವರ್ಷದಲ್ಲಿ ಅನೇಕ ಬಾರಿ ಮೊಟ್ಟೆ ಇಡುತ್ತದೆ.ಇದರ ಕಾಲುಗಳು ತೀರ ತೆಳ್ಳಗಿರುವುದರಿಂದ ಅದು ತನ್ನ ಮೈಭಾರವನ್ನು ಹೊರಲಾಗುವುದಿಲ್ಲ.ಹಾಗಾಗಿಯೇ ಗುಬ್ಬಿಗಳು ನಡೆಯುವುದು ವಿರಳವಾಗಿರುತ್ತದೆ.ಇವುಗಳು ಅತ್ತಿಂದಿತ್ತ ಜಿಗಿದುಕೊಂಡೇ ಹೋಗುತ್ತದೆ ಎಂದು ಹಿರಿಯರು ಹೇಳುತ್ತಿದ್ದರು.


ಗುಬ್ಬಚ್ಚಿಗಳು ಇತ್ತೀಚಿನ ವರದಿಯ ಪ್ರಕಾರ ಅಳಿವಿನ ಅಂಚಿನಲ್ಲಿರುವ ಪಕ್ಷಿಯಾಗಿದೆ.ಇವುಗಳ ಅಳಿವಿಗೆ ಮುಖ್ಯ ಕಾರಣವೇ ನಗರೀಕರಣದ ಹೆಚ್ಚಳ.ಹಿಂದಿನ ಕಾಲದಲ್ಲಿ ಹಳ್ಳಿ ಮನೆಗಳಲ್ಲಿ,ಅದರ ಹುಲ್ಲಿನಿಂದ ಗುಬ್ಬಿಗಳು ಗೂಡುಕಟ್ಟಿ ಜೀವನ ನಡೆಸುತ್ತಿದ್ದವು.ಆದರೆ ಇತ್ತೀಚೆಗೆ ಎಲ್ಲೆಡೆ ಕಾಂಕ್ರೀಟ್ ಗಳಾಗಿರುವುದರಿಂದ ಗುಬ್ಬಿಗಳಿಗೆ ಜೀವನ ನಡೆಸಲು ಕಷ್ಟವಾಗಿದೆ ಎನ್ನಬಹುದು.ಇವುಗಳು ಮನುಷ್ಯರ ಮಧ್ಯೆಯೇ ಜೀವನ ನಡೆಸುತ್ತಿತ್ತು.ಆದರೆ ಮನುಷ್ಯರ ಜೀವನ ಶೈಲಿಯೇ ಇವುಗಳಿಗೆ ಕುತ್ತಾಗಿದೆ.


ಪ್ರತೀ ವರ್ಷ ಮಾರ್ಚ್ 20 ರಂದು ವಿಶ್ವ ಗುಬ್ಬಚ್ಚಿ ದಿನ ಎಂದು ಆಚರಿಸುತ್ತಾರೆ.ಈ ದಿನವನ್ನು 2010 ರಲ್ಲಿ ನೇಚರ್ ಫಾರ್ ಸೊಸೈಟಿ ಫಾರ್ ಇಂಡಿಯಾ ಸಂಸ್ಥೆಯ ನಿರ್ಮಾತೃ ಮೊಹಮ್ಮದ್ ದಿಲ್ವಾರ್ ಪರಿಚಯಿಸಿದರು.ಈ ಎನ್. ಎಫ್.ಎಸ್. ಐ ಯು ಪ್ರತೀ ವರ್ಷ ಗುಬ್ಬಚ್ಚಿ ದಿನವನ್ನು ಪ್ರಪಂಚದಾದ್ಯಂತ ಒಟ್ಟು 50 ರಾಷ್ಟ್ರಗಳಲ್ಲಿ ಆಚರಿಸುತ್ತಿದ್ದಾರೆ.


ಇಂದಿನ ಪೀಳಿಗೆಯವರು ತಾಂತ್ರಿಕ ಬದುಕಿಗೆ ಜೋತುಬಿದ್ದಿದ್ದಾರೆ.ನೆಮ್ಮದಿಯ ಗಣಿಯಾದ ಈ ಪ್ರಕೃತಿಗೆ ಮನುಷ್ಯರೇ ಮುಳ್ಳಾ ಗಿದ್ದಾರೆ.ಟೆರೇಸ್ ಮನೆಗಳು,ಹೊಗೆ,ಕೀಟನಾಶಕಗಳ ಬಳಕೆ,ಅಪಾಯಕಾರಿಯಾದ ಮನುಷ್ಯರ ಜೀವನ ಶೈಲಿ ಇವುಗಳ ಅಳಿವಿಗೆ ಕಾರಣವಾಗಿದೆ.ಗುಬ್ಬಿ ಮತ್ತು ಮನುಷ್ಯರ ಅವಿನಾಭಾವ ಸಂಬಂಧ ಚೂರಾಗಿ ಹೋಗಿವೆ.ಹಾಗೆಯೇ ಆಹಾರದ ಕೊರತೆ ಉಂಟಾಗಿ ಇವುಗಳ ಸಾವಿಗೂ ಕಾರಣವಾಗಿದೆ.


ಗುಬ್ಬಚ್ಚಿಗಳ ಗೂಡು ಅಂಗೈ ಅಗಲದಷ್ಟು,ಇವುಗಳಿಗೆ ಸೂಕ್ತ ವಾಸಸ್ಥಾನ ಹಿಂದಿನ ಕಾಲದ ಮನೆಯಾಗಿತ್ತು.ಹೆಂಚಿನ ಮನೆ,ಹುಲ್ಲಿನ ಮನೆಗಳು ಇವುಗಳಿಗೆ ಹೇಳಿ ಮಾಡಿಸಿದಂತಾಗಿತ್ತು.ಆದರೆ ಆಧುನೀಕರಣದ ಪ್ರಭಾವದಿಂದ ಮೊಬೈಲ್ ಟವರ್ ರೇಡಿಯೇಷನ್,ಟೆರೇಸ್ ಮನೆಗಳು,ಪರಿಸರ ನಾಶ,ಆಧುನಿಕ ಜೀವನ ಶೈಲಿಯಿಂದ ಗುಬ್ಬಿಗಳಿಗೆ  ವಾಸಸ್ಥಾನ ಇರದೇ ಬಿಸಿಲು, ಮಳೆ, ಗಾಳಿಗೆ ತತ್ತರಿಸಿ,ಅಳಿವಿಗೆ ತುತ್ತಾಗಿದೆ.


ಇವುಗಳಿಂದೆಲ್ಲಾ ಗುಬ್ಬಚ್ಚಿಯನ್ನು ಉಳಿಸಲು,ಬೇಸಿಗೆಯ ಸಮಯದಲ್ಲಿ ಎಲ್ಲರ ಮನೆಗಳ ಮುಂದೆ ಶುದ್ಧ ನೀರು ಮತ್ತು ಕಾಳುಗಳನ್ನು ಇಟ್ಟು ಇವುಗಳ ಜೀವ ಸಂಕುಲವನ್ನು ಉಳಿಸಬೇಕು.ಟೆರೇಸ್ ಮನೆಗಳಲ್ಲಿ ಮಾದರಿ ಗೂಡನ್ನು ಇಟ್ಟು ಸಂರಕ್ಷಿಸಲು ಮುಂದಾಗಬೇಕು.ಕೃಷಿಯಲ್ಲಿ ಕೀಟ ನಾಶಕಗಳನ್ನು ಬಳಸದೇ ಹುಳ ಹುಪ್ಪಟೆ ಹೆಚ್ಚು ದೊರೆತರೆ ಆಗ ಗುಬ್ಬಿಗಳು ಜೀವಿಸುತ್ತದೆ.ಬೇಳೆಗಳನ್ನು ಕಾಡುವ  ಕೀಟಗಳಿಗೆ ಜೈವಿಕವಾಗಿ ಹತೋಟಿಗೆ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ.ಇವುಗಳಿಂದೆಲ್ಲಾಗಿ  ಅಳಿವಿನಂಚಿನಲ್ಲಿರುವ  ಗುಬ್ಬಿಗಳನ್ನು ರಕ್ಷಿಸಬಹುದು......



-ಧನ್ಯಶ್ರೀ                                                                                              

                                                                                               

ಪ್ರಥಮ ಪತ್ರಿಕೋದ್ಯಮ ವಿದ್ಯಾರ್ಥಿನಿ

ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ

ಮಹಾವಿದ್ಯಾಲಯ(ಸ್ವಾಯತ್ತ) ನೆಹರು ನಗರ  ಪುತ್ತೂರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top